Advertisement

Vasantha ಬಂಗೇರರ ಮನೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ಸಾಂತ್ವನ

12:45 AM May 20, 2024 | Team Udayavani |

ಬೆಳ್ತಂಗಡಿ: ವಸಂತ ಬಂಗೇರ ಅವರು ನಮ್ಮ ತಂದೆ ಬಂಗಾರಪ್ಪರಂತೆ ಶುದ್ಧತೆ ಮತ್ತು ನೇರ ನುಡಿಯಿಂದಲೇ ಜನರಿಗೆ ಹತ್ತಿರವಾದವರು. ಬಂಗೇರರ ನಿಧನದ ಸಮಯದಲ್ಲಿ ನಾನು ಕಾರಣಾಂತರಗಳಿಂದ ಬರಲಾಗಿರಲಿಲ್ಲ. ಪಕ್ಷಾತೀತವಾದ ಅವರ ನಡೆ ಮಾದರಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

Advertisement

ಅವರು ಇತ್ತೀಚೆಗೆ ನಿಧನ ಹೊಂದಿದ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರ ನಿವಾಸಕ್ಕೆ ಶನಿವಾರ ಆಗಮಿಸಿ ಪತ್ನಿ ಸುಜಿತಾ ವಿ. ಬಂಗೇರ, ಪುತ್ರಿಯರಾದ ಪ್ರೀತಿತಾ, ಬಿನುತಾ, ಧರ್ಮ ವಿಜೇತ್‌, ಸಂಜೀವ್‌ ಕಾನೆಕಲ್‌ ಹಾಗೂ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್‌ ಸದಸ್ಯರಾದ ಮಂಜುನಾಥ್‌ ಭಂಡಾರಿ ಜತೆಗಿದ್ದರು.

ಪ್ರಜ್ವಲ್‌ ಪ್ರಕರಣ:
ಎಸ್‌ಐಟಿ ಉತ್ತರಿಸಲಿದೆ
ಬೆಳ್ತಂಗಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ವಿದೇಶದಲ್ಲಿ ಇರುವ ಅವರನ್ನು ಕರೆತರಲು ಕೇಂದ್ರದ ನೆರವು ಬೇಕಿದೆ. ಎಸ್‌ಐಟಿ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದರು.

ಈಬಾರಿ ಪರೀಕ್ಷೆಯ ಪಾವಿತ್ರ್ಯ ಕಾಪಾಡಲು ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಠಿನ ನಿರ್ಧಾರ ತೆಗೆದುಕೊಂಡಿದ್ದೆವು. ಅದರಿಂದ ಫಲಿತಾಂಶದಲ್ಲಿ ಶೇ. 30 ಕುಸಿತವಾಗಿದೆ. ಮುಂದೆ ಮರು ಪರೀಕ್ಷೆಗೂ ಅವಕಾಶ ನೀಡಲಾಗಿದೆ. ಈವರ್ಷ ಮಾತ್ರ ಅಂಕ ಸಡಿಲಿಕೆಗೆ ಮುಖ್ಯಮಂತ್ರಿ ಅನುಮತಿಯಂತೆ ಅವಕಾಶ ನೀಡಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಬದಲಾಗಲಿದೆ. ಟೀಕೆ ಟಿಪ್ಪಣಿಗಳು ಇದ್ದೇ ಇರುತ್ತವೆ. ಮಕ್ಕಳಿಗೆ ಯಾವುದು ಉತ್ತಮ ಅನ್ನುವುದಷ್ಟೇ ನಮಗೆ ಬೇಕಿರುವುದು ಎಂದರು.

Advertisement

ನಾಳೆ ಸಿಎಂ ಭೇಟಿ
ಬೆಳ್ತಂಗಡಿ: ಗುರುವಾಯನಕೆರೆ ಮಂಜಿಬೆಟ್ಟು ಎಫ್‌.ಎಂ. ಗಾರ್ಡನ್‌ನಲ್ಲಿ ಮೇ 21ರಂದು ನೆರವೇರಲಿರುವ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರ ಉತ್ತರಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

ಬೆಳಗ್ಗೆ 11ಕ್ಕೆ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಹೊರಟು ಮಂಗಳೂರಿಗೆ 12ಕ್ಕೆ ಆಗಮಿಸಲಿದ್ದು, ಅಲ್ಲಿಂದ ರಸ್ತೆ ಮೂಲಕ ಮಧ್ಯಾಹ್ನ 1 ಗಂಟೆಗೆ ಗುರುವಾಯನಕೆರೆಗೆ ತಲುಪುವರು.

ಕಾರ್ಯಕ್ರಮದ ಬಳಿಕ 2 ಗಂಟೆಗೆ ಹೊರಟು 3ಕ್ಕೆ ಬಜಪೆಯಿಂದ ವಿಮಾನದಲ್ಲಿ ಬೆಂಗಳೂರಿಗೆ ತೆರಳು ವರು ಎಂದು ಸರಕಾರದ ಅಪರ ಕಾರ್ಯದರ್ಶಿ ಪ್ರಕಟನೆ ತಿಳಿಸಿದೆ. ಬಂಗೇರಅವರ ಕುಟುಂಬಸ್ಥರು ಮುಖ್ಯಮಂತ್ರಿಯನ್ನು ಭೇಟಿಯಾಗಿ ಆಮಂತ್ರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next