Advertisement

ಹುಲಿಕೆರೆ, ಬೆರಟಿಕೆರೆಗಳಿಗೆ ಲಿಫ್ಟ್ ಮೂಲಕ ನೀರು ತುಂಬಿಸುವ ಪ್ರಸ್ತಾವ ಇದೆ: ಮಾಧುಸ್ವಾಮಿ

11:26 PM Feb 15, 2022 | Team Udayavani |

ಬೆಂಗಳೂರು: ಚಿಕ್ಕಮಗಳೂರು ಕ್ಷೇತ್ರದ ಐಯ್ಯನ ಕೆರೆ ತುಂಬಿ ಕೋಡಿ ಬಿದ್ದ ನೀರು ಹುಲಿಕೆರೆ-ಬೆರಟಿಕೆರೆ ಕೆರೆಗಳಿಗೆ ಲಿಫ್ಟ್ ಮೂಲಕ ತುಂಬಿಸುವ ಯೋಜನೆ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಸಿ.ಟಿ.ರವಿ ಅವರ ಪರವಾಗಿ ಬೆಳ್ಳಿ ಪ್ರಕಾಶ್‌ ಪ್ರಸ್ತಾಪಕ್ಕೆ ಉತ್ತರಿಸಿದ ಅವು, ಐಯ್ಯನ ಕೆರೆ ತುಂಬಿ ಕೋಡಿ ಮೂಲಕ ಹೆಚ್ಚುವರಿಯಾಗಿ ಹರಿದು ಹೋಗುವ ನೀರು ಹುಲಿಕೆರೆ, ಬೆರಟಿಕೆರೆ, ನಾಗೇನಹಳ್ಳಿ ಕೆರೆಗಳಿಗೆ ತುಂಬಿಸಲು ಏತ ನೀರಾವರಿ ಯೋಜನೆ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಣದಯ ತಿಳಿಸಿದರು.

ಇದನ್ನೂ ಓದಿ:ಶ್ರೀರಂಗಪಟ್ಟಣ : ಹೈಕೋರ್ಟ್ ಆದೇಶ ಉಲ್ಲಂಘಿಸಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ಶಿಕ್ಷಕಿ

ಅಂದಾಜು 9.96 ಕೋಟಿ ರೂ. ಮೊತ್ತದಲ್ಲಿ ಯೋಜನೆ ರೂಪಿಸಲಾಗಿದ್ದು ತಾಂತ್ರಿಕ ಮೌಲ್ಯ ನಿರ್ಣಯ ಸಮಿತಿ ಸಭೆಯ ಮುಂದೆ ಮಂಡಿಸಿ ತೀರುವಳಿ ಪಡೆಯಬೇಕು. ಆನುದಾನದ ಲಭ್ಯತೆ ಅನುಸಾರವಾಗಿ ಆದ್ಯತೆ ಮೇಲೆ ಕಾಮಗಾರಿ ಕೈಗೊಳ್ಳಲು ಪರಿಶೀಲಿಸಲಾಗುವುದು ಎಂದು ಹೇಳಿದರು.

ಬೆಳೆ ನಮೂದಿಸಿ ಪಹಣಿಗೆ ಅವಕಾಶ
ಬೆಂಗಳೂರು: ರೈತರು ಪಹಣಿ ಪಡೆಯಲು ಬೆಳೆ ನಮೂದು ಮಾಡದಿದ್ದರೆ, ಹಿಂದಿನ ವರ್ಷದ ಬೆಳೆ ನಮೂದು ಮಾಡಿ ಪಹಣಿ ನೀಡಲು ಆದೇಶ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

Advertisement

ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆಯಲ್ಲಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರೈತರು ತೆಂಗು, ಅಡಿಕೆ ಮಾವು ಸಹಿತ ತೋಟಗಾರಿಕೆ ಬೆಳೆಗಳಲ್ಲಿ ಇತರ ಬೆಳೆಗಳನ್ನು ಬೆಳೆದು ಅದನ್ನು ಪಹಣಿಯಲ್ಲಿ ಸೇರಿಸದಿದ್ದರೆ, ಪಹಣಿ ಪಡೆಯಲಾಗುತ್ತಿಲ್ಲ. ಹೀಗಾಗಿ ರೈತರಿಗೆ ಹಿಂದಿನ ವರ್ಷದ ಬೆಳೆ ನಮೂದಿಸಿ ಪಹಣಿ ನೀಡುವಂತೆ ಆದೇಶ ಹೊರಡಿಸಲಾಗಿದೆ ಎಂದರು.

ಇದಕ್ಕೂ ಮೊದಲ ಮಾತನಾಡಿದ ಶಾಸಕ ರಾಜೇಗೌಡ, ಮಲೆನಾಡು ಭಾಗದಲ್ಲಿ ರೈತರು ಬ್ಯಾಂಕ್‌ ಸಾಲ, ವಿಮಾ ಹಣ ಸಹಿತ ವಿವಿಧ ಸೌಲಭ್ಯ ಪಡೆಯಲು ಪಹಣಿ ಪಡೆಯಲು ತೊಂದರೆಯಾಗುತ್ತಿದೆ. ಕಳೆದ ಅಧಿವೇಶನದಲ್ಲಿ ಪಹಣಿ ಕೊಡಿಸುವ ಭರವಸೆ ನೀಡಿದ್ದರು. ಆದರೆ ಈಗಲೂ ಸರಕಾರಿ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈತರಿಗೆ ಪಹಣಿ ದೊರೆಯುವಂತೆ ಮಾಡಲು ಮನವಿ ಮಾಡಿದರು.

ಜೆಡಿಎಸ್‌ನ ಎಚ್‌.ಕೆ. ಕುಮಾರಸ್ವಾಮಿ ಪ್ರತಿಕ್ರಿಯಿಸಿ, ತೆಂಗು, ಅಡಿಕೆ, ರಬ್ಬರ್‌ ಪ್ರತಿವರ್ಷ ಬೆಳೆಯುವ ಬೆಳೆಗಳಲ್ಲ. ರೈತರು ಯಾವ ಬೆಳೆ ಬೆಳೆಯುತ್ತಾರೋ ಅದನ್ನು ನಮೂದಿಸಿ ಪಹಣಿ ನೀಡಲಿ ಎಂದು ಮನವಿ ಮಾಡಿದರು.

ಕಾಲಂನಲ್ಲಿ ನಮೂದಿಸಿ
ಇದಕ್ಕೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಧ್ವನಿಗೂಡಿಸಿದ್ದು, ಪ್ರತಿ ವರ್ಷ ರೈತರು ಎರಡು ಬಾರಿ ಪಹಣಿ ಪಡೆಯಲು ಸಾಧ್ಯವಾಗುವುದಿಲ್ಲ. ತೆಂಗು, ಕಾಫಿ ಪ್ರತೀ ವರ್ಷ ಬೆಳೆಯುವ ಬೆಳೆಯಲ್ಲ. ಅದಕ್ಕೆ ಒಂದು ಕಾಲಂ ಮಾಡಿ, ಯಾವ ಬೆಳೆ ಬೆಳೆಯುತ್ತಾರೆ ಎನ್ನುವುದನ್ನು ನಮೂದಿಸಬೇಕು. ಅಧಿಕಾರಿಗಳು ಯಾವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ ಎನ್ನುವುದು ನಿಮಗೂ ಗೊತ್ತಿದೆ ಎಂದರು. ಅದಕ್ಕೆ ಉತ್ತರಿಸಿದ ಸಚಿವ ಮಾಧುಸ್ವಾಮಿ, ಕಾಫಿ, ತೆಂಗಿನ ತೋಟದಲ್ಲಿ ಹೂ, ರಾಗಿ ಬೇರೆ ಬೆಳೆ ಬೆಳೆದಾಗ ಅದನ್ನು ನಮೂದಿಸಬೇಕು. ಯಾವುದೇ ಬೆಳೆ ಬೆಳೆಯದಿದ್ದರೆ, ಹಿಂದಿನ ವರ್ಷದ ಬೆಳೆಯನ್ನು ನಮೂದಿಸಬೇಕೆಂದು ಸೂಚನೆ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next