Advertisement
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಸಂಬಂಧ ಕೃಷಿ ಮಾರುಕಟ್ಟೆ ಇಲಾಖೆ ಅಧಿಕಾರಿ ಸಂಗೀತಾ, ಇಲಾಖೆ ಪ್ರಗತಿ ಸಂಬಂಧ ಮಾಹಿತಿ ನೀಡುವಾಗ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಜಿಲ್ಲೆಯಲ್ಲಿರುವ ಎಪಿಎಂಸಿಗಳು ಸಂಗ್ರಹಿಸುತ್ತಿದ್ದ ಸೆಸ್ (ಸುಂಕ) ಶೇ.50 ರಷ್ಟು ಕಡಿಮೆಯಾಗಿದ್ದು, ಎಪಿಎಂಸಿಗಳ ನಿರ್ವಹಣೆಯೇ ಕಷ್ಟವಾಗುತ್ತಿದೆ.
Related Articles
Advertisement
ಕಂದಾಯ ಕಟ್ಟಿಸಿ, ಸೌಲಭ್ಯ ಏಕೆ ನೀಡುತ್ತಿಲ್ಲ: ನಗರದ ಹತ್ತಕ್ಕೂ ಹೆಚ್ಚು ಬಡಾವಣೆಗಳು ಮುಡಾ ವ್ಯಾಪ್ತಿಯ ಲ್ಲಿದ್ದು, ಕಂದಾಯವನ್ನು ನೀವೇ ಕಟ್ಟಿಸಿಕೊಳ್ಳುತ್ತಿದ್ದೀರಿ. ಆದರೆ, ಕುಡಿಯುವ ನೀರು ಮತ್ತು ಬೀದಿ ದೀಪ ಸೌಲಭ್ಯವನ್ನು ನೀಡುತ್ತಿಲ್ಲ. ಕೇಳಿದರೆ ಪಾಲಿಕೆಯತ್ತ ಬೊಟ್ಟು ಮಾಡುತ್ತೀರಿ ಎಂದು ಮುಡಾ ಆಯುಕ್ತರ ವಿರುದ್ಧ ಶಾಸಕ ಜಿ.ಟಿ. ದೇವೇಗೌಡ ಹರಿಹಾಯ್ದರು. ಸ್ಥಳೀಯರಿಗೆ ಟೆಂಡರ್ ನೀಡಿ: ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಊಟ ಹಾಗೂ ಸ್ವತ್ಛತೆಗೆ ಟೆಂಡರ್ ನೀಡಲಾಗುತ್ತಿದೆ. ಆದರೆ, ಬಹಳಷ್ಟು ಕಡೆ ಹೊರ ರಾಜ್ಯ ಮತ್ತು ಜಿಲ್ಲೆಯವರು ಟೆಂಡರ್ ಪಡೆದು, ಬಳಿಕ ಕಡಿಮೆ ಬೆಲೆಗೆ ಸ್ಥಳೀಯರಿಗೆ ಉಪ ಟೆಂಡರ್ ನೀಡುತ್ತಿದ್ದಾರೆ. ಇದರಿಂದ ರೋಗಿಗಳಿಗೆ ಗುಣ ಮಟ್ಟದ ಆಹಾರ ಸಿಗುತ್ತಿಲ್ಲ. ಅಲ್ಲದೇ ಸ್ವತ್ಛತಾ ಸಿಬ್ಬಂ ದಿಗೆ ಸಮರ್ಪಕವಾಗಿ ಸಂಬಳ ಪಾವತಿಸುತ್ತಿಲ್ಲ. ಆದ್ದ ರಿಂದ ಸ್ಥಳೀಯರಿಗೆ ಟೆಂಡರ್ ನೀಡುವಂತೆ ಶಾಸಕ ಎಚ್. ಪಿ.ಮಂಜುನಾಥ್ ಆರೋಗ್ಯಾಧಿಕಾರಿಗೆ ಹೇಳಿದರು.
20 ಕೋಟಿ ಸೆಸ್ ಬಾಕಿ: ಮಹಾನಗರ ಪಾಲಿಕೆಗೆ ತೆರಿಗೆದಾರರಿಂದ ಸಂಗ್ರಹಿಸುವ ಗ್ರಂಥಾಲಯ ಸುಂಕವನ್ನು ಗ್ರಂಥಾಲಯ ಇಲಾಖೆ ಪಾವತಿಸಿಲ್ಲ. ಸುಮಾರು 20 ಕೋಟಿ ರೂ. ಸೆಸ್‌ನ್ನು (ಕರ) ಮೈಸೂರು ಮಹಾನಗರ ಪಾಲಿಕೆಯಿಂದ ನಮಗೆ ಬರಬೇಕಿದೆ ಎಂದು ಸಾರ್ವಜನಿಕ ಗ್ರಂಥಾಲಯ ಅಧಿಕಾರಿ ಸಭೆಯ ಗಮನಕ್ಕೆ ತಂದರು. ಇದಕ್ಕೆ ಆಯುಕ್ತರ ಬಳಿ ಉತ್ತರ ಕೇಳಿದ ಸಚಿವರು, ಶೀಘ್ರವೇ ಗ್ರಂಥಾಲಯ ಸೆಸ್ ಪಾವತಿಸಲು ಕ್ರಮವಹಿಸಿ ಎಂದು ತಾಕೀತು ಮಾಡಿದರು.
ಇದನ್ನೂ ಓದಿ :ಮದ್ಯ ಖಜಾನೆ ಧಣಿ,ಮನೆಯನ್ನೇ ಕಚೇರಿ ಮಾಡಿದ್ದ BBMP ಅಧಿಕಾರಿ ದೇವೇಂದ್ರಪ್ಪ ಸೇವೆಯಿಂದ ಅಮಾನತು!
ಸಭೆಯಲ್ಲಿ ವಿವಿಧ ಇಲಾಖೆಗಳ ತ್ತೈಮಾಸಿಕ ಪ್ರಗತಿ ಹಾಗೂ ಅನುಪಾಲನ ವರದಿಯನ್ನು ಸಭೆಯ ಗಮನಕ್ಕೆ ತಂದರು. ಸಫಾಯಿ ಮಿತ್ರ ಸುರಕ್ಷ: ಇದಕ್ಕೂ ಮುನ್ನಾ ಮೈಸೂರು ಮಹಾನಗರ ಪಾಲಿಕೆ ರೂಪಿಸಿರುವ ಒಳ ಚರಂಡಿ ದೂರುಗಳ ಸಹಾಯವಾಣಿಯಾದ ಸಫಾಯಿ ಮಿತ್ರ ಸುರಕ್ಷ ಸವಾಲು ದೂರವಾಣಿ ಸಂಖ್ಯೆ 14420ಯನ್ನು ಸಚಿವರು ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಬಿಡುಡೆ ಮಾಡಿದರು. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.
ಸಭೆಯಲ್ಲಿ ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಅಶ್ವಿನ್ ಕುಮಾರ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಪಂ ಸಿಇಒ ಪರಮೇಶ್, ಎಸ್ಪಿ ರಿಷ್ಯಂತ್, ಡಿಸಿಪಿ ಗೀತಾ ಪ್ರಸನ್ನ ಇತರರಿದ್ದರು.