Advertisement
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಚಿನ್ ಸಾವು ದುಃಖದಾಯಕ. ಅವರು ನನ್ನ ಮತಕ್ಷೇತ್ರದವರಾಗಿದ್ದು, ಈ ದುರ್ಘಟನೆಯ ಬಳಿಕ ಅವರ ಕುಟುಂದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಅವರಿಗೆ ಐವರು ಸಹೋದರಿಯರಿದ್ದು, ಯಾರಾದರೂ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಸಿಎಂ ಗಮನ ಸೆಳೆಯುತ್ತೇನೆ ಎಂದರು.
ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರದ ವಿರುದ್ಧ ಮಾತನಾಡಲು ಬಿಜೆಪಿಯವರಿಗೆ ಯಾವುದೇ ವಿಚಾರ ಇಲ್ಲ. ಹೀಗಾಗಿ ಅಪಪ್ರಚಾರದಲ್ಲಿ ನಿರತರಾಗಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ಹೊಟ್ಟೆಯುರಿಯಿಂದ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದರು.
Related Articles
ಸಚಿವ ಪ್ರಿಯಾಂಕ ಖರ್ಗೆ ಹೆಸರು ಸಚಿನ್ ಅವರ ಡೆತ್ನೋಟ್ನಲ್ಲಿದೆ. ಅವರ ಆಪ್ತನೇ ಈ ಘಟನೆಗೆ ಕಾರಣ. ಎಐಸಿಸಿ ಅಧ್ಯಕ್ಷರ ಮಗ ಎಂಬ ಕಾರಣಕ್ಕೆ ಸಿಂಎ ರಾಜೀನಾಮೆ ಪಡೆಯಲು ಗಡಗಡ ನಡಗುತ್ತಿದ್ದಾರೆ. ಇದರೊಂದು ಕೊಲೆಗಡುಕು ಸರ್ಕಾರ. ಇದರ ವಿರುದ್ಧ ಜ.4 ರಂದು ಕಲಬುರಗಿಯಲ್ಲಿ ಬಿಜೆಪಿ ವತಿಯಿಂದ ಬೃಹತ್ ಹೋರಾಟ ನಡೆಯಲಿದೆ.
-ಆರ್.ಅಶೋಕ್, ವಿಧಾನಸಭೆ ವಿಪಕ್ಷ ನಾಯಕ
Advertisement
ಪ್ರಿಯಾಂಕ್ ರಾಜೀನಾಮೆ ಯಾವಾಗ?ನನಗೆ ಸಚಿವ ಪ್ರಿಯಾಂಕ್ ಖರ್ಗೆ ಕೊಟ್ಟ ನೋಟಿಸ್ನಲ್ಲಿ ಜೀವ ಇಲ್ಲ. ಅದೊಂದು ನಿಶ್ಶಕ್ತ ನೋಟಿಸ್. ಒಂದು ವರ್ಷದ ಹಿಂದೆ ಕೊಟ್ಟ ನೋಟಿಸ್ಗೆ ನಾನು ಒಂದು ಚೂರೂ ಅಲುಗಾಡಿಲ್ಲ (ಶೇಕ್ ಆಗಿಲ್ಲ). ಅವರ ನೋಟಿಸ್ಗೆ ಯಾವ ಪ್ರಾಮುಖ್ಯತೆಯೂ ಇಲ್ಲ, ಮೌಲ್ಯವೂ ಇಲ್ಲ. ಪ್ರಿಯಾಂಕ್ ಖರ್ಗೆಯವರೇ ಯಾವಾಗ ನೀವು ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳುತ್ತೀರಿ, ಅಷ್ಟೇ ಹೇಳಿ.
– ಪಿ.ರಾಜೀವ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ