ಶಿರಸಿ: ಸರಕಾರಿ ಶಾಲೆಗಳಲ್ಲಿ ಒಂದನ್ನೂ ಯಾರೂ ಟೇಕ್ ಓವರ್ ಮಾಡಲು ಅವಕಾಶ ಇಲ್ಲ. ಸರಕಾರಿ ಶಾಲೆಗಳ ಖಾಸಗೀಕರಣಕ್ಕೆ ಅವಕಾಶವಿಲ್ಲ ಎಂದು ಶಿಕ್ಷಣ ಸಚಿವ ಸಚಿವ ಮಧು ಬಂಗಾರಪ್ಪ ಹೇಳಿದರು.
ಅವರು ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ, ನಮಗೆ ಎಲ್ಲರ ಸಹಕಾರ ಬೇಕು. ವಿವಿಧ ಕಂಪನಿಗಳ ಸಾಮಾಜಿಕ ಜವಬ್ದಾರಿ ಹಣವನ್ನು ಶಿಕ್ಷಣಕ್ಕೆ ಕೊಡಲು ಮನವಿ ಮಾಡಲಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವದು ನಮ್ಮ ಜವಬ್ದಾರಿ ಇದೆ ಎಂದರು.
ಕೆಪಿಎಸ್ ಮಾದರಿಯ ಶಾಲಾ ಆವಾರ ರಾಜ್ಯದ 6000 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಮ್ಮ ಅವಧಿಯಲ್ಲಿ ಗರಿಷ್ಠ 2000 ಮಾಡಲು ಯೋಜಿಸಿದ್ದೇವೆ. ಅಂಗನವಾಡಿಯಿಂದ ಪಿಯುಸಿ ತನಕ ನಡೆಯಲಿದೆ. ಇದರಿಂದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ಅನುಕೂಲ ಆಗಲಿದೆ ಎಂದರು.
ಪ್ರಧಾನಿಗಳು ದೇಶಕ್ಕೆ ತಂದೆಯಿದ್ದಂತೆ. ಸಂತೋಷದ ಸಮಯದಲ್ಲಿ ಇಸ್ರೋ ಭೇಟಿಗೆ ರಾಜ್ಯಕ್ಕೆ ಬಂದಂತೆ ಕಷ್ಟದಲ್ಲಿ ಇರುವ ಮಣಿಪುರಕ್ಕೆ ಯಾಕೆ ಹೋಗಿಲ್ಲ? ಎನ್ನುವುದಕ್ಕೆ ಬಿಜೆಪಿಯ ಯಾವೊಬ್ಬ ನಾಯಕ ಅಥವಾ ಕಾರ್ಯಕರ್ತ ಉತ್ತರಿಸಬೇಕು. ಮೋದಿ ರಾಜ್ಯಕ್ಕೆ ಬಂದಾಗ ಬಿಜೆಪಿ ನಾಯಕರನ್ನು ಇಡಬೇಕಾದ ಜಾಗದಲ್ಲಿ ಇಟ್ಟಿದ್ದಾರೆ. ವಿರೋಧ ಪಕ್ಷದ ನಾಯಕನೂ ಇಲ್ಲದ ಬಿಜೆಪಿ ಮೋದಿ ಹೆಸರಲ್ಲಿ ಮತ ಕೇಳಿದ್ದರು. ಈಗ ಅದೇ ಮೋದಿ ಇವರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೆಲಸ ಇಲ್ಲದ ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಯ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಆದರೆ ಸರ್ಕಾರ ಬಂದು ಕೇವಲ 100 ದಿನದಲ್ಲಿ ನಾವು ಹೇಳಿದ್ದ ಗ್ಯಾರಂಟಿಯನ್ನು ಅನುಷ್ಠಾನ ಮಾಡಲಾಗಿದೆ. ದೇಶದಲ್ಲೇ ಯೋಜನೆಯ ಬಗ್ಗೆ ಮಾತನಾಡುವ ರೀತಿ ಜಾರಿಗೆ ತರಲಾಗಿದೆ. ಕಾರಣ ವಿರೋಧ ಪಕ್ಷದವರು ಟೀಕೆ ಟಿಪ್ಪಣಿ ನಿಲ್ಲಿಸಿ ಸರ್ಕಾರದ ಯೋಜನೆಗಳನ್ನು ಬೆಂಬಲಿಸಲಿ ಎಂದರು. ಮುಂದಿನ ದಿನಗಳಲ್ಲಿ ಹೆಚ್ಚಿನ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಯೋಚಿಸಲಾಗುತ್ತಿದೆ ಎಂದರು. ಶೇ.70,80 ರಷ್ಟು ಸಮಸ್ಯೆ ನೀಗಿಸುವಷ್ಟು ಮಾಡಲಾಗುತ್ತಿದೆ. ಜೊತೆಗೆ ಶಾಲೆಯಲ್ಲಿ ಕೊಠಡಿ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ರಾಷ್ಟ್ರ ಪ್ರಶಸ್ತಿಯಾದ ಪುರಸ್ಕೃತ ನಾರಾಯಣ ಭಾಗ್ವತ್ ಅವರಿಗೆ ಮಧು ಬಂಗಾರಪ್ಪ ಶುಭ ಕೋರಿದರು. ಈ ವೇಳೆ ಶಾಸಕ ಭೀಮಣ್ಣ ನಾಯ್ಕ ಇದ್ದರು.
ಕಾಂಗ್ರೆಸ್ ಗೆ ಹೊಟ್ಟೆ ತುಂಬಿದೆ. ಆದರೆ ಯಾರೇ ಬಂದರೂ ಸ್ವಾಗತ ಮಾಡುತ್ತೇವೆ. ಶಾಸಕ ಶಿವರಾಮ ಹೆಬ್ಬಾರರು ಬಂದರೂ ಸ್ವಾಗತ. ತಾಲೂಕು, ಜಿಲ್ಲಾ, ಸಂಸತ್ ಸ್ಥಾನ ತನಕವೂ ಗೆದ್ದೇ ಗೆಲ್ಲುತ್ತೇವೆ.
– ಮಧು ಬಂಗಾರಪ್ಪ,ಸಚಿವ
ಇದನ್ನೂ ಓದಿ: Weddings: 5 ಕೋಟಿಯ ಉಂಗುರ, 1 ಕೋಟಿ ರೂ. ಸೀರೆ.. ಸೌತ್ ಸೆಲೆಬ್ರಿಟಿಗಳ ದುಬಾರಿ ಮದುವೆಗಳಿವು