Advertisement

ಸೋಮವಾರ ವಿಶ್ವಾಸಮತ ಸಾಬೀತು ಪಡಿಸಿ: ರಾಜ್ಯಪಾಲರ ಸೂಚನೆ; ಇಕ್ಕಟ್ಟಿನಲ್ಲಿ ಕಮಲ್ ನಾಥ್ ಸರ್ಕಾರ

10:05 AM Mar 16, 2020 | Mithun PG |

ಮಧ್ಯಪ್ರದೇಶ: ನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶ ರಾಜ್ಯಪಾಲ ಲಾಲ್ ಜಿ ಟಂಡನ್, ಸೋಮವಾರ ವಿಶ್ವಾಸ ಮತ ಸಾಬಿತು ಪಡಿಸುವಂತೆ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ನಿರ್ದೇಶನ ನೀಡಿದ್ದಾರೆ.

Advertisement

22 ಶಾಕರು ರಾಜಿನಾಮೆ ನೀಡಿರುವ ವಿಚಾರವನ್ನು ಸ್ಪೀಕರ್ ತಿಳಿಸಿದ್ದಾರೆ. ಆದುರಿದಂದ ಸಂವಿಧಾನದ ವಿಧಿ 174 ಮತ್ತು 175(2) ಅಡಿಯಲ್ಲಿ ಮಾರ್ಚ್ 16ರಂದು ವಿಶ್ವಾಸ ಮತ ಸಾಬಿತು ಪಡಿಸುವಂತೆ ತಿಳಿಸಿದ್ದೇನೆ. ಬೆಳ್ಗೆಗ್ಗೆ 11 ಗಂಟೆಗೆ ನಾನು ಪ್ರಾಸ್ತವಿಕ ಭಾಷಣ ಆಡಲಿದ್ದು, ಅದಾದ ನಂತರ ವಿಶ್ವಾಸ ಮತ ಸಾಬೀತುಪಡಿಸಲಾಗುತ್ತದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಇದರಿಂದಾಗಿ 14 ತಿಂಗಳ ಕಮಲ್ ನಾಥ್ ಸರ್ಕಾರ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ. ಈಗಾಗಲೇ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಮಾರ್ಚ್ 16ರಿಂದ ಬಜೆಟ್ ಅಧಿವೇಶನ ಆರಂಭವಾಗುವುದರಿಂದ ಅಂದೇ ವಿಶ್ವಾಸ ಮತವನ್ನು ಯಾಚಿಸುವಂತೆ ರಾಜ್ಯಪಾಲರು  ಸೂಚಿಸಿದ್ದಾರೆ.

ತಡರಾತ್ರಿ ನಡೆದ ಮಹತ್ವದ ಬೆಳವಣಿಗೆಯಲ್ಲಿ 22 ಬಂಡಾಯ ಶಾಸಕರ ಪೈಕಿ ಆರು ಶಾಸಕರ ರಾಜೀನಾಮೆಯನ್ನು ಸ್ಪೀಕರ್ ನರ್ಮದಾ ಪ್ರಸಾದ್ ಪ್ರಜಾಪತಿ ಸ್ವೀಕರಿಸಿದ್ದಾರೆ.

ಇದರೊಂದಿಗೆ ಒಟ್ಟಾರೇ  228 ಸದಸ್ಯ ಬಲದ ವಿಧಾನಸಭೆ ಸದಸ್ಯರ ಸಂಖ್ಯೆ 222 ಆಗಿದೆ. ಕಾಂಗ್ರೆಸ್ 108 ಶಾಸಕರನ್ನು ಹೊಂದಿದ್ದು, ಮೈತ್ರಿಪಕ್ಷಗಳ ಬೆಂಬಲದೊಂದಿಗೆ 115 ಶಾಸಕರ ಬೆಂಬಲ ಪಡೆದುಕೊಂಡಿದೆ.  ಸರಳ ಬಹುಮತಕ್ಕೆ 113 ಶಾಸಕರ ಅಗತ್ಯವಿದ್ದು, ಕಾಂಗ್ರೆಸ್  2 ಶಾಸಕರನ್ನು ಹೆಚ್ಚಿಗೆ ಹೊಂದಿದೆ. ಮತ್ತೊಂದೆಡೆ ಬಿಜೆಪಿ 107 ಸದಸ್ಯರನ್ನು ಹೊಂದಿದ್ದು, ಸರಳ ಬಹುಮತಕ್ಕೆ ಆರು ಶಾಸಕರ ಕೊರತೆಯಿದೆ.

Advertisement

ಮಾರ್ಚ್ 10 ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಪೈಕಿಯಲ್ಲಿ ಆರು ಶಾಸಕರನ್ನು ಸಚಿವ ಸ್ಥಾನದಿಂದ ರಾಜ್ಯಪಾಲರು ಈಗಾಗಲೇ ವಜಾಗೊಳಿಸಿದ್ದು, ತಮ್ಮ ಬಳಿ ಹಾಜರಾಗಲು ಎರಡು ಅವಕಾಶ ನೀಡಿದ್ದರೂ ಅವರು ವಿಚಾರಣೆಗೆ ಹಾಜರಾಗಲಿಲ್ಲ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅವರು ನೀಡಿರುವ ಹೇಳಿಕೆಗಳನ್ನು ಆಧರಿಸಿ ವಿಧಾನಸಭೆ ಸದಸ್ಯರಾಗಿ ಉಳಿಯಲು ಅವರು ಸಮರ್ಥವಾಗಿಲ್ಲ ತೀರ್ಮಾನಿಸಿರುವುದಾಗಿ  ಸ್ಪೀಕರ್ ಆದೇಶದಲ್ಲಿ ತಿಳಿಸಿದ್ದಾರೆ.

ಬಜೆಟ್ ಅಧಿವೇಶನದಲ್ಲಿ ಪ್ರತಿಯೊಬ್ಬರು ಹಾಜರಿದ್ದು, ಸರ್ಕಾರದ ಪರ ಮತ ಹಾಕುವಂತೆ ಆಡಳಿತ ಕಾಂಗ್ರೆಸ್, ಶಾಸಕರಿಗೆ ವಿಪ್ ಹೊರಡಿಸಿದೆ. ಸ್ಪೀಕರ್ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಗೋಪಾಲ್ ಭಾರ್ಗವ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next