Advertisement

ಚೆಕ್‌ಪೋಸ್ಟ್‌ಗೆ ದಿಢೀರ್‌ ಭೇಟಿ ನೀಡಿದ ಸಚಿವ ಚವ್ಹಾಣ

04:29 PM Apr 24, 2021 | Team Udayavani |

ಯಾದಗಿರಿ: ನೆರೆ ರಾಜ್ಯಗಳಲ್ಲಿ ಕೋವಿಡ್‌ ಸೋಂಕುಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಭಾಗದಚೆಕ್‌ ಪೋಸ್ಟ್‌ಗಳಲ್ಲಿ ತಪಾಸಣೆ ಕಾರ್ಯವನ್ನು ತೀವ್ರಗೊಳಿಸಿ,ಕಟ್ಟುನಿಟ್ಟಾಗಿ ತಪಾಸಣೆಗೊಳಪಡಿಸಲು ಕ್ರಮ ಕೈಗೊಳ್ಳುವಂತೆಪಶು ಸಂಗೋಪನೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿಸಚಿವ ಪ್ರಭು ಚೌವ್ಹಾಣ್‌ ಹೇಳಿದರು.

Advertisement

ತಾಲೂಕಿನ ಯರಗೋಳಕೋವಿಡ್‌ ಚೆಕ್‌ ಪೋಸ್ಟ್‌ಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿಮಾತನಾಡಿದರು. ಚೆಕ್‌ಪೋಸ್ಟ್‌ನಲ್ಲಿ ಬಹು ಹೊತ್ತು ನಿಂತುವಾಹನಗಳ ಸಂಚಾರ ಹಾಗೂ ವಹಿಸಲಾಗಿರುವ ತಪಾಸಣಾಕಾರ್ಯವನ್ನು ಹಾಗೂ ಚೆಕ್‌ಪೋಸ್ಟ್‌ನಲ್ಲಿ ವಾಹನಗಳು ಮತ್ತುಪ್ರಯಾಣಿಕರ ವಿವರವನ್ನು ದಾಖಲಿಸುತ್ತಿರುವ ಕಾರ್ಯವನ್ನುವೀಕ್ಷಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಧಿಕಾರಿಡಾ| ರಾಗಪ್ರಿಯಾ ಆರ್‌, ಜಿಲ್ಲಾ ಪೊಲೀಸ್‌ವರಿಷ್ಠಾ ಧಿಕಾರಿ ಪ್ರಸನ್ನ ದೇಸಾಯಿ, ಅಪರ ಜಿಲ್ಲಾ ಧಿಕಾರಿಪ್ರಕಾಶ ಜಿ.ರಜಪೂತ್‌, ಹಿರಿಯ ಸಹಾಯಕ ಆಯುಕ್ತಶಂಕರಗೌಡ ಸೋಮನಾಳ, ಡಾ| ಇಂದುಮತಿ ಕಾಮಶೆಟ್ಟಿ,ಯಾದಗಿರಿ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next