Advertisement

ಆಸ್ಪತ್ರೆ, ಬಸ್‌ ನಿಲ್ದಾಣಕ್ಕೆ ಸಚಿವ ಚವ್ಹಾಣ ಭೇಟಿ-ಪರಿಶೀಲನೆ

10:41 AM Apr 06, 2022 | Team Udayavani |

ಔರಾದ: ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಔರಾದ ಕೇಂದ್ರ ಬಸ್‌ ನಿಲ್ದಾಣಕ್ಕೆ ದಿಢೀರ್‌ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.

Advertisement

ಆಸ್ಪತ್ರೆ ತುರ್ತು ಚಿಕಿತ್ಸಾ ವಿಭಾಗ, ಔಷಧ ವಿತರಣಾ ಕೇಂದ್ರ ಸೇರಿದಂತೆ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯಾಧಿಕಾರಿಗಳು ದಿನದ 24 ಗಂಟೆಯೂ ಉಪಸ್ಥಿತರಿದ್ದು, ಚಿಕಿತ್ಸೆ ನೀಡಬೇಕು. ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗಬೇಕು, ಔಷಧಿ ಗಾಗಿ ಹೊರಗಡೆ ಕಳುಹಿಸಬಾರದು. ಯಾವುದೇ ಕಾರಣಕ್ಕೂ ಆಸ್ಪತ್ರೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಗೈರಾದವರ ವಿರುದ್ಧ ಕ್ರಮ

ಆಸ್ಪತ್ರೆಗೆ ಭೇಟಿ ನೀಡಿದಾಗ ಸುಮಾರು ಮೂರ್‍ನಾಲ್ಕು ದಿನಗಳಿಂದ ಹಾಜರಿ ಪುಸ್ತಕದಲ್ಲಿ ಸಹಿ ಹಾಕದ ವೈದ್ಯಾಧಿ ಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು. ಎಲ್ಲ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿದಿನ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಹಾಜರಿದ್ದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶನ ನೀಡಿದರು.

Advertisement

ಸಚಿವರು ಕೇಂದ್ರ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ಆವರಣದಲ್ಲಿ ಸಂಚರಿಸಿ ಸ್ವಚ್ಛತೆ ವೀಕ್ಷಿಸಿದರು. ಕೆಲವೆಡೆ ಅಶುಚಿತ್ವ ಕಂಡು ಏಕೆ ಶುಚಿಯಾಗಿಟ್ಟಿಲ್ಲ ಎಂದು ಡಿಪೋ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು. ಬೇರೆ ಜಿಲ್ಲೆ-ತಾಲೂಕುಗಳಿಂದ ಜನರು ಆಗಮಿಸುತ್ತಾರೆ. ಬಸ್‌ ನಿಲ್ದಾಣ ಸ್ವಚ್ಛವಾಗಿರಬೇಕು. ಇನ್ನೊಮ್ಮೆ ಭೇಟಿ ನೀಡಿದಾಗ ಎಲ್ಲವೂ ಸರಿಯಾಗಿರಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಈ ವೇಳೆ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಬಂಡೆಪ್ಪ ಕಂಟೆ, ಪಪಂ ಸದಸ್ಯ ದೊಂಡಿಬಾ ನರೋಟೆ, ತಾಲೂಕು ಆರೋಗ್ಯಾಧಿಕಾರಿ ಗಾಯತ್ರಿ, ಡಿಪೋ ವ್ಯವಸ್ಥಾಪಕ ಮಹ್ಮದ ನಯೀಮ್‌, ಮುಖಂಡ ಕೇರಬಾ ಪವಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next