Advertisement
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ರಕ್ಷಣೆ ಮಾಡುತ್ತದೆ. ಶಿವಸೇನೆ ಪುಂಡಾಟಿಕೆ ನಿಲ್ಲಿಸಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಶಿವಸೇನೆ ಪುಂಡಾಟಿಕೆ ನಿರಂತರವಾಗಿ ನಡೆಯುತ್ತಿದೆ. ಕಠಿಣ ಕ್ರಮ ಜರುಗಿಸಿ ನಾವು ನಿಲ್ಲಿಸಬೇಕಿದೆ ಎಂದರು.
Related Articles
Advertisement
ಬೆಳಗಾವಿ ಲೋಕಸಭೆ ಉಪ ಚುನಾವಣೆ ವಿಚಾರ, ನಿನ್ನೆ ಅರುಣಸಿಂಗ್ ಬಂದಿದ್ದರು. ಚುನಾವಣೆಯ ಕಮಿಟಿಯಲ್ಲಿ ನಾನು ಇರುವೆ. ನನಗೆ ತಿಳಿದಿರುವಂತೆ ಅಭ್ಯರ್ಥಿ ಯಾರಾಗಬೇಕೆಂದು ಅವರಿಗೆ ತಿಳಿಸಿರುವೆ. ಬೆಳಗಾವಿ ಲೋಕಸಭೆ ಅಭ್ಯರ್ಥಿ ಬಗ್ಗೆ ಅರುಣ ಸಿಂಗ್ ಜೊತೆಗೆ ನಾನು ಒನ್ ಟು ಒನ್ ಮಾತಾಡಿ ಹೇಳಿರುವೆ. ಬೆಳಗಾವಿ ಲೋಕಸಭೆಗೆ ನನ್ನ ದೃಷ್ಟಿಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರೆ ಒಳ್ಳೆಯದು ಅಂತ ಹೇಳಿರುವೆ. ಉಳಿದಂತೆ ಬಿಜೆಪಿ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದರು.
ಇದನ್ನೂ ಓದಿ: ಕೇಂದ್ರ ಸಮಿತಿಗೆ ಉಪ ಚುನಾವಣೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ: ಸಿ.ಟಿ.ರವಿ
ಟಿಕೆಟ್ ರೇಸ್ ನಲ್ಲಿ ಸುರೇಶ ಅಂಗಡಿ ಕುಟುಂಬದ ಸೇರಿ ಬಹಳ ಜನರು ಇದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಒತ್ತು ಕೊಡುತ್ತೇವೆ. ಅದೇ ರೀತಿ ಅಂಗಡಿಯವರ ಕುಟುಂಬ ಪಕ್ಷದೊಂದಿಗೆ ತುಂಬಾ ಒಡನಾಟವಿದೆ. ಈ ವಿಚಾರವನ್ನು ಪಕ್ಷದ ಗಮನಕ್ಕೆ ತಂದಿರುವೆ. ಕೋರ್ ಕಮಿಟಿ ಮೀಟಿಂಗ್ ನಲ್ಲಿ 3 ಜನ ಗೆಲ್ಲುವಂತಹ ಅಭ್ಯರ್ಥಿಗಳ ಹೆಸರನ್ನು ಪಕ್ಷದ ಹೈಕಮಾಂಡ್ ಗೆ ಕಳುಹಿಸಿರುವೆ. ನನ್ನ ಹೆಸರುಗಳನ್ನು ಅರುಣ್ ಸಿಂಗ್ ಅವರಿಗೆ ಕೊಟ್ಟಿರುವೆ. ಪಕ್ಷದ ಹೈಕಮಾಂಡ್ ಯಾರಿಗೆ ಕೊಟ್ಟರೂ ನಮ್ಮ ಒಪ್ಪಿಗೆ ಇದೆ ಅಂತ ಹೇಳಿರುವೆ ಎಂದರು.