Advertisement
ನಗರದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣ ದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಬೆಳೆ ವಿಮೆ ಕುರಿತಂತೆ ರೈತರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಹೆಚ್ಚು ಜನರು ನೋಂದಾಯಿಸಿಕೊಳ್ಳಬೇಕು. ಈ ಹಿಂದೆ ಜಿಲ್ಲೆಯ ವಿವಿಧೆಡೆ ಕಳಪೆ ರಸಗೊಬ್ಬರ ಮಾರಾಟದ ಬಗ್ಗೆ ದೂರು ಗಳು ಬಂದಿದ್ದವು. ಇದರಿಂದ ರೈತರಿಗೆ ತೊಂದರೆಯಾಗ ಲಿದೆ. ಆದ್ದರಿಂದ ಮತ್ತೆ ಈ ರೀತಿಯ ಘಟನೆಗಳು ಮರು ಕಳುಹಿಸದಂತೆ ಎಚ್ಚರ ವಹಿಸಬೇಕು. ಯಾರೇ ಆದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Related Articles
Advertisement
ಶಾಸಕ ರಮೇಶ್ ಬಾಬುಗೆ ಬುದ್ಧಿ ಮಾತು ಹೇಳಿದ ಸಚಿವ: ಕೆಡಿಪಿ ಸಭೆಯಲ್ಲಿ ರಮೇಶ್‌ಬಾಬು ಬಂಡಿಸಿದ್ದೇ ಗೌಡಗೆ ಸಚಿವ ಎನ್.ಚಲುವರಾಯಸ್ವಾಮಿ ಬುದ್ಧಿ ಹೇಳಿದ ಪ್ರಸಂಗ ನಡೆಯಿತು. ಭತ್ತ ಖರೀದಿ ಕೇಂದ್ರ ವಿಚಾರದಲ್ಲಿ ಅಧಿಕಾರಿಗಳನ್ನು ರಮೇಶ್ ಬಂಡಿಸಿದ್ದೇ ಗೌಡ ತರಾಟೆಗೆ ತೆಗೆದು ಕೊಂಡಿದ್ದರು. ಭತ್ತ ಖರೀದಿ ಕೇಂದ್ರ ತೆರೆಯುವಲ್ಲಿ ವಿಳಂಬ ಮಾಡಲಾಗುತ್ತಿದೆ. ದೇಶಕ್ಕೆ ಒಂದು ಕಾನೂನು, ನಿಮಗೆ ಒಂದು ಕಾನೂನಾ?, ಮಾರ್ಕೆಟಿಂಗ್ ಫೆಡ ರೇಷನ್ ಅವರು ಯಾರು? ಅವರ ಮನೆ ಮುಂದೆ ರೈತ ಭತ್ತ ತಕೊಂಡು ಹೋಗ್ತಾರಾ?, ರೈತರಿಗೆ ನೂರಾರು ಸಮಸ್ಯೆ ಮಾಡಿಟ್ಟಿದ್ದಾರೆ. ಭತ್ತ ಕೊಡದೆ ಸುಮಾರು ರೈತರು ವಾಪಸ್ ಬಂದಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರೇ, ಇದು ಕಳೆದ ಬಾರಿ ಯಾಗಿರುವ ಸಮಸ್ಯೆ. ದಯಮಾಡಿ 1 ನಿಮಿಷ ಇತ್ತ ಕಡೆ ತಿರುಗಿ, ಪದ ಉಪಯೋಗಿಸುವಾಗ ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದರೆ ನಿಮಗೂ ಒಳ್ಳೆಯದು ಸಭೆಗೂ ಗೌರವ. ಫೆಡರೇಷನ್ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳಬೇಕು. ಸರಿ ಸಮಯಕ್ಕೆ ಖರೀದಿ ಮಾಡದಿದ್ದರೆ ಅವರೇ ಜವಾಬ್ದಾರರು. ಭತ್ತ ಕೊಯ್ಲಿಗೆ ಬಂದಿಲ್ಲ. ಭತ್ತ ಖರೀದಿ ಕೇಂದ್ರದ ಬಗ್ಗೆ ಕ್ಯಾಬಿನೆಟ್‌ನಲ್ಲಿ ಪ್ರಸ್ತಾಪ ಮಾಡುತ್ತೇನೆ. ಶೀಘ್ರದಲ್ಲೇ ಭತ್ತ ಖರೀದಿ ಕೇಂದ್ರ ತೆರೆಯಲು ಕ್ರಮ ವಹಿಸಲಾಗುವುದು ಎಂದು ಹೇಳಿದರು. ಸಚಿವರ ಸಲಹೆಗೆ ಎಚ್ಚೆತ್ತ ಶಾಸಕ ರಮೇಶ್‌ಬಾಬು ಸಮಸ್ಯೆ ಬಗ್ಗೆ ಸಚಿವರ ಬಳಿಯೇ ಪ್ರಸ್ತಾಪಿಸಿದರು.
ರೇಷ್ಮೆ ವಿಸ್ತೀರ್ಣ ಕೇಂದ್ರ ತೆರೆಯುವಂತೆ ಮನವಿ : ಮಳವಳ್ಳಿ, ಮದ್ದೂರು ತಾಲೂಕಿನಲ್ಲಿ ಹೆಚ್ಚಿನ ಜನರು ರೇಷ್ಮೆ ಬೆಳೆಗಾರರಿದ್ದು, ಈ ಭಾಗದಲ್ಲಿ ರೇಷ್ಮೆ ವಿಸ್ತೀರ್ಣ ಕೇಂದ್ರಗಳನ್ನು ಮುಚ್ಚಲಾಗುತ್ತಿದೆ. ರೇಷ್ಮೆ ವಿಸ್ತೀರ್ಣ ಕೇಂದ್ರಗಳನ್ನು ತೆರೆಯುವಂತೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಚಿವ ಚಲುವರಾಯ ಸ್ವಾಮಿಗೆ ಮನವಿ ಸಲ್ಲಿಸಿದರು. ಮಳವಳ್ಳಿ ತಾಲೂಕು ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಲ್ಲ. ಇರುವ ವೈದ್ಯಕೀಯ ಉಪಕರಣ ಗಳು ಸರಿಯಾಗಿ ಉಪಯೋಗವಾಗುತ್ತಿಲ್ಲ. ಇವು ಗಳ ಬಗ್ಗೆ ಕ್ರಮ ಕೈಗೊಳ್ಳಲು ಜಿಲ್ಲಾ ಆರೋಗ್ಯಾ ಧಿಕಾರಿಗಳಿಗೆ ತಿಳಿಸಿದರು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್‌ಆರ್ ಅನುದಾನವನ್ನು ಬಳಸಿ ಕೊಳ್ಳಬಹುದು. ಆದ್ದರಿಂದ ಕಾರ್ಖಾನೆಗಳಿಂದ ನೀಡಬೇಕಿರುವ ಸಿಎಸ್‌ಆರ್ ಅನುದಾನವನ್ನು ಸಭೆ ನಡೆಸಿ ಕ್ರೋಢೀಕರಿಸುವಂತೆ ಸೂಚಿಸಿದ್ದಾರೆ.