Advertisement

ಪರಿಸ್ಥಿತಿ ಕೈ ಮೀರುತ್ತಿದೆ, ಲಾಕ್ ಡೌನ್ ಅನಿವಾರ್ಯ: ಸಚಿವ ಬಿ.ಸಿ. ಪಾಟೀಲ್

04:49 PM May 07, 2021 | Team Udayavani |

ಕುಷ್ಟಗಿ: ಜನತಾ ಕರ್ಪ್ಯೂ ಪರಿಣಾಮಕಾರಿಯಾಗದ ಹಿನ್ನೆಲೆಯಲ್ಲಿ ಪರಿಸ್ಥಿತಿ ಕೈ ಮೀರಿ ಹೋಗುತ್ತಿದ್ದು, ಲಾಕಡೌನ್ ಅನಿವಾರ್ಯವಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

Advertisement

ಕುಷ್ಟಗಿ ತಾಲೂಕಾ ಸರ್ಕಾರಿ ಆಸ್ಪತ್ರೆಯ‌ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ದಿನೇ ದಿನೇ ಕೊರೊನಾ ವೈರಸ್ ಉಲ್ಬಣಿಸುತ್ತಿದ್ದು ಲಾಕ್ ಡೌನ್ ಅನಿವಾರ್ಯಎನ್ನುವುದು ನನ್ನ ಅನಿಸಿಕೆ ಎಂದರು.

ಕುಷ್ಟಗಿಯ ಡೆಡಿಕೇಟ್ ಕೋವಿಡ್ ಕೇರ್ ಸೆಂಟರ್ ನಲ್ಲಿ 42 ಬೆಡ್ ಇದ್ದು 36 ರೋಗಿಗಳು ದಾಖಲಾಗಿದ್ದು, ಸದ್ಯ ಇನ್ನು 6 ಬೆಡ್ ಖಾಲಿ ಇವೆ. ಇಲ್ಲಿಯೇ ಇನ್ನು 20 ಬೆಡ್ ವಿಸ್ತರಿಸಲಾಗುತ್ತಿದೆ. ಅಲ್ಲದೇ ಕುಷ್ಟಗಿ ವಿದ್ಯಾರ್ಥಿ ನಿಲಯಗಳಲ್ಲಿ 150 ಬೆಡ್, ತಾವರಗೇರಾದಲ್ಲಿ 30 ಬೆಡ್ ವ್ಯವಸ್ಥೆ ಮಾಡಲಾಗಿದೆ. ಕುಷ್ಟಗಿ ತಾಲೂಕಾ ಆಸ್ಪತ್ರೆಗೆ ಕೊಪ್ಪಳದಿಂದ ಪಿಜಿಷಿಯನ್ ವೈದ್ಯರ ನಿಯೋಜಿಸಲಾಗುತ್ತಿದೆ. ಅನಸ್ತೇಸಿಯಾ ವೈದ್ಯ ಅಮಾನತ್ತಾಗಿದ್ದು ಸದ್ಯದ ಪರಿಸ್ಥಿತಿಯಲ್ಲಿ ಪುನರ್ ನೇಮಕ ಮಾಡಿಕೊಳ್ಳಲಾಗುವುದು ಎಂದರು. ಕುಷ್ಟಗಿ ಡಿಸಿಎಚ್ ಸಿ ಯಲ್ಲಿ ಈ ದಿನ ಇಬ್ಬರು ಮೃತರಾಗಿದ್ದು ಒಬ್ಬರಿಗೆ 95 ವರ್ಷ, ಇನ್ನೊಬ್ಬರಿಗೆ ಗಂಟಲ ಕ್ಯಾನ್ಸರ್ ಹಾಗೂ ಕೋವಿಡ್ ಸಹ ಇತ್ತು ಎಂದರು.

ಇದನ್ನೂ ಓದಿ:ಕೋವಿಡ್ ಮೂರನೇ ಅಲೆಯನ್ನು ಹೊಡೆದುರುಳಿಸಲಿದೆ ಜರ್ಮನ್ :  ಜೆನ್ಸ್ ಸ್ಪಾನ್  

ಇದೇ ವೇಳೆ ಕೊಪ್ಪಳ ಸಂಸದ ಕರಡಿ ಸಂಗಣ್ಣ,  ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ , ಜಿ.ಪಂ ಸಿಇಓ ರಘುನಂದನ ಮೂರ್ತಿ ಮತ್ತೀರಿದ್ದರು. ಇದೇ ವೇಳೆ ತಹಶೀಲ್ದಾರ ಕಛೇರಿಯಲ್ಲಿ ಅಧಿಕಾರಿಗಳ‌ ಸಭೆ ನಡೆಸಿ, ಹಿಂದುಳಿದ ವರ್ಗಗಳ‌‌ ಬಾಲಕಿಯರ ಮೆಟ್ರಿಕ್ ನಂತರದ ವಸತಿ ನಿಲಯದ ಕೋವಿಡ್ ಕೇರ್ ಸೆಂಟರ್ ಭೇಟಿ ನೀಡಿ ಪರಿಶೀಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next