Advertisement

371ನೇ ವಿಧಿಗೆ ಹೋರಾಟ: ಕೇಸ್‌ ವಾಪಸ್‌

06:30 AM Sep 18, 2017 | Team Udayavani |

ಕಲಬುರಗಿ: 371ನೇ ಜೆ ವಿಧಿ ಜಾರಿ ಸಲುವಾಗಿ ಹೋರಾಟ ಮಾಡಿರುವ ಹೋರಾಟಗಾರರ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳನ್ನು ಸರ್ಕಾರ ವಾಪಸ್‌ ಪಡೆಯಲಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ತಿಳಿಸಿದರು.

Advertisement

ನಗರದ ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಹೈದ್ರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆಯ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಈ ಭರವಸೆ ನೀಡಿದರು. ಹೈದ್ರಾಬಾದ್‌ ಕರ್ನಾಟಕ ಭಾಗದ ಶಿಕ್ಷಣ ಪ್ರವೇಶಾತಿ ಹಾಗೂ ಉದ್ಯೋಗದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ ಜೆ ವಿಧಿ ಜಾರಿಗಾಗಿ ಸತತ ಹೋರಾಟ ನಡೆಸಿ ಮೊಕದ್ದಮೆಗಳಿಗೆ ಒಳಗಾಗಿರುವ ಹೋರಾಟಗಾರರನ್ನು ವಿಮುಕ್ತಿ ಗೊಳಿಸಲು ಮೊಕದ್ದಮೆಗಳನ್ನು ವಾಪಸ್‌ ಪಡೆಯಲಾಗುವುದು ಎಂದರು.

371ನೇ ಜೆ ವಿಧಿ ಜಾರಿಗಾಗಿ ಸತತ ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಹೋರಾಟ ನಡೆದಿದೆ. ಪ್ರಮುಖವಾಗಿ ವೈಜನಾಥ ಪಾಟೀಲ, ವಿಶ್ವನಾಥರೆಡ್ಡಿ ಮುದ್ನಾಳ ಸೇರಿದಂತೆ ಇತರರ ಹೋರಾಟ ಮರೆಯುವಂತಿಲ್ಲ. ಕಲಂ ಜಾರಿಯಾಗುವಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕ ಡಾ|ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ದಿ|ಧರ್ಮಸಿಂಗ್‌ ಪಾತ್ರ ಮಹತ್ವದ್ದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next