ಹಾವೇರಿ: ಯಾರೋ ಒಬ್ಬರು ಜಮೀನಿನಲ್ಲಿ ಗಾಂಜಾ ಬೆಳೆದು ತಪ್ಪು ಮಾಡಿದರು ಎಂದ ಮಾತ್ರಕ್ಕೆ ಅನ್ನ ಕೊಡುವ ಇಡೀ ರೈತ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ರೈತರು ನಾಡಿನ ಅನ್ನದಾತರು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ್ಯಪ್ ಬೆಳೆ ಸಮೀಕ್ಷೆ ಪ್ರಾಯೋಗಿಕ ಹಂತದಲ್ಲಿಯೇ ಯಶಸ್ವಿಯಾಗುತ್ತಿರುವುದು ಹೆಮ್ಮೆಯ ವಿಚಾರ. 2017ರಲ್ಲಿ ಬೆಳೆ ಸಮೀಕ್ಷೆ ಮಾಡಿದಾಗ ಸುಮಾರು 3 ಸಾವಿರ ರೈತರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಆದರೀಗ ಆ್ಯಪ್ ಬೆಳೆ ಸಮೀಕ್ಷೆಯಲ್ಲಿ ಸೆ.11 ರ ಸಂಜೆವರೆಗೆ 76 ಲಕ್ಷ ತಾಸುಗಳು ಸಮೀಕ್ಷೆಯಾಗಿರುವುದು ಹೆಮ್ಮೆಯ ವಿಚಾರ. ರೈತರು ಬಹಳ ಆಸಕ್ತಿಯಿಂದ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆ್ಯಪ್ ಬೆಳೆ ಸಮೀಕ್ಷೆ ನಡೆಸುವುದು ಅತ್ಯವಶ್ಯಕ ಎಂದರು.
ಕೆಲವೆಡೆ ಇಂಟರ್ನೆನೆಟ್ ಸಮಸ್ಯೆಯಿಂದಾಗಿ ತಡವಾಗಿದೆ. ಈಗ ಖಾಸಗಿ ನಿವಾಸಿಗಳ ಮೂಲಕವೂ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಇದನ್ನೂ ಓದಿ: ಕ್ಯಾಸಿನೋ ಜಟಾಪಟಿ: ಬಿಜೆಪಿ ಶಾಸಕರು ಮತ್ತು ಕುಮಾರಸ್ವಾಮಿ ಬಗ್ಗೆ ಜಮೀರ್ ಹೇಳಿದ್ದೇನು?
ನಟರಾಗಲೀ, ನಟಿಯರಾಗಲೀ ಯಾರೂ ತಪ್ಪುಮಾಡಿದರೂ ಅದು ತಪ್ಪೇ. ಡ್ರಗ್ಸ್ ದಂಧೆ ಬಗ್ಗೆ ತನಿಖೆ ನಡೆಯುತ್ತಿದೆ. ಅಪರಾಧಿಗಳು ಯಾರು ಎಂಬುದು ತನಿಖೆಯಿಂದ ಪತ್ತೆಯಾಗಲಿದೆ. ಈ ಹಿಂದೆ ತಮ್ಮ ಅವಧಿಯಲ್ಲಿನ ಚಿತ್ರರಂಗದಲ್ಲಿ ಪರಿಶುದ್ಧ ವಾತಾವರಣವಿತ್ತು. ಶೂಟಿಂಗ್ ವೇಳೆಯಲ್ಲಿ ಸಣ್ಣತಪ್ಪಾದರೂ ಪಶ್ಚಾತ್ತಾಪ ಪಡುವಂತಹ ವಾತಾವರಣವಿತ್ತು. ಈಗ ಚಿತ್ರರಂಗದಲ್ಲಿ ಡ್ರಗ್ ವಿಚಾರ ಕೇಳಿಬಂದಿರುವುದು ಬೇಸರದ ಸಂಗತಿ. ಈ ಹಾವಳಿ ಎಲ್ಲ ಎಂಗದಲ್ಲಿಯೂ ಇದೆ. ಚಿತ್ರರಂಗದಲ್ಲಾಗಿರುವುದು ಬಹಳ ಬೇಗ ಎದ್ದುಕಾಣುತ್ತದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.