ಯಾದಗಿರಿ/ಶಹಾಪುರ: ಐತಿಹಾಸಿಕ ಶ್ರೀಮಂತಿಕೆ ಇರುವ ಯಾದಗಿರಿ ಜಿಲ್ಲೆಯ ಶಹಾಪುರದ ಶಿರವಾಳ ಗ್ರಾಮದ ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಕ್ಷೇತ್ತ, ಜನರಲ್ಲಿ ನಮ್ಮ ಸಂಸ್ಕೃತಿ, ವಾಸ್ತುಶಿಲ್ಪ ಹಾಗೂ ಇತಿಹಾಸದ ಬಗ್ಗೆ ಕಾಳಜಿ ಬರುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ‘ನಮ್ಮ ಸ್ಮಾರಕ ದರ್ಶನ’ ಪ್ರವಾಸ ಕೈಗೊಳ್ಳಾಗಿದೆ ಎಂದು ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ ತಿಳಿಸಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಶಿರವಾಳದ ಐತಿಹಾಸಿಕ ದೇವಾಲಯಗಳ ಸಂಕೀರ್ಣ ವೀಕ್ಷಿಸಿದ ನಂತರ ಅವರು ಮಾತನಾಡಿದರು.
ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆ ಹಾಗೂ ದ ಯುನೈಟೆಡ್ ಬೆಂಗಳೂರು ಸಹಯೋಗದೊಂದಿಗೆ ಏರ್ಪಡಿಸಲಾದ ‘ನಮ್ಮ ಸ್ಮಾರಕ ದರ್ಶನ, ಸಂರಕ್ಷಣಾ ಪ್ರವಾಸ’ ಕಾರ್ಯಕ್ರಮದಲ್ಲಿ ಶಿರವಾಳ ಗ್ರಾಮದ ಐತಿಹಾಸಿಲ ದೇವಾಲಯಗಳ ಸುತ್ತು ವರೆದು ಕ್ಷೇತ್ರ ಕಾರ್ಯ ಮಾಡಿದರು.
ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಕಲೆ, ಇತಿಹಾಸದ ಪ್ರಜ್ಞೆ ಮೂಡಬೇಕಾದರೆ ಹಿರಿಯರಾದ ನಾವೆಲ್ಲರೂ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಬೇಕು, ಈ ಸ್ಥಳಗಳ ವಾರಸುದಾರ ನಾವೆಲ್ಲರೂ ಇದ್ದೇವೆ ಹಾಗಾಗಿ ಕಾಪಾಡುವ ಹೊಣೆ ನಮ್ಮ ಮೇಲಿದೆ ಎಂದರು.
ಸಾದ್ಯವಾದಷ್ಟು ಇಂತಹ ಐತಿಹಾಸಿಕ ದೇವಾಲಯಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ, ದೇವಾಲಯಕ್ಕೆ ಬರುವ ದಾರಿಯುದ್ದಕ್ಕೂ ಮುಳ್ಳು ಗಿಡಗಳನ್ನು ತೆಗೆದು ಹಾಕಿ, ಸ್ಥಳೀಯರು ಮನಸ್ಸು ಮಾಡಿದರೆ ಐತಿಹಾಸಿಕ ಪರಂಪರೆಯುಳ್ಳ ಈ ದೇವಾಲಯ ನೋಡಲು ಇನ್ನೂ ಅನುಕೂಲಕರವಾಗುತ್ತದೆ ಎಂದು ಹೇಳಿದರು.
ಈ ಐತಿಹಾಸಿಕ ಸ್ಮಾರಕಗಳು ನಮ್ಮ ಅಜ್ಜ, ನಿಮ್ಮ ಅಜ್ಜ ಹಾಗೂ ಎಲ್ಲರ ಪೂರ್ವಜರ ನೆನಪಿನ ತಾಣ ಇದಾಗಿದ್ದು, ಇದರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂದರು.
ಇದೇ ಸಂದರ್ಭದಲ್ಲಿ ದ ಯುನೈಟೆಡ್ ಬೆಂಗಳೂರು ಸಂಸ್ಥೆಯ ಒಡಂಬಡಿಕೆ ಸಚಿವರು ಬದಲಾವಣೆ ಮಾಡೊಕೊಂಡರು.
ಯಾದಗಿರಿ ಬೆಟ್ಟವನ್ನು ದತ್ತು ಪಡೆದ ಹರ್ಷ ಲಾವೋಟಿ ಅವರನ್ನು ಸನ್ಮಾನಿದರು.
ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪೂರ, ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ್, ಜಿ.ಪಂ ಸಿ.ಇ.ಓ ಗರಿಮಾ ಪನ್ವಾರ್, ಪ್ರೊ. ಕೊಟ್ರೆಶ್, ಡಾ.ಟಿ.ಆರ್.ಪಾಟೀಲರು ಇದ್ದರು.
ಇದನ್ನೂಓದಿ: FDA Scam: ಕಾನೂನು ಗೆಲ್ಲಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು: ಮಧು ಬಂಗಾರಪ್ಪ