Advertisement

ಸಚಿವ ಕೃಷ್ಣಪ್ಪ ವಿರುದ್ಧ ಭೂಕಬಳಿಕೆ ಆರೋಪ

12:04 PM May 06, 2017 | Team Udayavani |

ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 350 ಕೋಟಿ ರೂ. ಮೌಲ್ಯದ 4.20 ಎಕರೆ ಸರ್ಕಾರಿ ಜಾಗವನ್ನು ವಸತಿ ಸಚಿವ ಎಂ.ಕೃಷ್ಣಪ್ಪ ಕಬಳಿಕೆ ಮಾಡಿದ್ದಾರೆ ಎಂದು ಪಾಲಿಕೆ ಮಾಜಿ ಸದಸ್ಯ ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಪ್ಪ ಭೂ ಕಬಳಿಕೆ ಮಾಡಿ “ಬ್ಲೂ ಜೇ ಅರಿಸ್ಟೋ’ ಎಂಬ ಖಾಸಗಿ ಸಂಸ್ಥೆಯ ಪಾಲುದಾರಿಕೆಯೊಂದಿಗೆ ವಸತಿ ನಿವೇಶನಗಳನ್ನು ಮಾಡಿದ್ದಾರೆ ಎಂದು ದೂರಿದರು. 

Advertisement

ಏನಿದು ಆರೋಪ?: ಬೆಂಗಳೂರು ಉತ್ತರಹಳ್ಳಿ ಹೋಬಳಿಯ ಬೈರಸಂದ್ರ ಗ್ರಾಮದ ನಾನಾ ಸರ್ವೇ ನಂಬರ್‌ ಗಳಲ್ಲಿ 150 ಎಕರೆ ಸರ್ಕಾರಕ್ಕೆ ಜಮೀನಿದ್ದು, ಕೆಲವು ರೈತರು ಜೀವನೋಪಾಯಕ್ಕಾಗಿ ಕೃಷಿ ಮಾಡಿಕೊಂಡಿದ್ದರು. ಆದರೆ, ನಂತರ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಸ್ವತ್ತನ್ನು ಕಬಳಿಸಲಾಗಿತ್ತು. 

ಬೈರಸಂದ್ರ ಕೆರೆಗೆ ಹೊಂದಿಕೊಂಡಿರುವ 4.20 ಎಕರೆ (1,96,020 ಚದರ ಅಡಿ) ಜಾಗವನ್ನು ಎಂ.ಎಸ್‌.ಟಿ.ಮುಷ್ಕಕ್‌ ಹಾಗೂ ಸಚಿವ ಎಂ.ಕೃಷ್ಣಪ್ಪ ಕಬಳಿಕೆ ಮಾಡಿಕೊಂಡು “ಬ್ಲೂ ಜೇ ಅರಿಸ್ಟೋ’ ಸಂಸ್ತೆ ನಿವೇಶನಗಳನ್ನು ಮಾಡಿ ಪ್ರತಿ ಚದರ ಅಡಿಗೆ 18 ಸಾವಿರ ರೂ. ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ಆರೋಪ ಮಾಡುವಾಗಲೇ ಸಂಸ್ಥೆ ನಿರ್ದೇಶಕರ ಆಗಮನ
ಪತ್ರಿಕಾಗೋಷ್ಠಿ ಸಂದರ್ಭದಲ್ಲೇ  ಸ್ಥಳಕ್ಕೆ ಆಗಮಿಸಿದ “ಬ್ಲೂ ಜೇಅರಿಸ್ಟೋ’ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಮತ್ತು ಸಂಸ್ಥೆಯ ಪರ ವಕೀಲ ಪಾಟೀಲ್‌, “ಇದು ಆಧಾರ ರಹಿತ ಆರೋಪ,’ ಎಂದು ಹೇಳಿದರು. ಈ ವೇಳೆ ಎನ್‌.ಆರ್‌. ರಮೇಶ್‌ ಹಾಗೂ “ಬ್ಲೂ ಜೇ ಅರಿಸ್ಟೋ’ ಸಂಸ್ಥೆಯ ನಿರ್ದೇಶಕರ ನಡುವೆ ಮಾತಿನ ಚಕಮಕಿಯೂ ನಡೆಯಿತು. “ನಿಮ್ಮದೇನಾದರೂ ಸ್ಪಷ್ಟನೆ ಇದ್ದರೆ ನೀವೂ ಸುದ್ದಿಗೋಷ್ಟಿ ನಡೆಸಿ ಕೊಡಿ,’ ಎಂದು ರಮೇಶ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next