Advertisement

ಅಬಕಾರಿ ನೀತಿ ಹಗರಣ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲು ಖಚಿತ; ಪ್ರಹ್ಲಾದ್ ಜೋಶಿ

01:29 PM Aug 30, 2022 | Team Udayavani |

ಹುಬ್ಬಳ್ಳಿ: ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶಿಕ್ಷೆಗೊಳಗಾಗಿ ಜೈಲು ಸೇರುವುದು ಖಚಿತವೆಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಭವಿಷ್ಯ ನುಡಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣಕ್ಕೆ ಸಂಬಂಧಿಸಿ ಅವರ ವಿರುದ್ದ ಬಲವಾದ ಸಾಕ್ಷಿಗಳಿವೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಲೇ ಭ್ರಷ್ಟಾಚಾರ ಮಾಡಿರುವ ಅವರು ನಿರ್ಲಜ್ಜರು. ಈಗಾಗಲೇ ಅವರ ಸರಕಾರದ ಸಚಿವರೊಬ್ಬರು ಜೈಲು ಸೇರಿದ್ದಾರೆ. ಹೈಕೋರ್ಟ್ ನಲ್ಲೂ ಅವರಿಗೆ ಇದುವರೆಗೂ ಅವರಿಗೆ ಜಾಮೀನು ಸಿಕ್ಕಿಲ್ಲ. ಇನ್ನೂ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ನಾಚಿಗೇಡಿತನದ ಪರಮಾವಧಿ ಇದು. ಶಿಕ್ಷೆಗೊಳಗಾಗುವ ಭಯದಿಂದಾಗಿ ಇಡೀ ಪ್ರಕರಣ ಬೇರೆಡೆ ತಿರುಗಿಸಲು‌ ಬಿಜೆಪಿ ವಿರುದ್ಧ ಸುಳ್ಳು ಆರೋಪ, ಹೊಸ ನಾಟಕ ಶುರು ಮಾಡಿದ್ದಾರೆ. ನಾವು ಸರಕಾರ ರಚಿಸಬೇಕಾದರೆ ಎಎಪಿಯ 32 ಶಾಸಕರು ಬೇಕಾಗುತ್ತದೆ. ಅದು ಸಾಧ್ಯವಿಲ್ಲ. ಅವರು ಬಾರದ ಹೊರತು ನಾವು ಸರಕಾರ ರಚನೆಗೆ ಕೈಹಾಕಲ್ಲ. ಕೇಜ್ರಿವಾಲ್ ಬೋಗಸ್ ವ್ಯಕ್ತಿ. ದೊಡ್ಡ ನಾಟಕೀಯ ವ್ಯಕ್ತಿ ಎಂದರು.

ಇದನ್ನೂ ಓದಿ: ಹೆಸರಿನಲ್ಲಿ ʼರಾಮʼ…! ಉಂಡ ಮನೆಗೆ ಪಂಗನಾಮ…! : ಸಿದ್ದು ವಿರುದ್ಧ ಶ್ರೀರಾಮುಲು ಕಿಡಿ

ನಗರದಲ್ಲಿ ಪ್ರತ್ಯೇಕವಾಗಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುವ ಬದಲು ನವ ನಗರದ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆಗೆ ಸರಕಾರ ನೆರವು ನೀಡಲಿದೆ. ಜಿಲ್ಲೆಯಲ್ಲಿ ಶೀಘ್ರವೇ ಜಯದೇವ ಹೃದ್ರೋಗ ಆಸ್ಪತ್ರೆ ಕಾರ್ಯಾರಂಭವಾಗಲಿದೆ ಎಂದರು.

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಡೆದ 90ರಷ್ಟು ವಂಚನೆ ನಡೆದಿದೆ ವಿನಃ ನಮ್ಮ ಸರಕಾರದಲ್ಲಿ ಅಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next