Advertisement

Gadkari: BS-7 ವಾಹನಗಳನ್ನು ತಯಾರಿಸಲು ಆರಂಭಿಸಿ ಕಂಪನಿಗಳಿಗೆ ಸಚಿವ ಗಡ್ಕರಿ ಸೂಚನೆ

11:12 AM May 19, 2023 | Team Udayavani |

ನವದೆಹಲಿ: ಪ್ರಸ್ತಾವಿತ ಯುರೋ-7 ಮಾನದಂಡಗಳಂತೆ ದೇಶದಲ್ಲಿಯೂ ಕೂಡ ಬಿಎಸ್‌-7 ವಾಹನಗಳ ತಯಾರಿಕೆ ಶುರು ಮಾಡಿ. ಹೀಗೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಒತ್ತಾಯಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರುದೇಶೀಯ ವಾಹನ ಉತ್ಪಾದಕರು ತಮ್ಮ ಉತ್ಪನ್ನಗಳನ್ನು ಐರೋಪ್ಯ ಒಕ್ಕೂಟಗಳಿಗೆ ರಫ್ತು ಮಾಡುವ ನಿಟ್ಟಿನಲ್ಲಿ ಬಿಎಸ್‌-6ನಿಂದ ಬಿಎಸ್‌-7 ಮೇಲ್ದರ್ಜೆಗೆ ಏರಿಸಿಕೊಳ್ಳುವುದು ಅಗತ್ಯವಾಗಿದೆ. 2025ರ ಜುಲೈನಿಂದ ಹೊಸ ಕಾರುಗಳು ಮತ್ತು ಬಸ್‌ಗಳು ಹಾಗೂ 2027ರ ಜುಲೈನಿಂದ ಹೊಸ ಟ್ರಕ್‌ಗಳು ಮತ್ತು ಬಸ್‌ಗಳು ಯೂರೊ-7 ನಿಯಮಗಳನ್ನು ಪೂರೈಸಬೇಕು ಎಂದು ಐರೋಪ್ಯ ಒಕ್ಕೂಟದ ಸಮಿತಿ ಶಿಫಾರಸು ಮಾಡಿದೆ ಎಂದಿದ್ದಾರೆ.

Advertisement

ಅದಕ್ಕೆ ಅನುಸಾರವಾಗಿ ದೇಶದಲ್ಲಿ ಬಿಎಸ್‌-7 ಮಾಲಿನ್ಯ ಹೊರಸೂಸುವಿಕೆ ಮಾನದಂಡಗಳನ್ನು ರೂಪಿಸುವ ನಿಟ್ಟಿನಲ್ಲಿ ರಸ್ತೆ ಸಂಚಾರ ಸಚಿವಾಲಯ ಕಾರ್ಯ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next