Advertisement

ಬಿಜೆಪಿ ಅಭ್ಯರ್ಥಿ ರವಿಶಂಕರ್‌ ಗೆಲುವು ಖಚಿತ

04:22 PM May 15, 2022 | Team Udayavani |

ಎಚ್‌.ಡಿ.ಕೋಟೆ: ಕಳೆದ ಬಾರಿ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದ ಪ್ರಸ್ತುತ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವಿಶಂಕರ್‌ ಗೆಲುವು ಖಚಿತ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್‌ ಭವಿಷ್ಯ ನುಡಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ತನ್ನದೇ ಆದ ತತ್ವ ಸಿದ್ಧಾಂತ ಇದೆ. ಅದರಂ ತೆಯೇ ಬಿಜೆಪಿ ಪಕ್ಷದ ಕೇಂದ್ರ ಮತ್ತು ರಾಜ್ಯದ ವರಿಷ್ಠರ ತೀರ್ಮಾನದಂತೆ ಕೋಟೆ ತಾಲೂಕಿನ ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ರವಿಶಂಕರ್‌ ಕಣದಲ್ಲಿದ್ದಾರೆ ಎಂದರು.

ರವಿಶಂಕರ್‌ ಆಯ್ಕೆಯಾಗಬೇಕು: ರವಿಶಂಕರ್‌ ಹೋರಾಟದ ಹಾದಿಯಿಂದ ಬಂದವರಾಗಿದ್ದು, ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ತಾಲೂಕಿನ ಪದವೀಧರ ಮತದಾರರ ಬಿಜೆಪಿ ಅಭ್ಯರ್ಥಿ ರವಿಶಂಕರ್‌ ಅವರಿಗೆ ಮೊದಲ ಪ್ರಾಶಸ್ತ್ಯ ಮತ ನೀಡುವಂತೆ ಮನವಿ ಮಾಡಿಕೊಂಡ ಅವರು ಈಗಾಗಲೇ ಬಹುತೇಕ ಎಲ್ಲಾ ಕಡೆ ಪ್ರವಾಸದ ಜೊತೆಗೆ ಸಮೀಕ್ಷೆ ನಡೆಸಿದ್ದು ಪದವೀಧರ ಮತದಾರರ ಮನದಲ್ಲಿ ರವಿಶಂಕರ್‌ ಆಯ್ಕೆಯಾಗಬೇಕು ಅನ್ನುವ ಹಂಬಲ ಇದೆ ಎಂದು ತಿಳಿಸಿದರು.

ಶಿಕ್ಷಣ ಸಚಿವರಲ್ಲಿ ಮನವಿ: ಈಗಾಗಲೇ ಪದವೀಧರರ ಸಮಸ್ಯೆ ಕುರಿತು ಶಿಕ್ಷಣ ಸಚಿರವಲ್ಲಿ ಮನವಿ ಮಾಡಲಾಗಿದೆ. ಹಂತ ಹಂತವಾಗಿ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಭೇಟಿ ನೀಡಿ ಪದವೀಧರ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಲಾಗುತ್ತದೆ. ಕಳೆದ 6 ವರ್ಷಗಳ ಹಿಂದಿನಿಂದ ರವಿಶಂಕರ್‌ ಪಕ್ಷದ ಸಂಘಟನೆಗೆ ಶ್ರಮಿಸಿದ ಹಿನ್ನೆಲೆಯಲ್ಲಿ ಅವರ ಸೇವೆಯನ್ನು ಗುರುತಿಸಿ 4 ಜಿಲ್ಲೆಯ ಪ್ರಮುಖರು, ಲೋಕ ಸಭೆ ಸದಸ್ಯರು ಒಕ್ಕೊರಲಿನಿಂದ ರವಿಶಂಕರ್‌ ಹೆಸರು ಪ್ರಸ್ತಾವನೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕೇಂದ್ರ ರಾಜ್ಯ ರವಿಶಂಕರ್‌ ಆಯ್ಕೆ ಮಾಡಿದೆ. ಈಗಾಗಲೇ ಪಕ್ಷದ ಕಾರ್ಯಕರ್ತರು ಹಳ್ಳಿಗಳಿಂದ ಪದವೀಧರರನ್ನು ಗುರುತಿಸಿ 60 ಸಾವಿರಕ್ಕೂ ಮೇಲ್ಪಟ್ಟು ಸದಸ್ಯತ್ವ ನೋಂದಣಿ ಮಾಡಲಾಗಿದೆ. ವಿಧಾನ ಪರಿಷತ್‌ನಲ್ಲಿ ಪದ ವೀಧರರ ಸಮಸ್ಯೆಗಳನ್ನು ಜಾರಿಗೆ ತರುವ ಕೆಲಸ ಮಾಡಲು ರವಿಶಂಕರ್‌ ಪ್ರಮಾಣಿಕವಾಗಿ ಶ್ರಮಿ ಸುತ್ತಾರೆ. ಅವರಿಗೆ ಎಲ್ಲಾ ಪದವೀಧರರು ಮತ ನೀಡಬೇಕೆಂದು ಮನವಿ ಮಾಡಿಕೊಂಡರು.

ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಮಂಗಳ ಸೋಮಶೇಖರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತಾಪ್‌, ತಾಲೂಕು ಬಿಜೆಪಿ ಅಧ್ಯಕ್ಷ ಗುರುಸ್ವಾಮಿ, ಮೊತ್ತ ಬಸವರಾಜಪ್ಪ, ಕೃಷ್ಣಪ್ಪಗೌಡ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next