Advertisement

48 ವರ್ಷ ಮೇಲ್ಪಟ್ಟವರಿಗೆ ಎನ್‌ಇಪಿ ಕಷ್ಟ: ಸಚಿವ ಹಾಲಪ್ಪ ಆಚಾರ್‌

08:27 PM Aug 25, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿರುವ ಅಂಗನವಾಡಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕರಲ್ಲಿ 48 ವರ್ಷ ಮೇಲ್ಪಟ್ಟವರೇ 40 ಸಾವಿರಕ್ಕೂ ಹೆಚ್ಚಿದ್ದು, ಇವರು ಎನ್‌ಇಪಿ ಪಠ್ಯಕ್ರಮ ಅರ್ಥ ಮಾಡಿಕೊಂಡು ವ್ಯಾಸಂಗ ಮಾಡುವುದರ ಬಗ್ಗೆ ಸ್ವತಃ ಇಲಾಖೆಯೇ ಅನುಮಾನ ವ್ಯಕ್ತಪಡಿಸಿದೆ.

Advertisement

ಈ ಕುರಿತು ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್‌, ರಾಜ್ಯದಲ್ಲಿ 66,361 ಅಂಗನವಾಡಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 61 ಸಾವಿರ ಕಾರ್ಯಕರ್ತರಲ್ಲಿ 6,017 ಪದವಿ, 14,303 ಪಿಯುಸಿ, 732 ಸ್ನಾತಕೋತ್ತರ ಪದವಿ ಹಾಗೂ 40,787 ಎಸ್ಸೆಸ್ಸೆಲ್ಸಿ ಪೂರೈಸಿದವರಿದ್ದಾರೆ. ಈ ಎಸ್ಸೆಸ್ಸೆಲ್ಸಿ ಪೂರೈಸಿದವರಲ್ಲಿ ಬಹುತೇಕರು 48 ವರ್ಷ ಮೇಲ್ಪಟ್ಟವರಾಗಿದ್ದಾರೆ. ಇವರು ಎನ್‌ಇಪಿಯನ್ನು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡು ಬೋಧಿಸುತ್ತಾರೆ ಎಂಬುದು ನೋಡಬೇಕಿದೆ. ಇವರಿಗೆ ಸಾಧ್ಯವಾದಷ್ಟು ತರಬೇತಿ ನೀಡುತ್ತೇವೆ. ಇಲ್ಲವಾದರೆ, ಮುಂದಿನ ಕ್ರಮದ ಬಗ್ಗೆ ಆನಂತರ ಆಲೋಚಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next