Advertisement

ನೂತನ ಕಸಾಪ ಅಧ್ಯಕ್ಷರಿಗೆ ಸಚಿವ ಚವ್ಹಾಣ ಸನ್ಮಾನ

05:44 PM Nov 23, 2021 | Team Udayavani |

ಔರಾದ: ಎರಡನೇ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಚುನಾಯಿತರಾದ ಸುರೇಶ ಚನ್ನಶೆಟ್ಟಿ ಅವರನ್ನು ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಅವರು ಸೋಮವಾರ ಬೋಂತಿ ತಾಂಡಾದ ನಿವಾಸದಲ್ಲಿ ಸನ್ಮಾನ ಮಾಡಿ ಅಭಿನಂದಿಸಿದರು.

Advertisement

ಬಳಿಕ ಮಾತನಾಡಿದ ಅವರು, ಗಡಿ ಭಾಗವಾದ ಬೀದರ ಜಿಲ್ಲೆಯಲ್ಲಿ ಕನ್ನಡಪರ ಕೆಲಸಗಳಿಗೆ ಇನ್ನಷ್ಟು ವೇಗ ಸಿಗಲಿ. ಕನ್ನಡದ ಕಂಪನ್ನು ಪ್ರತಿ ಮನೆ-ಮನಗಳಿಗೆ ತಲುಪಿಸಲು ಗುರುತರ ಕೆಲಸ ಕಾರ್ಯಗಳಾಗಲಿ. ಬೀದರ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕನ್ನಡ ಭವನದ ಕೆಲಸ ಶೀಘ್ರ ಪೂರ್ಣಗೊಳ್ಳಲಿ. ಕನ್ನಡಪರವಾದ ಎಲ್ಲ ಕೆಲಸಗಳಿಗೆ ನಿಮ್ಮೊಂದಿಗೆ ಇರುವುದಾಗಿ ಸಚಿವರು ಭರವಸೆ ನೀಡಿದರು.

ನೂತನ ಕಸಾಪ ಜಿಲ್ಲಾಧ್ಯಕ್ಷ ಸೂರೇಶ ಚೆನ್ನಶೆಟ್ಟಿ ಮಾತನಾಡಿ, ಬೀದರ ಜಿಲ್ಲೆಯಲ್ಲಿನ ಕಸಾಪ ಅಜೀವ ಸದಸ್ಯರು ಹಾಗೂ ಕನ್ನಡದ ಸೇವಕರು ನಮಗೆ ಎರಡನೆಯ ಅವಧಿಗೆ ಸೇವೆ ಮಾಡಲು ಆಶೀರ್ವಾದ ಮಾಡಿರುವುದು ನಮ್ಮ ಪುಣ್ಯ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಬಂಡೆಪ್ಪಾ ಕಂಟೆ, ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷರಾದ ಶರಣಪ್ಪಾ ಮಿಠಾರೆ, ಹಿರಿಯ ಸಾಹಿತಿಗಳಾದ ಶಿವಕುಮಾರ ಕಟ್ಟೆ, ಡಾ| ಬಸವರಾಜ ಬಲ್ಲುರ, ರಮೇಶ ಬಿರಾದಾರ, ಶಿವಶಂಕರ ಟೋಕ್ರೆ, ಶಾಲಿವಾನ ಉದಗೀರೆ, ಗುರುನಾಥ ರಾಜಗೀರಾ, ಟಿ.ಎಂ ಮಚ್ಚೆ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next