Advertisement

ಗುಣಮಟ್ಟದ ಆಹಾರಧಾನ್ಯ ಸರಬರಾಜಿಗೆ ಸಚಿವರ ತಾಕೀತು

08:50 PM Jun 11, 2020 | Sriram |

ಯಾದಗಿರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾರೂ ಕೂಡ ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ಆದ್ಯತೆ ಮೇರೆಗೆ ಪಡಿತರ ಆಹಾರಧಾನ್ಯ ವಿತರಣೆಗೆ ಕ್ರಮ ಕೈಗೊಂಡಿವೆ. ಈ ನಿಟ್ಟಿನಲ್ಲಿ ಗುಣಮಟ್ಟದ ಆಹಾರಧಾನ್ಯವನ್ನು ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಗೋಪಾಲಯ್ಯ ತಾಕೀತು ಮಾಡಿದರು.

Advertisement

ಜಿಲ್ಲೆಯ ಕೊಯಿಲೂರಿನಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿಗೆ ಗುರುವಾರ ದಿಢೀರ್ ಭೇಟಿ ನೀಡಿದ ಸಚಿವರು, ಗೋದಾಮಿನಲ್ಲಿ ಸಂಗ್ರಹಿಸಿದ್ದ ಕಡಲೆ, ಅಕ್ಕಿ, ತೊಗರಿ ಬೇಳೆ ಹಾಗೂ ಗೋಧಿಯನ್ನು ಪರಿಶೀಲಿಸಿದರು.

ಬಡ ಫಲಾನುಭವಿಗಳಿಗೆ ವಿತರಣೆ ಮಾಡುವಂತಹ ಕಡಲೆಕಾಳನ್ನು ಸ್ವಚ್ಛಗೊಳಿಸದೇ ನಫೇಡ್‌ನಿಂದ ಸರಬರಾಜು ಮಾಡಲಾಗಿದೆ. ಇದರಲ್ಲಿರುವ ಕಸಕಡ್ಡಿ ಮತ್ತು ಹಾಳಾದ ಕಡಲೆಕಾಳನ್ನು ಪ್ರತ್ಯೇಕಗೊಳಿಸಿ, ಗುಣಮಟ್ಟದ ಕಡಲೆಕಾಳನ್ನು ಸರಬರಾಜು ಮಾಡುವಂತೆ ಸೂಚಿಸಿದರು.

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಆಹಾರ ಇಲಾಖೆ ಉಪ ನಿರ್ದೇಶಕ ದತ್ತಪ್ಪ ಕಲ್ಲೂರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next