Advertisement

ಭ್ರಷ್ಟಾಚಾರದ ಬಗ್ಗೆ ಡಿಕೆಶಿ ಮಾತನಾಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ: ಸಿ ಟಿ ರವಿ

03:17 PM Aug 01, 2020 | keerthan |

ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಬರುವುದಕ್ಕೂ ಭ್ರಷ್ಟಾಚಾರದ ಬಗ್ಗೆ ಡಿಕೆಶಿ ಮಾತನಾಡುವುದಕ್ಕೂ ವ್ಯತ್ಯಾಸವಿಲ್ಲ ಎಂದು ಸಚಿವ ಸಿ ಟಿ ರವಿ ವ್ಯಂಗ್ಯವಾಡಿದರು.

Advertisement

ನಗರದಲ್ಲಿ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಅವರು ತಮ್ಮ ಪ್ರಾಮಾಣಿಕತೆಯ ಬಗ್ಗೆ ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಲಿ ಎಂದ ಅವರು, ಕಾಂಗ್ರೆಸ್ ನಲ್ಲಿ ಆಂತರಿಕ ಸ್ಪರ್ಧೆ ನಡೆಯುತ್ತಿರಬಹುದು ಎಂದರು.

ಭ್ರಷ್ಟಾಚಾರದ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಾರೆ. ರಿ ಡ್ಯೂವ್ ಎಂಬ ಹೊಸ ಪರಿಭಾಷೆಯನ್ನ ಯಾರು ಹುಟ್ಟಿಹಾಕಿದ್ದು ಸಿದ್ದರಾಮಯ್ಯನವರು. ಡಿನೋಟಿಫೈನಲ್ಲಿ ರಿ ಡ್ಯೂವ್ ಹುಟ್ಟು ಹಾಕಿ 600 ಎಕರೆ ಡಿನೋಟಿಫೈ ಮಾಡಿದ್ದರು. ಇದಕ್ಕೆ ಉತ್ತರ ಸಿಗಲಲೇ ಇಲ್ಲ, ಇವತ್ತು ಪ್ರಶ್ನೆ ಕೇಳ್ತಿದ್ದಾರೆ, ಉತ್ತರ ಹೇಳಬೇಕಾದವರು ಅವರೇ ಎಂದು ಸಚಿವರು ಆರೋಪಿಸಿದರು.

ಇದನ್ನೂ ಓದಿ: ಪಿಎಸ್‌ಐ ಕಿರಣ್ ‌ಕುಮಾರ್ ಆತ್ಮಹತ್ಯೆಗೆ ಹಿರಿಯ ಅಧಿಕಾರಿಗಳ ದೌರ್ಜನ್ಯ, ಬೆದರಿಕೆ ಕಾರಣ: HDK

ಕೋವಿಡ್ ವಿಚಾರದಲ್ಲಿ ಭ್ರಷ್ಟಾಚಾರದ ಆಲೋಚನೆಯೂ ತಪ್ಪು. ಆಧಾರ ಇದ್ದರೆ ಸಿದ್ದರಾಮಯ್ಯ ಕಂಪ್ಲೇಂಟ್ ಮಾಡಲಿ. ಆಧಾರ ಇದ್ದರೆ ಕೋರ್ಟ್ ಹಾಗೂ ಲೋಕಾಯುಕ್ತಾಕ್ಕೆ ಸಲ್ಲಿಸಲಿ. ಆಧಾರ ಇಲ್ಲದೆ ಪ್ರಶ್ನೆ ಮಾಡುವುದು ತಪ್ಪು ಎಂದರು.

Advertisement

ಎಲಬು ಇಲ್ಲದೆ ನಾಲಿಗೆ ಏನು ಬೇಕಾದರೂ ಮಾತಾನಾಡುತ್ತೆ ಎನ್ನುವುದು ಸಿದ್ದರಾಮಯ್ಯಗೆ ಅನ್ವಯಿಸಬಾರದು. ಯಾಕೆಂದರೆ ಅವರು ಮುಖ್ಯಮಂತ್ರಿ ಯಾಗಿದ್ದವರು ಎಂದು ಸಿ ಟಿ ರವಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next