Advertisement

ಇಡಿಗೆ ಮಾಹಿತಿ ನೀಡಿದ ಸಚಿವ ಜಮೀರ್‌

12:39 AM Jul 06, 2019 | mahesh |

ಬೆಂಗಳೂರು: ಸಾವಿರಾರು ಮಂದಿ ಹೂಡಿಕೆದಾರರಿಗೆ ವಂಚಿಸಿರುವ ಐಎಂಎ ಕಂಪೆನಿಯ ಜತೆಗಿನ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್‌ ಅಹ್ಮದ್‌ಖಾನ್‌ ಶುಕ್ರವಾರ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿ ಮಾಹಿತಿ ನೀಡಿದರು.

Advertisement

ಐಎಂಎ ಕಂಪೆನಿಗೆ ಆಸ್ತಿ ಮಾರಾಟ ಮಾಡಿ ಹಣ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಜುಲೈ 5ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸಚಿವ ಜಮೀರ್‌ ಅವರಿಗೆ ಇಡಿ ಸಮನ್ಸ್‌ ಜಾರಿಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ಸಚಿವ ಜಮೀರ್‌ ಅಹ್ಮದ್‌ ಶುಕ್ರವಾರ ಶಾಂತಿನಗರದಲ್ಲಿರುವ ಇ.ಡಿ ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿದ್ದರು. ಸಚಿವ ಜಮೀರ್‌ ಅವರನ್ನು ತನಿಖಾಧಿಕಾರಿಗಳ ತಂಡ ಐಎಂಎ ಜತೆಗಿನ ಹಣದ ವ್ಯವಹಾರದ ಬಗ್ಗೆ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಸಚಿವ ಜಮೀರ್‌ ಅಹ್ಮದ್‌ ಐಎಎಂ ಕಂಪೆನಿಗೆ ಆಸ್ತಿ ಮಾರಾಟ ಮಾಡಿ ಹಣ ಪಡೆದ ಸಂಬಂಧ ಐಎಂಎ ಕೆಲವು ದಾಖಲೆಗಳನ್ನು ಸಲ್ಲಿಸಿದ್ದಾರೆ.

ಇ.ಡಿ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಜಮೀರ್‌ ಅಹ್ಮದ್‌, ‘ನಾನು ಯಾವುದೇ ಅಕ್ರಮ ಎಸಗಿಲ್ಲ. 2008ರಲ್ಲಿ ನಿವೇಶನ ಮಾರಾಟ ಕುರಿತ ದಾಖಲೆಗಳನ್ನು ಇಡಿ ಕೇಳಿದ್ದು ಅವುಗಳನ್ನು ನೀಡಿದ್ದೇನೆ. ಈ ಕುರಿತು ಆದಾಯ ತೆರಿಗೆ ಇಲಾಖೆ, ಲೋಕಾಯುಕ್ತ, ಚುನಾವಣಾ ಆಯೋಗದ ಅಫಿಡವಿಟ್‌ನಲ್ಲಿ ಸಲ್ಲಿಸಿದ್ದೇನೆ’ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next