Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಕಲೇಶಪುರ ಭಾಗದಿಂದ ಬಯಲು ಸೀಮೆ ಪ್ರದೇಶಕ್ಕೆ ಕುಡಿಯುವ ನೀರಿಗಾಗಿ ಎತ್ತಿನ ಹೊಳೆ ಯೋಜನೆ ರೂಪಿಸಲಾಗಿದ್ದು ಸಾವಿರಾರು ಕೋಟಿ ರೂ.ಗಳ ಕಾಮಗಾರಿ ಪ್ರಗತಿಯಲ್ಲಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಈ ಯೋಜನೆಗೆ ಚಾಲನೆ ನೀಡಿ ತ್ವರಿತವಾಗಿ ಕಾಮಗಾರಿ ನಡೆಯಲು ಕ್ರಮ ಕೈಗೊಂಡಿತ್ತು. ಅದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಚಿವ ರೇವಣ್ಣ ಈವರೆಗೂ ಸ್ಥಳಕ್ಕೆ ಭೇಟಿ ನೀಡದೆ ಕಾಮಗಾರಿ ಕುಠಿತಗೊಂಡಿದೆ’ ಎಂದು ಆರೋಪಿಸಿದರು. ರೇವಣ್ಣ ಅವರು ಗುಣಮಟ್ಟದ ಕಾಮಗಾರಿ ಪರಿಶೀಲನೆ ಮಾಡದೆ ದಲಿತ ಗುತ್ತಿಗೆದಾರರಿಗೆ ಮೀಸಲಿದ್ದ 50 ಲಕ್ಷ ರೂ.ವರೆಗಿನ ಕಾಮಗಾರಿಗಳನ್ನು ತಮ್ಮ ಬೆಂಬಲಿತ ಗುತ್ತಿಗೆದಾರರಿಗೆ ಅನುಕೂಲ ಮಾಡಲು ಪ್ಯಾಕೇಜ್ ಮಾಡಿ ವಂಚಿಸಿದ್ದಾರೆ ಎಂದು ದೂರಿದರು. Advertisement
‘ಎತ್ತಿನಹೊಳೆ ಯೋಜನೆಯಲ್ಲಿ ಸಚಿವ ರೇವಣ್ಣ ಅವ್ಯವಹಾರ’
02:07 AM May 21, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.