Advertisement

ನಾನು ಉಡಾಫೆ ರಾಜಕಾರಣಿ ಅಲ್ಲ :ಸುಧಾಕರ್‌

04:28 PM Dec 16, 2020 | Suhan S |

ಚಿಕ್ಕಬಳ್ಳಾಪುರ: ನಾನು ಉಡಾಫೆ ರಾಜಕಾರಣಿಯಲ್ಲ, ಕೊಟ್ಟ ಭರವಸೆ ಈಡೇರಿಸಲು ಆಗದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಹೊರತು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವುದಿಲ್ಲಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

Advertisement

ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ಪ್ರವಾಸ ಕೈಗೊಂಡು ಸರಣಿ ಸಭೆಗಳನ್ನು ನಡೆಸಿರುವ ಸಚಿವರು ತಾಲೂಕಿನ ಅಜ್ಜವಾರ ಮತ್ತು ಹೊಸಹುಡ್ಯಾ ಗ್ರಾಮಗಳಲ್ಲಿ ಸೋಮವಾರ ರಾತ್ರಿಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕ್ಯಾನ್ಸರ್‌ ಬಂದಿದ್ಯಾ?: ಹೆಣ್ಣೂರು-ನಾಗವಾರ ಕೆರೆಗಳ ಕಲುಷಿತ ನೀರು ಶುದ್ಧಿಕರಿಸಿ ತಂದು ಈಭಾಗದ ಕೆರೆಗಳನ್ನು ತುಂಬಿಸುತ್ತೇನೆ ಎಂದು ಹಿಂದೆಹೇಳಿದಾಗ ಅನೇಕರು ಗೇಲಿ ಮಾಡಿದ್ದರು. ಉಡಾಫೆಮಾತು ಆಡುತ್ತಿದ್ದೇನೆ, ನೀರು ತರುವುದು ಅಸಾಧ್ಯ, ಆ ನೀರು ಬಳಕೆ ಮಾಡಿದರೆ ಕ್ಯಾನ್ಸರ್‌ ಬರುತ್ತದೆ. ಮತ ಪಡೆಯಲು ಸುಳ್ಳು ಹೇಳಿತ್ತಿದ್ದಾರೆ ಎಂದೆಲ್ಲಾ ಮಾತನಾಡಿದ್ದರು. ಈಗ ಆಗಿರುವುದಾದರೂ ಏನು? ಕೊಟ್ಟ ಮಾತು ಉಳಿಸಿಕೊಂಡು ಈ ಭಾಗದ ಕೆರೆಗಳನ್ನು ತುಂಬಿಸುತ್ತಿದ್ದೇನೆ. ಕ್ಯಾನ್ಸರ್‌ ಬಂದಿದ್ಯಾ? ಎಂದು ಪ್ರಶ್ನೆ ಮಾಡಿದರು.

ಅವಕಾಶ ನೀಡುವ ಭರವಸೆ: ಹೊಸಹುಡ್ಯಾ ಮತ್ತು ಅಜ್ವರಾ ಕಾರ್ಯಕರ್ತರ ಉತ್ಸಾಹ ಗಮನಿಸಿದರೆ ಈಗಾ ಗಲೇ ನಾವು ಗ್ರಾಪಂ ಚುನಾವಣೆ ಗೆದ್ದಾಗಿದೆ ಎಂಬ ಭಾವನೆ ಮೂಡಿದೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ನಿಂದದೊಡ್ಡ ಸಂಖ್ಯೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಬಿಜೆ ಪಿಯ ತತ್ವ, ಸಿದ್ಧಾಂತಗಳನ್ನು ಒಪ್ಪಿ ಬರುವ ಎಲ್ಲರಿಗೂ ಸ್ವಾಗತವಿದೆ. ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುವ ಎಲ್ಲರಿಗೂ ಅಕಾರದ ಅವಕಾಶ ನೀಡಲಾಗುವುದು.ಮೊದಲು ನಿಮ್ಮ ನಿಮ್ಮ ಬೂತುಗಳಲ್ಲಿ ಬಹುಮತದೊರಕಿಸಿಕೊಡುವಕಡೆ ಗಮನಹರಿಸಬೇಕು. ಯಾರೂ ಹೆಚ್ಚಿನ ಮತ ದೊರಕಿಸಿಕೊಡುತ್ತಾರೋ ಅವರೇನಿಜವಾದ ನಾಯಕ. ಅದನ್ನು ಗಮನಿಸಿ ಮುಂದೆ ಅವರಿಗೆ ಅವಕಾಶಗಳನ್ನು ದೊರಿಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ತೊರೆದು ಅನೇಕ ಮುಖಂಡರು ತಮ್ಮ ಹಿಂಬಾಲಕರಜತೆ ಬಿಜೆಪಿ ಸೇರ್ಪಡೆಯಾದರು. ಅಜ್ಜವಾರದಆಂಜನಪ್ಪ, ಎಸ್‌ಎನ್‌. ವೆಂಕಟೇಶ್‌, ಎನ್‌. ಶಿವಪ್ಪ,ಎಂ.ವಿ. ಮುನಿರಾಜು, ನರಸಿಂಹ, ಪಿಳ್ಳೇಗೌಡ, ರಾಜಪ್ಪ, ದಾಸರಿ ನಾರಾಯಣಪ್ಪ, ವಿ.ಕೃಷ್ಣಪ್ಪ, ವೆಂಕಟೇಶ್‌(ಕಾಂಗ್ರೆಸ್‌)ಮತ್ತು ಮುನಿ ನಾರಾಯಣಪ್ಪ (ಜೆಡಿಎಸ್‌), ನಾಯನಹಳ್ಳಿ:ಶಿವಪ್ಪ, ಗಂಗರಾಜು,ಮುನಿಯಪ್ಪ (ಕಾಂಗ್ರೆಸ್‌), ನವೀನ್‌ಕುಮಾರ್‌, ವೆಂಕಟೇಶ್‌, ಕೃಷ್ಣಮೂರ್ತಿ, ರೆಡ್ಡಿ, ಮುನಿಕೃಷ್ಣಪ್ಪ ಮತ್ತು ಬಸವರಾಜ್‌ (ಜೆಡಿಎಸ್‌) ಅವರು ಸಚಿವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

Advertisement

ರಾಜ್ಯ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆವಿನಾಗರಾಜ್‌, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ ಇತರರು ಹಾಜರಿದ್ದರು.

ಸಣ್ಣ ಮಕ್ಕಳ ಚಿತ್ರ ಇನ್ನೂ ಕಣ್ಣಿನಲ್ಲಿದೆ :  ಎಚ್‌.ಎನ್‌.ವ್ಯಾಲಿ ಯೋಜನೆಯಿಂದ ಈ ಭಾಗದ ರೈತರ ಬದುಕು ಹಸನಾಗುತ್ತಿದೆ.ಕೆರೆಗಳಲ್ಲಿ ಮೀನುಗಾರಿಕೆ ಅದ್ಭುತವಾಗಿ ನಡೆಯುತ್ತಿದೆ. ಒಂದು ವೇಳೆಕೆರೆಗೆ ಹರಿದಿರುವ ನೀರು ವಿಷಕಾರಿಯಾಗಿದ್ದಿದ್ದರೆ ಮೀನು ಬದುಕುತ್ತಿತ್ತೇ? ಎಂದು ಪ್ರಶ್ನಿಸಿದ ಸಚಿವರು, ಇದರಿಂದ ಈ ಭಾಗದ ಅಂತರ್ಜಲ ಮಟ್ಟ ಸುಧಾರಣೆಯಾಗಿದೆ. ಮುಂದೆ ಪರಿಸ್ಥಿತಿ ಇನ್ನಷ್ಟು ಸುಧಾರಿಸಲಿದೆ ಎಂದರು. ಈ ಭಾಗದಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿತ್ತು. ಸಾಲ ಮಾಡಿ ಕೊಳವೆ ಬಾವಿ ಕೊರೆಸಿ ನೀರು ಬರದಿದ್ದಾಗ ರೈತರು ಆತ್ಮಹತ್ಯೆ ಮಾಡಿಕೊಂಡ ಅನೇಕ ನಿದರ್ಶನಗಳಿವೆ. ಒಮ್ಮೆ ನಾನುಕೂಡ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೆ, ಆಗ ಆ ಕುಟುಂಬದ ಸಣ್ಣ ಮಕ್ಕಳ ಚಿತ್ರ ಈಗಲೂ ನನ್ನ ಕಣ್ಣಿನಲ್ಲಿ ನಿಂತು ಬಿಟ್ಟಿದೆ. ಅದೇ ದಿನ ಈ ಭಾಗಕ್ಕೆ ಹೇಗಾದರೂ ನೀರು ತರಲೇಬೇಕು ಎಂದು ನಿಶ್ಚಯಿಸಿದ್ದು, ಭರವಸೆ ಈಡೇರಿಸಿದ ತೃಪ್ತಿ ನನಗಿದೆ ಎಂದು ಸಚಿವ ಡಾ. ಸುಧಾಕರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next