Advertisement
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿಯ ಪ್ರಯುಕ್ತ ಪೂಜೆಗೆ ತೆರಳುವಮುನ್ನ ನಗರದ ವಸತಿ ಗೃಹಕ್ಕೆ ಆಗಮಿಸಿದ್ದ ಸಚಿವರು,ಸಭಾಂಗಣದಲ್ಲಿ ರೈತರ ಸಭೆ ನಡೆಸಿ, ಸಮಸ್ಯೆಗಳನ್ನು ಆಲಿಸಿದ ಬಳಿಕ ಮಾತನಾಡಿದರು.
Related Articles
Advertisement
ವರದಿ ನೀಡಿ: ಕೆರೆಗಳ ಪರಿಶೀಲನೆ ವರದಿಯನ್ನು ಬುಧವಾರ ಅಥವಾ ಗುರುವಾರದೊಳಗೆ ನೀಡಬೇಕೆಂದು ಅಧಿಕಾರಿಗಳಿಗೆ ಗಡುವು ನೀಡಿದ ಸಚಿವರು, ಇದರಲ್ಲಿ ತಾರತಮ್ಯ ಎಸಗಿದರೆ ಮುಂದಿನ ಕ್ರಮಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿದ್ಯುತ್ ಸಮಸ್ಯೆ: ರೈತ ಮುಖಂಡರ ಸಭೆಯ ಬಳಿಕ ಕೃಷಿ ಪಂಪ್‌ಸೆಟ್‌ವುಳ್ಳ ಮುಖಂಡರೊಂದಿಗೆಸಭೆ ನಡೆಸಿ, ಸರ್ಕಾರದ ನಿಯಮದಂತೆ ದಿನಕ್ಕೆಒಂದೇ ಪಾಳಿಯಲ್ಲಿ 7 ಗಂಟೆ ವಿದ್ಯುತ್ ಪೂರೈಕೆಮಾಡಬೇಕು. ಆದರೆ, ತಾಲೂಕಿನಲ್ಲಿ ಆ ರೀತಿಮಾಡುತ್ತಿಲ್ಲ ಎಂದು ರೈತರ ಮಾತನ್ನು ಆಲಿಸಿದ ಸಚಿವರು, ಬುಧ ವಾರದಿಂದಲೇ ಒಂದೇ ಪಾಳಿಯದಲ್ಲಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕೆಂದು ಸ್ಥಳದಲ್ಲೇ ಇದ್ದ ಸೆಸ್ಕ್ ಕಾರ್ಯಪಾಲಕ ಅಭಿಯಂತರ ಪ್ರೀತಂ ಅವರಿಗೆ ಖಡಕ್ ಸಂದೇಶ ನೀಡಿದರು.
ಮನವಿ ಪಡೆಯಲು ನಿರಾಕರಣೆ: ಪಟ್ಟಣದ ನಗರಸಭೆಗೆ ನಗರೋತ್ಥಾನ ಯೋಜನೆಯಿಂದ 30 ಕೋಟಿ ರೂ. ಹಣ ಬಂದಿದ್ದು, ಅದನ್ನು ಬೋರ್ಡ್‌ತೀರ್ಮಾನದಂತೆ ಕ್ರಮಕೈಗೊಳ್ಳಬೇಕೆಂದು ಶಾಸಕರಮಾತಿಗೆ ಕಿವಿಗೊಡಬಾರದೆಂದು ನಗರಸಭೆ ಅಧ್ಯಕ್ಷೆಸುಶೀಲಾ ನೇತೃತ್ವದಲ್ಲಿ ಸದಸ್ಯರು ಸಚಿವರಿಗೆ ಮನವಿಕೊಡಲು ಬಂದಿದ್ದರು. ಆದರೆ, ಸಚಿವರು ತಿರಸ್ಕಾರ ಮಾಡಿದ್ದರಿಂದ ಅಸಮಾಧಾನಗೊಂಡು ಸಭಾಂಗಣದಿಂದ ಹೊರ ನಡೆದರು.
ಪ್ರತಿಕ್ರಿಯೆ: ನಗರಸಭಾ ಸದಸ್ಯರ ಅಸಮಾಧಾನದ ಬಗ್ಗೆ ಸಚಿವ ಸೋಮಣ್ಣ ಅವರನ್ನು ಪ್ರಶ್ನಿಸಿದಾಗ, ಅಧಿ
ಕಾರಿಗಳ ಸಭೆ ನಡೆಯುವ ವೇಳೆ ಬಂದಾಗ ನಾನು ಏನು ಹೇಳಬೇಕು. ನೀವು ಊಹಿಸಿಕೊಳ್ಳಿ ಎಂದು ಹೇಳಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದರು.
ಸಭೆಯಲ್ಲಿ ಶಾಸಕ ಎನ್.ಮಹೇಶ್, ಹನೂರು ಶಾಸಕ ಆರ್.ನರೇಂದ್ರ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಎಸ್ಪಿ ಶಿವಕುಮಾರ್, ಎಎಸ್ಪಿ ಸುಂದರರಾಜ್, ಜಿಪಂ ಸಿಇಒ ಗೀತಾ, ಮಾಜಿ ಶಾಸಕ ಜಿ.ಎ ನ್.ನಂಜುಂಡಸ್ವಾಮಿ, ಡಿವೈಎಸ್ಪಿ ನಾಗರಾಜು, ಜಿಲ್ಲಾಯೋಜನಾಧಿಕಾರಿ ಸುರೇಶ್ ಇದ್ದರು.