Advertisement

ಕಾಂಗ್ರೆಸ್ ಜೀವಂತಿಕೆ ಪ್ರದರ್ಶನಕ್ಕಾಗಿ ಪಾದಯಾತ್ರೆ: ಬಿ.ಸಿ.ಪಾಟೀಲ್

06:16 PM Feb 28, 2022 | Team Udayavani |

ಗದಗ: ಮೇಕೆದಾಟು ಯೋಜನೆಗೆ ಯಾರ ವಿರೋಧವೂ ಇಲ್ಲ. ಆದರೆ, ಕಾಂಗ್ರೆಸ್ ಪಕ್ಷ ಜನಮಾನಸದಿಂದ ಮರೆಯಾಗುತ್ತಿದೆ. ಕಾಂಗ್ರೆಸ್ ಪಕ್ಷದ ಜೀವಂತಿಕೆಯನ್ನು ಪ್ರದರ್ಶಿಸಲು ಮೇಕೆದಾಟು ಹೆಸರಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ವ್ಯಂಗ್ಯವಾಡಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ರಾಜ್ಯ ಬಿಜೆಪಿ ಸರಕಾರ ಯಾವತ್ತೂ ವಿರೋಧಿಸಿಲ್ಲ. ಇಷ್ಟು ವರ್ಷ ಮೇಕೆದಾಟು ಬಗ್ಗೆ ಚಕಾರವೆತ್ತದ ಕಾಂಗ್ರೆಸ್, ಈಗ  ಪಾದಯಾತ್ರೆಯುದ್ದಕ್ಕೂ ‘ನಮ್ಮ ನೀರು- ನಮ್ಮ ಹಕ್ಕು’ ಎಂದು ಘೋಷಣೆ ಕೂಗುತ್ತಿದೆ. ಇನ್ನುಳಿದವರಿಗೆ ಸಂಬಂಧವಿಲ್ಲವಾ? ಅಥವಾ ಮೇಕೆದಾಟು ನೀರು ಕಾಂಗ್ರೆಸ್‌ನವರಿಗೆ ಮಾತ್ರನಾ ಎಂದು ಪ್ರಶ್ನಿಸಿದ ಸಚಿವರು, ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಗಿಮಿಕ್ ಎಂದು ತರಾಟೆಗೆ ತೆಗೆದುಕೊಂಡರು.

ಇತ್ತೀಚೆಗೆ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಜನಪರವಾದ ಚರ್ಚೆಗೆ ಅವಕಾಶ ನೀಡಲಿಲ್ಲ. ಅಧಿವೇಶನ ಹಾಳು ಮಾಡಿದ್ದು ಯಾವ ಪುರುಷಾರ್ಥಕ್ಕಾಗಿ ಎಂದು ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಛೀ, ತೂ ಎಂದು ಛಿಮಾರಿ ಹಾಕುತ್ತಿದ್ದಾರೆ. ಆದರೂ, ಅಧಿವೇಶನದಲ್ಲಿ ಮಲಗಿದ್ದ ಕಾಂಗ್ರೆಸ್ ನಾಯಕರು ಇನ್ನೂ ನಿದ್ರೆಯಿಂದ ಎಚ್ಚರವಾಗಿಲ್ಲ ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next