Advertisement

ಸುಪ್ರೀಂ ತೀರ್ಪಿನಿಂದ ನಿರಾಳರಾಗಿದ್ದೇವೆ : ಸಚಿವ ಆರ್. ಅಶೋಕ್

11:15 AM Nov 14, 2019 | Hari Prasad |

ಬೆಂಗಳೂರು: ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟಿರುವುದರಿಂದ ನಾವೆಲ್ಲಾ ನಿರಾಳರಾಗಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಸುಪ್ರೀಂ ತೀರ್ಪಿನ ಕುರಿತಾಗಿ ಪ್ರತಿಕ್ರಿಯಿಸುತ್ತಾ ತಿಳಿಸಿದ್ದಾರೆ.

Advertisement

ಅನರ್ಹರ ಶಾಸಕರಿಗೆ ನಮ್ಮ ಪಕ್ಷದಿಂದ ಯಾವುದೇ ರೀತಿಯಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ. ಎಲ್ಲರಿಗೂ ಟಿಕೇಟ್ ಅವರವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ನೀಡಲಾಗುತ್ತದೆ ಎಂದು ಅಶೋಕ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಶಾಸಕರಾಗಿ ಆಯ್ಕೆಯಾಗಲು ಯಾವ ಅಡೆತಡೆಯೂ ಇಲ್ಲ. ಆದರೆ ಅವರಿಗೆಲ್ಲಾ ಸದ್ಯಕ್ಕೆ ಮಂತ್ರಿಯಾಗಲು ಅವಕಾಶ ಇಲ್ಲ ಅಷ್ಟೇ ಎಂದು ಅಶೋಕ್ ಅವರು ಸುಪ್ರೀಂ ತೀರ್ಪನ್ನು ವಿಶ್ಲೇಷಿಸಿದರು.

ರಾಜ್ಯದ 15 ಕ್ಷೇತ್ರಗಳಿಗೆ ನಡೆಯಲಿರುವ ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಕ್ಷೇತ್ರಳಲ್ಲೂ ಗೆಲ್ಲಲಿದೆ ಎಂದು ಸಚಿವ ಅಶೋಕ್ ಅವರು ಭರವಸೆ ವ್ಯಕ್ತಪಡಿಸಿದರು. ಪಕ್ಷದಲ್ಲಿ ಯಾವುದೇ ಗೊಂದಲು ಮತ್ತು ಅಸಮಧಾನ ಇಲ್ಲ. ಟಿಕೆಟ್ ಸಿಗದ ಕಾರಣಕ್ಕೆ ಯಾರೂ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ.

ಆದರೆ ಇದೀಗ ನಿಜವಾದ ಗೊಂದಲವಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಎಂದು ಅಶೋಕ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕುದುರೆ ವ್ಯಾಪಾರ ಮತ್ತು ಪಕ್ಷಾಂತರದಲ್ಲಿ ಪಳಗಿರುವ ಕಾಂಗ್ರೆಸ್ ನಮಗೆ ನೈತಿಕತೆ ಪಾಠ ಮಾಡುವ ಅಗತ್ಯವಿಲ್ಲ ಎಂದು ಅಶೋಕ್ ಅವರು ಕಾಂಗ್ರೆಸ್ ಪಕ್ಷದ ಮೇಲೆ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next