Advertisement

ಯಡಿಯೂರಪ್ಪನವರಿಗಿಂತ ಸಿದ್ಧರಾಮಯ್ಯನವರಿಗೆ ಪುತ್ರ ವ್ಯಾಮೋಹ ಹೆಚ್ಚಾಗಿದೆ: ಸಚಿವ ಈಶ್ವರಪ್ಪ

06:41 PM Jun 04, 2020 | Hari Prasad |

ಯಾದಗಿರಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಲವಾರು ಬಾರಿ ಮುಖ್ಯಮಂತ್ರಿಯಾಗಿದ್ದಾರೆ‌.

Advertisement

ಆದರೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಐದು  ವರ್ಷಗಳ ಅವಧಿಯಲ್ಲಿ ತನ್ನ ಪುತ್ರ ಯತೀಂದ್ರನ ಮೇಲೆ ಅಪಾರ ವ್ಯಾಮೋಹ ವ್ಯಕ್ತಪಡಿಸಿರುವುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಸಚಿವ ಈಶ್ವರಪ್ಪ ಅವರು ಕಟಕಿಯಾಡಿದ್ದಾರೆ.

ಆದರೆ ಈಗ ಅಧಿಕಾರವಿಲ್ಲದಿರುವ ಸಂದರ್ಭದಲ್ಲಿ ಸಿದ್ಧರಾಮಯ್ಯನವರು ಬಿ.ಎಸ್.ವೈ. ಪುತ್ರ ವಿಜಯೇಂದ್ರ ಅವರ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದೂ ಈಶ್ವರಪ್ಪನವರು ಇದೇ ಸಂದರ್ಭದಲ್ಲಿ ಹೇಳಿದರು.

ವಿಜಯೇಂದ್ರ ಅವರೇನೂ ಸರ್ಕಾರದ ನಿರ್ಧಾರಗಳಲ್ಲಿ ಭಾಗಿಯಾಗುತ್ತಿಲ್ಲ ಬದಲಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಇದು ಸಿದ್ದು ಹೊಟ್ಟೆಉರಿಗೆ ಕಾರಣವಾಗಿದೆ ಎಂದು ಈಶ್ವರಪ್ಪ ಅವರು ವ್ಯಂಗವಾಡಿದರು.

ನಮ್ಮ ಪಕ್ಷದಲ್ಲಿರುವ ಕೆಲವು ಶಾಸಕರಲ್ಲಿ ಭಿನ್ನಮತ ಇರುವುದು ನಿಜ. ಆದರೆ ಈ ಎಲ್ಲಾ ಅಪಸ್ವರ ಹಾಗೂ ಭಿನ್ನಮತಗಳನ್ನು ಶಮನ ಮಾಡುವ ಶಕ್ತಿ ನಮ್ಮ ಪಕ್ಷಕ್ಕೆ ಇದೆ ಎಂದೂ ಈಶ್ವರಪ್ಪ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

ಅತೃಪ್ತ ಶಾಸಕರನ್ನು ಕರೆದು ಭಿನ್ನಮತ ಶಮನಗೊಳಿಸುವ ಕೆಲಸವನ್ನು ಪಕ್ಷದ ಹೈಕಮಾಂಡ್ ಮಾಡಲಿದೆ. ರಾಷ್ಟ್ರೀಯ ಪಕ್ಷಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ ಅವುಗಳಿಗೆಲ್ಲಾ ನಮ್ಮೊಳಗೇ ಕುಳಿತು ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಈಶ್ವರಪ್ಪ ವಿಶ್ವಾಸದಿಂದ ನುಡಿದರು.

ರಾಜ್ಯದಲ್ಲಿ ನಡೆಯುವ ಎಲ್ಲ ಚುನಾವಣೆಗಳನ್ನು ಬಿಜೆಪಿ ಸ್ವತಂತ್ರವಾಗಿ ಎದುರಿಸಲಿದೆ ಯಾವ ಪಕ್ಷಗಳೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆ ನಮಗಿಲ್ಲ ಎಂದೂ ಸಚಿವ ಈಶ್ವರಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next