Advertisement

ಸಂಸದರ ಮೇಲೆ ಸಚಿವ ವಾಗ್ಧಾಳಿ

12:18 PM Jan 01, 2023 | Team Udayavani |

ಹೊಸಕೋಟೆ: ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಬಚ್ಚೇಗೌಡರು ಬಿಜೆಪಿ ಪಕ್ಷದ ಅಡಿ ಸಂಸದರಾಗಿ ಅಯ್ಕೆಯಾಗಿದ್ದು, ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶರತ್‌ ಬಚ್ಚೇಗೌಡರಿಗೆ ಮತ ಯಾಚಿಸಿ ರುವುದು ನಾಚಿಕೆಗೇಡಿನ ಸಂಗತಿಯಾ ಗಿದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ ಅವರು ಸಂಸದ ಬಚ್ಚೇಗೌಡರ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ನಂದಗುಡಿಯ ಕೆಪಿಎಸ್‌ ಸ್ಕೂಲ್‌ ಆವರಣದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ 25 ಡೆಸ್ಕ್ ವಿತರಿಸಿ ಮಾತನಾಡಿದ ಅವರು, ಕಳೆದ ಉಪ ಚುನಾವಣೆಯಲ್ಲಿ ಸಂಸದ ಬಚ್ಚೇಗೌಡರು ಆರೋಗ್ಯದ ನೆಪ ಹೊಡ್ಡಿ ಬಿಜೆಪಿ ಪಕ್ಷದ ಪರ ಪ್ರಚಾರ ನಡೆಸದೇ ಪರೋಕ್ಷವಾಗಿ ತಮ್ಮ ಮಗ ಶರತ್‌ನನ್ನುಗೆಲ್ಲಿಸುವಂತೆ ತಾಲೂಕಿನ ಎಲ್ಲ ಮುಖಂಡರಿಗೂ ದುಂಬಾಲು ಬಿದ್ದರು. ಪಕ್ಷ ತಾಯಿಯಿದ್ದಂತೆ. ಯಾರೇ ಆಗಲಿ ಪಕ್ಷದ್ರೋಹ ಮಾಡಬಾರದು. ಮಗನ ಮೇಲೆ ಅಷ್ಟೊಂದು ಅಕ್ಕರೆ ಇದ್ದರೆ, ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮಗನ ಪರ ಪ್ರಚಾರ ನಡೆಸಲಿ ಎಂದರು.

ಶಿಸ್ತಿನ ಕ್ರಮಕ್ಕೆ ಒತ್ತಾಯ: ಬಿಜೆಪಿ ಪಕ್ಷದಿಂದ ಎಲ್ಲ ಅಧಿಕಾರವನ್ನು ಅನು ಭವಿಸಿ ಪಕ್ಷದ ಹೈಕಮಾಂಡ್‌ಗೆ ಕೊಟ್ಟ ಮಾತನ್ನು ಧಿಕ್ಕರಿಸಿ ತಾಲೂಕಿನಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನೆಡೆಯಾಗಿ ಕಾರಣಕರ್ತರಾಗಿದ್ದು, ಮತ್ತೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯ ಪರ ಮತ ಯಾಚಿಸಿರುವುದು ಪಕ್ಷಕ್ಕೆ ದ್ರೋಹವೆಸಗಿದಂತೆ. ಈ ಬಗ್ಗೆ ಪಕ್ಷದ ಹೈಕಮಾಂಡ್‌ ಗಮನಕ್ಕೆ ತಂದು ಶಿಸ್ತಿನ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಸಿ.ನಾಗರಾಜ್‌, ನಗರಸಭೆ ಸದಸ್ಯ ಅಪ್ಸರ್‌, ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಸುರೇಶ್‌, ಬಿಜೆಪಿ ತಾಲೂಕು ಎಸ್ಸಿ ಮೋರ್ಚಾ ಅಧ್ಯಕ್ಷ ಕೆ. ನಾಗೇಶ್‌, ಮುಖಂಡ ವಿ. ನಾರಾಯಣಸ್ವಾಮಿ, ರಾಜಣ್ಣ, ಸಿ. ದೇವರಾಜ್‌, ನಟರಾಜ್‌, ನಾಗೇಶ್‌, ರಾಜಶೇಖರ್‌, ಮುನಿರಾಜ್‌ ರವೀಂದ್ರ, ಮುನೇಗೌಡ, ಶಿವರಾಜಕುಮಾರ್‌, ಮಂಜುನಾಥ್‌, ತಿಪ್ಪಣ್ಣ ಶೋಭನ್‌ ಬಾಬು, ಹೊನ್ನೇಶ್‌ ಹಾಗೂ ಮತ್ತಿತರರು.

Advertisement

Udayavani is now on Telegram. Click here to join our channel and stay updated with the latest news.

Next