Advertisement

ಸಕ್ಕರೆ ಕಾರ್ಖಾನೆಗಳ ಮೇಲಿನ ದಾಳಿ ನಿಲ್ಲಲ್ಲ: ಶಂಕರ್‌ ಪಾಟೀಲ್‌ ಮುನೇನಕೊಪ್ಪ

08:22 PM Dec 15, 2022 | Team Udayavani |

ರಾಯಚೂರು: ರಾಜ್ಯದಲ್ಲಿ ಏಕಕಾಲದಲ್ಲಿ 20 ಕಡೆ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿಯಾಗಿದೆ. ಇದು ಮೊದಲನೇ ಹಂತದ ದಾಳಿಯಾಗಿದ್ದು, ಇನ್ನೂ ದಾಳಿ ಮುಂದುವರಿಯಲಿದೆ ಎಂದು ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ್‌ ಪಾಟೀಲ್‌ ಮುನೇನಕೊಪ್ಪ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಖಾಸಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಪರವಾಗಿದೆ ಎಂದು ರೈತರಿಂದ ಬಹಳ ವರ್ಷಗಳಿಂದ ದೂರು ಇತ್ತು. ಕಬ್ಬಿನ ತೂಕದಲ್ಲಿ ಮೋಸವಾಗುತ್ತಿದೆ ಎಂದು ಕೂಡ ರೈತರು ದೂರು ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಲಾಗಿದೆ. ಆ ಮೂಲಕ ಸರ್ಕಾರ ರೈತರ, ಕಬ್ಬು ಬೆಳೆಗಾರರ ಪರವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಪಾರದರ್ಶಕವಾಗಿ ತನಿಖೆಯನ್ನೂ ನಡೆಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಆ ಪಕ್ಷ, ಈ ಪಕ್ಷ ಎಂದು ಯಾವುದನ್ನು ಲೆಕ್ಕಿಸದೆ ರೈತರಿಗೆ ಅನ್ಯಾಯ ಮಾಡುವ ಯಾವುದೇ ಸಕ್ಕರೆ ಕಾರ್ಖಾನೆ ಇದ್ದರು ಶಿಸ್ತು ಕ್ರಮ ಎದುರಿಸಲೇಬೇಕಿದೆ. ರೈತರು ಉಪ ಉತ್ಪಾದನೆಯಲ್ಲಿ ಲಾಭಾಂಶ ಕೇಳಿದ್ದರು. ರಾಜ್ಯ ಸರ್ಕಾರ ಲಾಭಾಂಶ ಘೋಷಿಸಿದೆ. ಉತ್ಪಾದನೆಯಲ್ಲಿ 50 ರೂ. ರೈತರಿಗೆ ನೀಡಬೇಕು. ಮೊದಲನೇ ಕಂತಿನಲ್ಲಿ 200 ಕೋಟಿ ರೂ. ಕೊಡಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಕೂಡ ಮಾಡಿದೆ. ತೂಕ ಮತ್ತು ಇಳುವರಿ ಬಗ್ಗೆ ಮುಂದಿನ ದಿನಗಳಲ್ಲಿ ಸಮಿತಿ ರಚಿಸಲಾಗುವುದು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next