Advertisement

ಮುಖ್ಯಮಂತ್ರಿ ಆಗುವ ಅರ್ಹತೆವುಳ್ಳ ವ್ಯಕ್ತಿ ಸುಧಾಕರ್‌: ಸಚಿವ ಎಸ್‌.ಟಿ.ಸೋಮಶೇಖರ್‌

03:55 PM Jan 10, 2023 | Team Udayavani |

ಚಿಕ್ಕಬಳ್ಳಾಪುರ: ಮುಂದಿನ ಒಂದು ದಶಕದಲ್ಲಿ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಹೊಂದಿ ರುವ ದೂರದೃಷ್ಟಿಯ ರಾಜಕಾರಣಿ ಡಾ.ಕೆ.ಸುಧಾಕರ್‌ ಆಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಭವಿಷ್ಯ ಅವರಿಗಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಭವಿಷ್ಯ ನುಡಿದರು.

Advertisement

ಚಿಕ್ಕಬಳ್ಳಾಪುರ ಉತ್ಸವದ 3ನೇ ದಿನದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಘಟಾ ನುಘಟಿಗಳನ್ನು ಎದುರು ಹಾಕಿಕೊಂಡು ಅವರು ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ತಂದರು, ಅನೇಕರನ್ನು ವಿರೋಧ ಮಾಡಿಕೊಂಡು ಮನೆಗಳನ್ನು ಕೊಟ್ಟಿದ್ದಾರೆ, ಅದೇ ರೀತಿಯಲ್ಲಿ ಘಟಾನುಘಟಿಗಳನ್ನು ಎದುರು ಹಾಕಿಕೊಂಡು ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್‌ ಪ್ರತ್ಯೇಕಿಸಲು ಶ್ರಮಿಸುತ್ತಿದ್ದಾರೆ ಎಂದರು.

ಚಿಕ್ಕಬಳ್ಳಾಪುರವನ್ನು ಮಾದರಿ ಜಿಲ್ಲೆಯಾಗಿ ಮಾಡಲು ಸುಧಾಕರ್‌ ಶ್ರಮಿಸುತ್ತಿದ್ದಾರೆ, ಇವರು ಬದ್ಧತೆ ಇರುವ ಸಚಿವರಾಗಿದ್ದು, ನಿಮ್ಮ ಋಣ ತೀರಿಸಲು ಕಷ್ಟಪಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸುಧಾಕರ್‌ ಅವರನ್ನು ಈ ರಾಜ್ಯದ ಜನರು ಸ್ಮನರಿಸುವಂತೆ ಮಾಡಿದ್ದಾರೆ ಎಂದರು.

ಬಿ.ಎಸ್‌. ಯಡಿಯೂರಪ್ಪ ಅವರು ಕೋವಿಡ್‌ ಸಂದರ್ಭದಲ್ಲಿ ಸಂಪೂರ್ಣ ಸಹಕಾರ ನೀಡುವ ಮೂಲಕ ಧೈರ್ಯ ತುಂಬಿದರು. ಕೋವಿಡ್‌ ಸಂದರ್ಭದಲ್ಲಿ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದ್ದರು. ವೈದ್ಯರು, ದಾದಿಯರ ನೇಮಕ, ಆಸ್ಪತ್ರೆಗಳ ನಿರ್ಮಾಣ, ಉತ್ತಮ ದರ್ಜೆಯ ಆಸ್ಪತ್ರೆಗಳ ನಿರ್ಮಾಣಕ್ಕೆ ಅವರು ಕಂಕಣ ಬದ್ಧರಾಗಿದ್ದಾರೆ ಎಂದರು. ಸರಳ, ಸಜ್ಜನಿಕೆ, ಬದ್ಧತೆಯ ರಾಜಕಾರಣಿಯನ್ನು ಪಡೆದಿದ್ದೀರಿ, ಜಿಲ್ಲೆಗೆ ನೀರು ತರುವ ವಿಚಾರದಲ್ಲಿ ಪ್ರತಿ ಸಂಪುಟ ಸಭೆಯಲ್ಲಿಯೂ ಸುಧಾಕರ್‌ ಅವರು ಜಗಳ ಮಾಡಿದ್ದಾರೆ. ಮುಖ್ಯಮಂತ್ರಿಗಳ ಮನವೊಲಿಸಿ ಅನೇಕ ಯೋಜನೆಗಳನ್ನು ಚಿಕ್ಕಬಳ್ಳಾಪುರಕ್ಕೆ ತಂದ ಛಲಗಾರ. ಚಿಕ್ಕಬಳ್ಳಾಪುರಕ್ಕೆ ಮತ್ತು ಆರೋಗ್ಯ ಇಲಾಖೆಗೆ ಸುಧಾಕರ್‌ ಅವರು ಚಾಣಕ್ಯರಾಗಿದ್ದು, ಅವರನ್ನು ಉಳಿಸಿಕೊಂಡರೆ, ಚಿಕ್ಕಬಳ್ಳಾಪುರವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಿ, ದೇಶದಲ್ಲಿಯೇ ಖ್ಯಾತಿಗೆ ತರಲಿದ್ದಾರೆ ಎಂದು ಬಣ್ಣಿಸಿದರು.

ಸಹಕಾರ ಕ್ಷೇತ್ರಕ್ಕೆ ಹೊಸ ಸ್ಪರ್ಶ: 25 ವರ್ಷ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಎಸ್‌.ಟಿ.ಸೋಮಶೇಖರ್‌, ರಾಜ್ಯದ ಸಹಕಾರ ಕ್ಷೇತ್ರಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

Advertisement

ಸೋಮಶೇಖರ್‌ ಅವರು ಅನುಭವದಲ್ಲಿ ಹಿರಿಯರಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷವಾದರೂ ಕೋಲಾರಕ್ಕೆ ಸಮಾನವಾಗಿ ಹಾಲು ಉತ್ಪಾದನೆ ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಪ್ರತ್ಯೇಕ ಒಕ್ಕೂಟ ಬೇಡಿಕೆ ಇಟ್ಟಾಗ, ಎಷ್ಟೇ ಒತ್ತಡ ಬಂದರೂ ಜಿಲ್ಲೆಗೆ ಅವರ ಮಾರ್ಗದರ್ಶನ, ಸಲಹೆ ಪಡೆದು ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವುದಾಗಿ ಸಚಿವರು ಘೋಷಿಸಿದರು. ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ರೀತಿಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿ, ಇಲಾಖೆಗೆ ಹೊಸ ಸ್ಪರ್ಶವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಅವರಿಗೆ ಉತ್ತಮ ಭವಿಷ್ಯ ಸಿಗಲಿ ಎಂದು ಶ್ರೀಭೋಗನಂದೀಶ್ವರ ಸ್ವಾಮಿಯ ಬಳಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದ ಸಚಿವರು ಚಿಕ್ಕಬಳ್ಳಾಪುರ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ ಆಹಾರ ಮೇಳದಲ್ಲಿ ಜನಸಾಗರವೇ ಹರಿದು ಬಂದಿದೆ. ನಿಮ್ಮ ಭಾಗವಹಿಸಿಕೆಯಿಂದ ಹೊಸ ಮೆರುಗು ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next