Advertisement

ರಾಜ್ಯದ 2 ಜಲಾಶಯದಲ್ಲಿ ಹೂಳು ತುಂಬಿದೆ: ಸಚಿವ ಗೋವಿಂದ ಕಾರಜೋಳ

10:10 PM Mar 24, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ 58 ವಿವಿಧ ಗಾತ್ರದ ಜಲಾಶಯಗಳಿದ್ದು, ಈ ಪೈಕಿ ಎರಡು ಜಲಾಶಯಗಳಲ್ಲಿ ಮಾತ್ರ ಹೂಳು ತುಂಬಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

Advertisement

ಗುರುವಾರ ಪ್ರಶ್ನೊತ್ತರ ವೇಳೆ ಜೆಡಿಎಸ್‌ನ ಸಿ.ಎನ್‌. ಮಂಜೇಗೌಡ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತುಂಗಭದ್ರಾ ಜಲಾಶಯದಲ್ಲಿ 30 ಟಿಎಂಸಿ ಹೂಳು ತುಂಬಿದ್ದು, ಇದಕ್ಕೆ ಸಮಾನಾಂತರವಾಗಿ ನವಲಿ ಬಳಿ ಜಲಾಶಯ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಯೋಜನಾ ವರದಿ ತಯಾರಿಕೆ ಹಂತದಲ್ಲಿದೆ. ಅದೇ ರೀತಿ, ಹಾರಂಗಿ ಜಲಾಶಯದಲ್ಲಿ 1.23 ಟಿಎಂಸಿ ಹೂಳು ತುಂಬಿದ್ದು, ಇದನ್ನು 39 ಕೋಟಿ ರೂ. ವೆಚ್ಚದಲ್ಲಿ “ಹಾರಂಗಿ ಜಲಾನಯನ ಪ್ರದೇಶ ಮತ್ತು ನದಿಪಾತ್ರದ ಪುನಃಶ್ಚೇತನ ಮತ್ತು ರಕ್ಷಣಾ ಕಾಮಗಾರಿ’ ಅಡಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಟೆಂಡರ್‌ ಪ್ರಕ್ರಿಯೆ ನಡೆದಿದ್ದು, ಎಪ್ರಿಲ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಇನ್ನು ವಿಶ್ವೇಶ್ವರಯ್ಯ ಜಲ ನಿಗಮದ ವ್ಯಾಪ್ತಿಯಲ್ಲಿ ವಿ.ವಿ. ಸಾಗರ ಜಲಾಶಯದಲ್ಲಿ ತುಂಬಿರುವ ಹೂಳಿನ ಪ್ರಮಾಣವನ್ನು ಅಂದಾಜಿಸುವ ಕುರಿತು ಸಮೀಕ್ಷೆ ಕೈಗೊಳ್ಳಲು ಉದ್ದೇಶಿಸಲಾಗಿದೆ. ಈ ಸಂಬಂಧ ಕೆಇಆರ್‌ಎಸ್‌ (ಕರ್ನಾಟಕ ಎಂಜಿನಿಯರಿಂಗ್‌ ರಿಸರ್ಚ್‌ ಸ್ಟೇಷನ್‌) ಹೈಡ್ರಾಲಿಕ್ಸ್‌ನ ಮುಖ್ಯ ಸಂಶೋಧನ ಅಧಿಕಾರಿಗಳಿಂದ ಟೆಂಡರ್‌ ಕರೆಯಲಾಗಿದ್ದು, ಈ ಪ್ರಕ್ರಿಯೆ ಪ್ರಗತಿಯಲ್ಲಿದೆ. ಉಳಿದಂತೆ ರಾಜ್ಯದ ಬೇರೆ ಯಾವುದೇ ಜಲಾಶಯಗಳಲ್ಲಿ ಹೂಳು ತುಂಬಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next