Advertisement

ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿದೆ, ಬೆಳಗಾವಿ ಜನರಿಗೆ ಆತಂಕ ಬೇಡ: ರಮೇಶ್ ಜಾರಕಿಹೊಳಿ

01:29 PM Aug 08, 2020 | keerthan |

ಬೆಳಗಾವಿ: ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿದೆ. ಕರ್ನಾಟಕ- ಮಹಾರಾಷ್ಟ್ರ ಸಮನ್ವಯತೆಯಿಂದ ಕಾರ್ಯನಿರ್ವಾಹಿಸುತ್ತಿದ್ದು, ಸಂಭವನೀಯ ಪ್ರವಾಹ ಹತೋಟಿಯಲ್ಲಿದೆ. ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

Advertisement

ಮಾಂಜರಿ ಹಾಗೂ ಯಡೂರ ಗ್ರಾಮಗಳಲ್ಲಿ ಕೃಷ್ಣಾ ನದಿಯಲ್ಲಿ ಬೋಟ್ ಮೂಲಕ ಒಳಹರಿವಿನ ಕುರಿತು ಅವಲೋಕನ ನಡೆಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದರು.

ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ, ಸಿಇಒ ಸೇರಿದಂತೆ ಹಿರಿಯ ಅಧಿಕಾರಿಗಳ ನೋಡಲ್ ಅಧಿಕಾರಿಗಳ ಸಭೆ ನಡೆಸಿ ಪ್ರವಾಹ ಪರಿಸ್ಥಿತಿ ಕುರಿತು ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಅಧಿಲಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಮಹಾರಾಷ್ಟ್ರ ಕೋಯ್ನಾ ಜಲಾಶಯವು ಶೇ 68 ರಷ್ಟು ಭರ್ತಿಯಾಗಿದ್ದು, ಎರಡು ಅಥವಾ ಮೂರು ದಿನಗಳಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ. ಭಗವಂತನ ಕೃಪೆಯಿಂದ ಮಳೆ ಬಿಡುವು ನೀಡಿದರೇ ದೂಧಗಂಗಾ ಮತ್ತು ವೇಧಗಂಗಾ ನದಿ ನೀರಿನ ಮಟ್ಟದಲ್ಲಿ ಕಡಿಮೆಯಾಗಬಹುದು. ಆಗ ಕೋಯ್ನಾ ಜಲಾಶಯದಿಂದ ನೀರಿ ಬಿಡುಗಡೆ ಮಾಡಿದರೂ ಪ್ರವಾಹ ಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗಲಿದೆ ಎಂದರು.

ಇದನ್ನೂ ಓದಿ: ತೋಡಿನಲ್ಲಿ ಗಾಡಿ: ತೊರೆಯ ಪ್ರವಾಹಕ್ಕೆ ಕೊಚ್ಚಿಹೋದ ತೊಳೆಯಲು ನಿಲ್ಲಿಸಿದ್ದ ಪಿಕ್ ಅಪ್!

Advertisement

ಪ್ರಶ್ನೆಯೊಂದಿಗೆ ಉತ್ತರಿಸಿದ ಅವರು. ಪ್ರವಾಹ ಪರಿಸ್ಥಿತಿ ಕೈಮೀರಿದರೇ ಸಂತ್ರಸ್ಥರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಗಂಜಿ ಕೇಂದ್ರ ಗೊತ್ತು ಮಾಡಲಾಗಿದೆ. ಕೋವಿಡ್ ಹಿನ್ನಲ್ಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಗಂಜಿ ಕೇಂದ್ರಗಳ ಸಂಖ್ಯೆ ಹೆಚ್ಚಿಸಿ ಅಗತ್ಯ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ, ಉತ್ತಮ ಪಾಟೀಲ, ರವೀಂದ್ರ ಮಿರ್ಜೆ, ಅಜೀತ ದೇಸಾಯಿ, ಮುದ್ದಸರ ಜಮಾದಾರ, ಅನಿಲ ಪಾಟೀಲ. ತಹಶಿಲ್ದಾರ ಸುಭಾಷ್ ಸಂಪಗಾವಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಮೀರ ಮುಲ್ಲಾ, ಶಿವಾನಂದ ಶಿರಗಾವರ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next