ಕಾಪು: ಕರಾವಳಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ಐದು ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ನೀಡಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಮಂಗಳವಾರ ಕಾಪುವಿನ ಕೈಪುಂಜಾಲು ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ಅವರು,ಕಡಲ್ಕೊರೆತ ವೀಕ್ಷಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಎರಡು ದಿನಗಳಿಂದ ಕರಾವಳಿಯ ವಿವಿದೆಡೆ ಮಳೆ ಹಾನಿ,ಚಂಡ ಮಾರುತ ಹಾನಿ ಮತ್ತು ಕಡಲ್ಕೊರೆತ ಭೇಟಿ ನೀಡಿದ್ದು,ಸಮಗ್ರವಾಗಿ ವರದಿ ಸಿದ್ದಪಡಿಸಿ ಮುಖ್ಯಮಂತ್ರಿಗಳಿಗೆ ನೀಡಲಾಗುವುದು ಎಂದು ಹೇಳಿದರು.
ಕಾಪು ತಹಶಿಲ್ದಾರ್ ಪ್ರತಿಭಾ ಆರ್,ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್, ಕಾಪು ಪುರಸಭೆ ಅನಿಲ್ ಕುಮಾರ್, ಮುಖ್ಯಾಧಿಕಾರಿ ವೆಂಕಟೇಶ ನಾವಡ, ಪುರಸಭೆ ಸದಸ್ಯರಾದ ರಮಾ ವೈ. ಶೆಟ್ಟಿ, ಕಿರಣ್ ಆಳ್ವ, ಕಂದಾಯ ನಿರೀಕ್ಷಕ ಸುದೀರ್ ಕುಮಾರ್ ಶೆಟ್ಟಿ, ಗ್ರಾಮ ಕರಣಿಕ ಗಣೇಶ್ ಮೇಸ್ತ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ರಮೇಶ್ ಪೂಜಾರಿ, ಕೈಪುಂಜಾಲು ಮೊಗವೀರ ಮಹಾ ಸಭಾದ ಅಧ್ಯಕ್ಷ ಸತೀಶ್ ಕುಂದರ್, ಸ್ಥಳೀಯರಾದ ರಮೇಶ್ ಕೈಪುಂಜಾಲು,ಚಂದ್ರಶೇಖರ್, ಪೂರ್ಣಿಮಾ, ಗೀತ ಬ್ರಹಸ್ಪತಿ ಮೊದಲಾದವರು ಉಪಸ್ಥಿತರಿದ್ದರು.