Advertisement

ವಾಲಿಶ್ರೀ ಆಸ್ಪತ್ರೆ ಕಾಳಜಿಗೆ ಸಚಿವ ಚವ್ಹಾಣ ಮೆಚ್ಚುಗೆ

04:34 PM Aug 15, 2020 | Suhan S |

ಬೀದರ: ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ನಗರದ ವಾಲಿಶ್ರೀ ಆಸ್ಪತ್ರೆ ಜಿಲ್ಲಾ ಆಡಳಿತದೊಂದಿಗೆ ಕೈ ಜೋಡಿಸಿರುವುದು ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ನಗರದ ವಾಲಿಶ್ರೀ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ ಸಚಿವರು, ಆಸ್ಪತ್ರೆಯಲ್ಲಿನ ವ್ಯವಸ್ಥೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್‌ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಗಳು ಸಹಕರಿಸಬೇಕು ಎಂದು ಮನವಿ ಮಾಡಿದ್ದೆ. ಇದಕ್ಕೆ ಸ್ಪಂದಿಸಿದ ವಾಲಿಶ್ರೀ ಆಸ್ಪತ್ರೆ ಚೇರ್‌ ಮನ್‌ ಡಾ| ರಜನೀಶ ವಾಲಿ ಅವರ ಸಾಮಾಜಿಕ ಕಾಳಜಿ ಅನುಕರಣೀಯವಾಗಿದೆ ಎಂದರು. ವಾಲಿಶ್ರೀ ಆಸ್ಪತ್ರೆಯಲ್ಲಿ ಮುಂಚೆ 25 ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲಿಡಲಾಗಿತ್ತು. ನಂತರ 40 ಬೆಡ್‌ ಮೀಸಲಿಡಲಾಯಿತು. ಇದೀಗ ಇನ್ನೂ 40 ಹಾಸಿಗೆ ಮೀಸಲಿಟ್ಟಿರುವುದು ಸಂತಸದ ವಿಷಯ. ಇದರಿಂದ ಸೋಂಕಿತರಿಗೆ ಅನುಕೂಲವಾಗಲಿದೆ. ವೆಂಟಿಲೇಟರ್‌ ಸಹಿತ ಎಲ್ಲ ಸೌಲಭ್ಯವಿದ್ದು, ಇಲ್ಲಿ ಗುಣಮುಖರಾಗುವವರ ಪ್ರಮಾಣ ಶೇ.85ರಷ್ಟಿದೆ. ಇದರಲ್ಲಿ ಆಸ್ಪತ್ರೆ ಆಡಳಿತ ವರ್ಗ, ವೈದ್ಯರ ಶ್ರಮ ಹೆಚ್ಚಿದೆ ಎಂದರು.

ಆಸ್ಪತ್ರೆಯ ಚೇರ್‌ಮನ್‌ ಡಾ| ರಜನೀಶ ವಾಲಿ ಮಾತನಾಡಿ, ಆಸ್ಪತ್ರೆಯಲ್ಲಿನ 100 ಬೆಡ್‌ ಪೈಕಿ 80 ಬೆಡ್‌ಗಳನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲಿಡಲಾಗಿದೆ. ಬ್ರಿಮ್ಸ್‌ನಲ್ಲಿ ಬೆಡ್‌ ಭರ್ತಿಯಾಗಿ, ಅಲ್ಲಿಂದ ಸೋಂಕಿತರನ್ನು ರೆಫರ್‌ ಮಾಡಿದ್ದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಐಎಂಎ ಅಧ್ಯಕ್ಷ ಡಾ| ವಿ.ವಿ. ನಾಗರಾಜ ಮಾತನಾಡಿದರು. ಡಾ| ಖಾಜಾ ಮೈನುದ್ದೀನ್‌, ಬಾಬು ವಾಲಿ ಇದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next