Advertisement

ಜನವರಿ 12ರಂದು ರಾಜ್ಯದ 5ನೇ ಗ್ಯಾರಂಟಿ ಯೋಜನೆ ‘ಯುವನಿಧಿ’ ಚಾಲನೆ: ಶರಣ ಪ್ರಕಾಶ್ ಪಾಟೀಲ್

12:20 PM Jan 03, 2024 | Team Udayavani |

ಶಿವಮೊಗ್ಗ: ಇದೆ ಬರುವ ಜನವರಿ 12ರಂದು ರಾಜ್ಯ ಸರಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿಗೆ ಚಾಲನೆ ನೀಡಲಿದ್ದೇವೆ ಎಂದು ವೈದ್ಯಕೀಯ ಮತ್ತು ಕೌಶ್ಯಲಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿಕೆ ನೀಡಿದ್ದಾರೆ.

Advertisement

ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಅವರು ರಾಜ್ಯದ ಐದನೇ ಗ್ಯಾರಂಟಿ ಯೋಜನೆಯಾದ ‘ಯುವನಿಧಿ’ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು. ಇದಕ್ಕಾಗಿ ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಸ್ಥಳ ಪರಿಶೀಲನೆ ಮಾಡಿದ್ದೇವೆ ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಯುವಕರು ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12ರಂದು ಯೋಜನೆಗೆ ಚಾಲನೆ ನೀಡಲಾಗುವುದು ಈ ಕುರಿತು ಸ್ಥಳ ಪರಿಶೀಲನೆ ನಡೆಸಲು ಸಚಿವರಾದ ಮಧು ಬಂಗಾರಪ್ಪ, ಎಂಸಿ ಸುಧಾಕರ್, ಶಾಸಕರಾದ ಬೇಳೂರು ಗೋಪಾಲಕೃಷ್ಣ ಬಂದಿದ್ದೇವೆ. ಸಚಿವರಾದ ಮಧು ಬಂಗಾರಪ್ಪ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿದ್ದಾರೆ ಎಂದು ಹೇಳಿದರು.

ಮಂಗಳವಾರದವರೆಗೆ ಸುಮಾರು 25 ಸಾವಿರ ಮಂದಿ ನೊಂದಣಿ ಮಾಡಿದ್ದು, ಇನ್ನೂ ಮುಂದುವರೆಯಲಿದೆ ಎಂದು ಹೇಳಿದರು ಅಲ್ಲದೆ ಯೋಜನೆಯ ಚಾಲನೆಯ ದಿನದಂದೇ ಡಿಪ್ಲೊಮಾ ಹಾಗೂ ಪದವೀಧರರಿಗೆ ನೇರವಾಗಿ ಹಣ ಹಾಕುತ್ತೆವೆ ಎಂದು ಹೇಳಿದರು.

ಕೋವಿಡ್ ಸಭೆ:
ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಸಭೆ ಕೂಡ ಮಾಡಿದ್ದೇವೆ ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ 22 ಮೆಡಿಕಲ್ ಕಾಲೇಜು ಹಾಗೂ 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸೂಚನೆ ನೀಡಿದ್ದೇವೆ. ಎಲ್ಲಾ ಆಸ್ಪತ್ರೆಯಲ್ಲಿ ಕೂಡ ಮುಂಜಾಗೃತಾ ಕ್ರಮದ ಜೊತೆಗರ ಸಭೆ ಮಾಡಿದ್ದಾರೆ. ಕೋವಿಡ್ ವೇಗವಾಗಿ ಹರಡುತ್ತಿದೆ.. ಆದರೆ, ತೀವ್ರತೆ ಇಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಜನರು ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳಿದರು.

Advertisement

ಕರ ಸೇವಕರ ಮೇಲೆ ಕೇಸ್ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರಿಗೆ ಜನ ವಿಪಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ. ಹೀಗಾಗಿ ಅವರು ರಚನಾತ್ಮಕ ವಿಪಕ್ಷವಾಗಿ ಕೆಲಸ ಮಾಡಲಿ ಅದು ಬಿಟ್ಟು ಕೇವಲ ರಾಜಕರಣ ಮಾಡುತ್ತಿದ್ದಾರೆ. ಅಭಿವೃದ್ಧಿ, ಕೋವಿಡ್ ನಿಯಂತ್ರಣದ ಜನಪರ ಕೆಲಸ ಅವರಿಗೆ ಬೇಡ. ರಾಜ್ಯದ ಜನ ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತವನ್ನೇ ಧಿಕ್ಕರಿಸಿ ತಕ್ಕಪಾಠ ಕಲಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Video: ಬೈಕ್ ಬಿಟ್ಟು ಕುದುರೆ ಏರಿದ ಝೊಮ್ಯಾಟೊ ಡೆಲಿವರಿ ಬಾಯ್…

Advertisement

Udayavani is now on Telegram. Click here to join our channel and stay updated with the latest news.

Next