Advertisement

Karnataka ಸಂಭ್ರಮ-50 ಕನ್ನಡ ರಥ ಮೆರವಣಿಗೆಗೆ ಸಚಿವ ಶರಣಪ್ರಕಾಶ ಪಾಟೀಲ್ ಚಾಲನೆ

03:25 PM Dec 30, 2023 | Team Udayavani |

ಸಿಂಧನೂರು: ಸಿಂಧನೂರಿನಲ್ಲಿ ಕರ್ನಾಟಕ ಸಂಭ್ರಮ-50ರ ಪ್ರಯುಕ್ತ ಕನ್ನಡ ರಥ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಶನಿವಾರ ಚಾಲನೆ ನೀಡಿದರು.

Advertisement

ಕ್ಷೇತ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ವಿವಿಧ ಇಲಾಖೆಗಳ ಸಚಿವರು ಬರುವ ಹಿನ್ನಲೆಯಲ್ಲಿ ಸ್ವಾಗತಕ್ಕಾಗಿ ಬೃಹತ್ ಮೆರವಣಿಗ ಹಮ್ಮಿಕೊಳ್ಳಲಾಗಿತ್ತು.

ಮಹಾತ್ಮ ಗಾಂಧಿ ವೃತ್ತದಲ್ಲಿ ಗಾಂಧಿಜಿಯವರ ಪ್ರತಿಮೆಗೆ  ಹೂಮಾಲೆ ಹಾಕುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಕನ್ನಡ ಧ್ವಜದೊಂದಿಗೆ ಆಗಮಿಸಿದ್ದು ಮೆರವಣಿಗೆ ಕಳೆಕಟ್ಟಿತ್ತು. ಕನ್ನಡ ರಥದಲ್ಲಿ ಕನ್ನಡ ನಾಡಿನ ಸಾಹಿತಿಗಳ, ಕಲಾವಿದರ ನೆನಪು, ಹಂಪೆಯ ಐತಿಹಾಸಿಕ ಕಲ್ಲಿನ ರಥ ಸ್ಮಾರಕಗಳ ನೆನಪನ್ನು ಮಾಡಿದ್ದು ವಿಶೇಷವಾಗಿತ್ತು.

Advertisement

ಮೆರವಣಿಗೆಯಲ್ಲಿ ಕೀಲು ಕುದುರೆ ಬೊಂಬೆಗಳ ನೃತ್ಯ, ವೀರಗಾಸೆ, ಕಣಿವಾದನಾ, ಕೋಳಿ ಕುಣಿತ, ಮಹಿಳಾ ತಂಡಗಳ ಡೊಳ್ಳು ನೃತ್ಯ, ನಂದಿ ಧ್ವಜ, ಹಲಗೆ ಕುಣಿತ, 501 ಪೂರ್ಣ ಕುಂಭ ಹೊತ್ತ ಮಹಿಳೆಯರು ಆಗಮಿಸಿದ್ದರು. ಸುಮಾರು 10 ಸಾವಿರಕ್ಕೂ ಅಧಿಕ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು ನೋಡುಗರ ಕಣ್ಮನಸೆಳೆಯಿತು.

ಈ ವೇಳೆ ಶಾಸಕರಾದ ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರವಿಹಾಳ, ರಾಘವೇಂದ್ರ ಹಿಟ್ನಾಳ, ಕೆಪಿಸಿಸಿ ಕಾರ್ಯದರ್ಶಿಗಳಾದ ವಸಂತಕುಮಾರ, ಮಲ್ಲಿಕಾರ್ಜುನ ಯದ್ದಲದಿನ್ನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next