ಬೆಂಗಳೂರು: ಸ್ಥಳೀಯ ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ಕೊಟ್ಟಿದೆ. ಇದು ಕರ್ನಾಟಕದ ಮಟ್ಟಿಗೆ ಮಹತ್ವದ ಬೆಳವಣಿಗೆ. ಬಿಬಿಎಂಪಿ ಚುನಾವಣೆ ಸಂಬಂಧ ಪ್ರತ್ಯೇಕ ಕೇಸ್ ಇತ್ತು. ಲೀಸ್ಟ್ ಆಗಲು ಮೂರು ತಿಂಗಳು ಇತ್ತು. ಮೂರು ಪೀಠದ ನ್ಯಾಯಾಧೀಶರು ಮಹತ್ವದ ತೀರ್ಪು ನೀಡಿದ್ದಾರೆ. ಇಂದಿನ ತೀರ್ಪು ಮಧ್ಯಪ್ರದೇಶಕ್ಕೆ ಸಂಬಂಧಿಸಿದ ಆದೇಶ ಆಗಿದೆ. ಆದರೆ ಎಲ್ಲಾ ರಾಜ್ಯಕ್ಕೂ ಅದು ಅನ್ವಯ ಅಂತ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ಕಂದಾಯ ಆರ್. ಅಶೋಕ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಎಲ್ಲಾ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಮಾಡಬೇಕು ಅಂತ ಹೇಳಲಾಗಿದೆ. ಕಳೆದ ಬಾರಿ ನಡೆದ ಚುನಾವಣೆ ಪ್ರಕಾರವೇ ನಡೆಸಲು ಸೂಚಿಸಿದೆ. ಮೀಸಲಾತಿ ಪ್ರಕಾರ ಚುನಾವಣೆ ನಡೆಯಲಿದೆ. ಈ ಬಗ್ಗೆ ಸಿಎಂ ಜೊತೆ ಮಾತಾಡುತ್ತೇನೆ. ಕರ್ನಾಟಕ ಸರ್ಕಾರ ಚುನಾವಣೆ ಮಾಡಲು ತಯಾರಿದೆ. ಚುನಾವಣೆ ಯಾವಾಗ ಬಂದರೂ ಮಾಡಲು ಸಿದ್ದ ಎಂದರು.
ಇದನ್ನೂ ಓದಿ: ಬಿಜೆಪಿ ಮುಖಂಡ ಬಗ್ಗಾಗೆ ರಿಲೀಫ್; ಜುಲೈ 5ರವರೆಗೆ ಬಂಧಿಸಬೇಡಿ-ಪಂಜಾಬ್, ಹರ್ಯಾಣ ಹೈಕೋರ್ಟ್
ಬಿಜೆಪಿ ಬೂತ್ ಮಟ್ಟದ ಕಾರ್ಯಕ್ರಮ, ಸಮಾವೇಶ ಮುಗಿದಿದೆ. ಅಭ್ಯರ್ಥಿಗಳ ಆಯ್ಕೆ ಮಾತ್ರ ಬಾಕಿ ಇದೆ. ಎರಡು ವಾರದಲ್ಲಿ ಚುನಾವಣೆ ಘೋಷಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಸ್ಪಷ್ಟಪಡಿಸಿದೆ. ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಆಗಬೇಕಿದೆ ಎಂದರು.
ಸುಪ್ರೀಂ ಆದೇಶ ಪಾಲನೆ ಮಾಡಬೇಕು. 198 ವಾರ್ಡ್ ಗಳಿಗೆ ಮಾತ್ರ ಚುನಾವಣೆ ನಡೆಸಲಾಗುತ್ತದೆ. ಮೀಸಲಾತಿ ವಿಚಾರದ ಬಗ್ಗೆ ಅಡ್ವೋಕೆಟ್ ಜನರಲ್ ಜೊತೆ ಮಾತಾಡ್ತೇವೆ ಎಂದು ಹೇಳಿದರು.