Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರಿಬ್ಬರ ಮಾತುಗಳನ್ನು ನಾಯಕರು ಗಮನಿಸಿದ್ದಾರೆ. ಅದಕ್ಕೆ ಹೆಚ್ಚು ಮಹತ್ವ ಕೊಡಬೇಕಿಲ್ಲ. ನಾನು ಕೆಲಸ ಮಾಡ್ತಾ ಇಲ್ಲ ಎಂದರೆ ಅವರೇ ಮಾಡಿಕೊಳ್ಳಲಿ ಬಿಡಿ. ನನ್ನನ್ನ ಯಾರೂ ಕೇಳ್ಳೋ ಹಾಗಿಲ್ಲ, ಸಿಎಂ ಮತ್ತು ನಮ್ಮ ಅಧ್ಯಕ್ಷರು ನನ್ನನ್ನು ಕೇಳಬೇಕಷ್ಟೇ. ಶಿವರಾಮು ಅವರೆಲ್ಲಾ ನನಗೆ ಲೆಕ್ಕಕ್ಕೆ ಇಲ್ಲ ಎಂದು ಸಚಿವರು ತಮ್ಮನ್ನ ಕಡೆಗಣಿಸುತ್ತಿದ್ದಾರೆ ಎಂಬ ಶಿವರಾಮು ಆರೋಪಕ್ಕೆ ಕೆ.ಎನ್. ರಾಜಣ್ಣ ಅವರು ತಿರುಗೇಟು ನೀಡಿದರು.
Related Articles
Advertisement
ಲಕ್ಷ್ಮಣ ಸವದಿ ಬಿಜೆಪಿಗೆ ಹೋಗಲ್ಲ : ಲಕ್ಷ್ಮಣ್ ಸವದಿ ಕೂಡಾ ಬಿಜೆಪಿ ಸೇರ್ತಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ ಬಗ್ಗೆ ನಾನು ಸವದಿ ಅವರೊಂದಿಗೆ ನಿನ್ನೆ ಮಾತನಾಡಿದ್ದೇನೆ. ಲಕ್ಷ್ಮಣ್ ಸವದಿ ಅವರು ನನ್ನ ಉತ್ತಮ ಸ್ನೇಹಿತರು. ನಾನು ಯಾವುದೇ ಕಾರಣಕ್ಕೂ ಹೋಗೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಓಟಿಗಾಗಿ ಮೋದಿ ರಾಮನ ಹೆಸರೇಳ್ತಾರೆ: ಸಚಿವ : ರಾಮ ಮಂದಿರ ವಿಚಾರದಲ್ಲಿ ಮತ್ತೂಮ್ಮೆ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ ರಾಜಣ್ಣ, ನಾವೂ ರಾಮನ ಭಕ್ತರು, ನಾವು ಪೂಜೆ ಮಾಡೋದು ದಶರಥ ರಾಮ ನನ್ನು ಮೋದಿ ರಾಮನನ್ನಲ್ಲ ಎನ್ನುವ ಮೂಲಕ ಸಹಕಾರ ಸಚಿವ ಕೆ. ಎನ್. ರಾಜಣ್ಣ ರಾಮ ಮಂದಿರ ವಿರುದ್ಧ ಟೀಕೆ ಮಾಡಿದರು. ಆದರೆ ಅವರೇ ಹೆಚ್ಚು ರಾಮನ ಪೂಜೆ ಮಾಡ್ತಾರೆ ಎಂದಿದ್ದ ಮಾಜಿ ಪ್ರಧಾನಿ ದೇವೇಗೌಡರಿಗೆ ತಿರುಗೇಟು ನೀಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಮನ ಹೆಸರೇಳ್ಳೋದು ಕೇವಲ ಓಟಿಗೋಸ್ಕರ ಎಂದು ಸಚಿವರು ವಾಗ್ಧಾಳಿ ನಡೆಸಿದರು.