Advertisement

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಿಂದ ತುಷ್ಟೀಕರಣ ರಾಜಕಾರಣ: ಪ್ರಹ್ಲಾದ್ ಜೋಶಿ ವಾಗ್ದಾಳಿ

04:26 PM Oct 01, 2021 | Team Udayavani |

ಧಾರವಾಡ: ಮತಾಂತರ ಹಣದ ಆಸೆ, ಮೋಸ, ಒತ್ತಾಯದಿಂದ ನಡೆಯುತ್ತಿದೆ. ಮುಗ್ದ ಜನರನ್ನು ತಪ್ಪು ದಾರಿಗೆ ಎಳೆದು ಮತಾಂತರ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ಬಗ್ಗೆ ಬಗ್ಗೆ ಯಾವುದೇ ಅನುಮಾನ ಇಲ್ಲ. ಹಿಂದೂಗಳ ಬೇರೆ ಜಾತಿಗೆ ಮತಾಂತರ ನಡೆಯುತ್ತಿದ್ದು, ಇದು ನಿಲ್ಲಬೇಕು. ಇದಕ್ಕೆ ಅಗತ್ಯವಾದ ಕಾನೂನು ತಿದ್ದುಪಡಿ ರಾಜ್ಯ ಸರ್ಕಾರ ಮಾಡಬೇಕು. ಜೊತೆಗೆ ಇದನ್ನು ತಡೆಯಲು ಸರ್ವ ರೀತಿಯ ಪ್ರಯತ್ನವೂ ಆಗಬೇಕು ಎಂದರು.

ಭಯೋತ್ಪಾದಕರು ಸತ್ತಾಗ ಸೋನಿಯಾ ಅತ್ತಿದ್ದರು: ಭಯೋತ್ಪಾದಕರು ಸತ್ತಾಗ ಸೋನಿಯಾ ಗಾಂಧಿ ಅತ್ತಿದ್ದರು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತದೆ. ಹಿಂದೆ ಬಾಟ್ಲಾ ಶೂಟ್ ಪ್ರಕರಣ ಆಗಿತ್ತು. ಆಗ ಮೋಹನ ಚಂದ್ರ ಶರ್ಮಾ ಸತ್ತಿದ್ದರು. ಆಗ ಸೋನಿಯಾ ಅವರು ಶರ್ಮಾ ಸತ್ತಿದ್ದಕ್ಕೆ ಅತ್ತಿರಲಿಲ್ಲ. ಆದರೆ, ಅಲ್ಲಿ ಟೆರರಿಸ್ಟ್ ಸತ್ತಿದ್ದಕ್ಕೆ ಸೋನಿಯಾ ಗಾಂಧಿ ಅತ್ತಿದ್ದರು. ಇವರ ಸಹಜ ಸ್ವಭಾವವೇ ಇದು ಎಂದರು.

ಇದನ್ನೂ ಓದಿ:ಅದಾನಿ ಮುಂದ್ರಾ ಬಂದರು ಡ್ರಗ್ ಪತ್ತೆ ಪ್ರಕರಣದಲ್ಲಿ ಬಿಜೆಪಿ ಮೌನವೇಕೆ:  ಸುಪ್ರಿಯಾ ಶ್ರೀನೆಟ್

ಮುಸ್ಲಿಂ ತುಷ್ಟೀಕರಣಕ್ಕಾಗಿ ಸಿದ್ದರಾಮಯ್ಯ ಈ ಹೇಳಿಕೆ ನೀಡುತ್ತಾರೆ. ಸಿದ್ದರಾಮಯ್ಯಗೆ ಆರ್.ಎಸ್.ಎಸ್ ಅಂದರೆ ಏನು ಗೊತ್ತು?. ಮತ ಬ್ಯಾಂಕ್ ರಾಜಕಾರಣಕ್ಕೆ ಹೀಗೆ ಹೇಳಿಕೆ ನೀಡುತ್ತಾರೆ. ಹಿಂದೆ ರಾಮ ಜನ್ಮಭೂಮಿ ವಿರೋಧ ಮಾಡಿದ್ದರು. ಮುಸ್ಲಿಂ ಮಹಿಳೆಯ ಜೀವನಾಂಶ ವಿಷಯಕ್ಕೂ ವಿರೋಧ ಮಾಡಿದ್ದರು. ಇದೆಲ್ಲದರಿಂದ ಕಾಂಗ್ರೆಸ್ ಅಧೋಗತಿಗೆ ಇಳಿದಿದೆ. ಇವರು ಸುಧಾರಿಸಬೇಕು, ಇಲ್ಲದಿದ್ದಲ್ಲಿ ಜನ ಇನ್ನೂ ದಾರಿ ತೋರಿಸ್ತಾರೆ. ದೇಶದ ಜನಕ್ಕೆ ಆರ್‌ಎಸ್ಎಸ್, ಬಿಜೆಪಿ ಏನಂತ ಗೊತ್ತಿದೆ. ಸಿದ್ದರಾಮಯ್ಯ ಆ ಬಗ್ಗೆ ಹೇಳಬೇಕಿಲ್ಲ. ಅವರೊಬ್ಬ ಗೌರವಾನ್ವಿತ ನಾಯಕ. ವೈಯಕ್ತಿಕವಾಗಿ ಅವರ ಬಗ್ಗೆ ನನಗೂ ಗೌರವ ಇದೆ. ಆದರೆ ಮಾತನಾಡುವಾಗ ಇತಿ ಮೀತಿ ಇರಬೇಕು. ನಾವು ಕಾಂಗ್ರೆಸ್‌ನವರಿಗೆ ಐಎಸ್‌ಐ ಏಜೆಂಟ್ ಅಂದರೆ ಏನ ಮಾಡ್ತಾರೆ. ಆ ರೀತಿ ಮಾತನಾಡುವುದು ಸರಿಯಲ್ಲ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಸಂಜಯ ಪಾಟೀಲ ಹೇಳಿಕೆ ಸಮರ್ಥನೀಯವಲ್ಲ. ನಾನು ಅವರಿಗೆ ವೈಯಕ್ತಿಕವಾಗಿ ತಿಳಿ ಹೇಳುವೆ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಶನಿವಾರ ಬೆಳಗಾವಿಗೆ ಹೊರಟಿರುವೆ. ಅಲ್ಲಿ ಮಾತನಾಡುವೆ. ಈ ರೀತಿ ಮಾತನಾಡುವುದು ಸರಿಯಲ್ಲ. ಆ ರೀತಿ ಮಾತನಾಡಬಾರದು. ಕಾಂಗ್ರೆಸ್ ಪಕ್ಷದವರು ಸಹ ಬೇರೆ ಬೇರೆಯವರ ಬಗ್ಗೆ ಮಾತನಾಡಿದ್ದಾರೆ. ಆಗ ಆ ಪಕ್ಷದವರ ಪ್ರತಿಕ್ರಿಯೆ ಹೇಗಿತ್ತು? ಲಕ್ಷ್ಮೀ ಹೆಬ್ಹಾಳಕರ ಬಗ್ಗೆ ಮಾತನಾಡಬಾರದು. ಅದರ ಬಗ್ಗೆ ಎರಡು ಮಾತಿಲ್ಲ. ಆದರೆ ನರೇಂದ್ರ ಮೋದಿ ಬಗ್ಗೆ ಇವರು ಯಾವ ರೀತಿ ಮಾತನಾಡಿದ್ದರು. ದೇಶದ ಪ್ರಧಾನಿ ಬಗ್ಗೆಯೇ ಮಾತನಾಡಿದ್ದರು, ಆದರೆ ಆಗ ನಾವು ಸಂಜಯ್ ಪಾಟೀಲರಿಗೆ ಹೇಳಿದಂತೆ ಕಾಂಗ್ರೆಸ್‌ನವರು ಹೇಳಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಂಸ್ಕೃತಿ ಇರುವ ನಾಯಕರಿಲ್ಲ.‌ ನಮ್ಮ ಪಕ್ಷದಲ್ಲಿ ಸಂಸ್ಕೃತಿ ಇದೆ. ಹೀಗಾಗಿ ಹೇಳುವೆ ಲಕ್ಷ್ಮೀ ಹೆಬ್ಬಾಳಕರ ಜನ ಆಯ್ಕೆ ಮಾಡಿದ ಶಾಸಕರು. ಹೀಗಾಗಿ ಅವರಿಗೆ ಗೌರವ ಕೊಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next