Advertisement

ಸಹಕಾರ ಕ್ಷೇತ್ರದಲ್ಲಿ ವಿಶ್ವಾಸ ಮುಖ್ಯ, ಅಸಹಕಾರ ಸಲ್ಲ; ಸಚಿವ ಎಸ್ ಟಿ ಸೋಮಶೇಖರ್

05:29 PM Jun 30, 2020 | keerthan |

ಬೆಂಗಳೂರು: ಸಹಕಾರ ಕ್ಷೇತ್ರ ಎಂಬುದು ಪರಸ್ಪರ ವಿಶ್ವಾಸದ ಮೇಲೆ ನಡೆಯುವುದಾಗಿದೆ. ಇಲ್ಲಿ ಅಸಹಕಾರ ಇರಬಾರದು. ಸಂಸ್ಥೆ ಇದ್ದರೆ ನಾವು ಅನ್ನುವುದನ್ನು ತಿಳಿದುಕೊಂಡಿರಬೇಕು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಬೇಕಾಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

Advertisement

ಚಾಮರಾಜಪೇಟೆಯಲ್ಲಿರುವ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಹಕರ ಮಹಾಮಂಡಳಿ ಎಂದರೆ ಜಿ.ಪಿ.ಪಾಟೀಲ್, ಹೌಸಿಂಗ್ ಫೆಡರೇಷನ್ ಎಂದರೆ ನಾನು ಎಂಬ ನಿಟ್ಟಿನಲ್ಲಿ 25-30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದೇವೆ. ಈಗ ನನಗೆ ಸಹಕಾರ ಕ್ಷೇತ್ರದಲ್ಲಿ ಸಚಿವನಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು, ಒಳ್ಳೆಯ ಕೆಲಸ ಮಾಡಲು ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.

ಆರ್ ಬಿ ಐ ವ್ಯಾಪ್ತಿಗೆ ಸಹಕಾರ ಬ್ಯಾಂಕ್; ಉತ್ತಮ ಕ್ರಮ

ಸಹಕಾರ ವಲಯದ ಎಲ್ಲ ಬ್ಯಾಂಕ್ ಗಳನ್ನು ಆರ್ ಬಿ ಐ ಅಡಿ ತಂದಿರುವ ಕೇಂದ್ರದ ಕ್ರಮ ಒಳ್ಳೆಯದಾಗಿದೆ. ಇದರಿಂದ ಯಾವುದೇ ಅಕ್ರಮಗಳು ನಡೆಯುವುದಿಲ್ಲ. ಮೊದಲಿನಿಂದಲೂ ಆರ್ ಬಿ ಐ ವ್ಯಾಪ್ತಿಗೆ ಒಳಪಟ್ಟಿದ್ದರೂ ಈಗ ಆಡಿಟ್ ಸೇರಿದಂತೆ ಎಲ್ಲವೂ ಅದರ ಅಡಿಯಲ್ಲೇ ಆಗಲಿದೆ ಎಂದು ಸಚುವರು ತಿಳಿಸಿದರು.

ಎಲ್ಲರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದೇನೆ. ಮುಂದೂ ಸಹ ಇದನ್ನು ಮುಂದುವರಿಸಿಕೊಂಡು ಹೋಗಲಿದ್ದೇನೆ. ಅಧಿಕಾರಿಗಳು ಸಹ ಅಂದು ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ನನಗೆ ಸಹಕಾರ ವಲಯದಲ್ಲಿ ಹಲವಾರು ರೀತಿಯ ತನಿಖೆಯನ್ನು ಮಾಡಿಸುವ ಮೂಲಕ ಮಾನಸಿಕ ಹಿಂಸೆ ಮಾಡಿದರು. ಆದರೆ, ನಾವು ಪಾರದರ್ಶಕವಾಗಿದ್ದರಿಂದ ಏನೂ ಮಾಡಲಾಗಲಿಲ್ಲ. ಈ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತವರು ಅಧಿಕಾರಿ ವರ್ಗದವರು ಎಂದು ಸಚಿವರು ಸ್ಮರಿಸಿದರು.

Advertisement

ಸಹಕಾರ ಇಲಾಖೆಯಿಂದ 53 ಕೋಟಿ ರೂ.

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಸಹಕಾರ ಇಲಾಖೆಯಿಂದ 25 ಕೋಟಿ ರೂಪಾಯಿ ಸಂಗ್ರಹಿಸಿ ಕೊಡಬಹುದೇ ಎಂದು ಮುಖ್ಯಮಂತ್ರಿಗಳ ಬಳಿ ಕೇಳಿಕೊಂಡಾಗ ಅವರು ಖುಷಿಯಿಂದ ಒಪ್ಪಿಗೆ ಸೂಚಿಸಿದರು. ಇದರ ಮೊದಲ ಭಾಗವಾಗಿ 23 ಕೋಟಿ ರೂ.ವನ್ನು ಕೊಟ್ಟಿದ್ದೇನೆ. ಬಳಿಕ ಸಹಕಾರ ಇಲಾಖೆಯಿಂದ ಒಟ್ಟಾರೆಯಾಗಿ 53 ಕೋಟಿ ರೂಪಾಯಿಯನ್ನು ಸಂಗ್ರಹಿಸಿಕೊಟ್ಟಂತಾಗಿದೆ. ಇದೇ ರೀತಿ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿಯಂತೆ ತಗುಲುವ 12.75 ಕೋಟಿ ರೂಪಾಯಿಯನ್ನೂ ಸಹ ಇಲಾಖೆ ವತಿಯಿಂದ ಭರಿಸಲಾಗಿದೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next