Advertisement

ಉಕ್ರೇನಿನಿಂದ ವಾಪಸ್ ಬಂದ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿದ ಸಚಿವ ಅಶ್ವತ್ಥ ನಾರಾಯಣ

12:15 PM Mar 09, 2022 | Team Udayavani |

ಬೆಂಗಳೂರು: ಯುದ್ಧಪೀಡಿತ ಉಕ್ರೇನಿನಿಂದ ಸುರಕ್ಷಿತವಾಗಿ ವಾಪಸ್ ಬಂದಿರುವ ಮಲ್ಲೇಶ್ವರಂ ಕ್ಷೇತ್ರದ ನಾಲ್ವರು ವಿದ್ಯಾರ್ಥಿನಿಯರನ್ನು ಈ ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಭೇಟಿ ಮಾಡಿ, ಭರವಸೆ ತುಂಬಿದರು.

Advertisement

ಮಲ್ಲೇಶ್ವರಂನವರಾದ ಐಶ್ವರ್ಯಾ, ದಿವ್ಯಶ್ರೀ, ಲತಾಶ್ರೀ ಮತ್ತು ನಂದಿತಾ ಅವರು ಉಕ್ರೇನಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು. ಆದರೆ ಆ ರಾಷ್ಟ್ರದ ಮೇಲೆ ರಷ್ಯಾ ಯುದ್ಧ ಸಾರಿದ ಮೇಲೆ ಇವರೆಲ್ಲ ಸಂಕಷ್ಟಕ್ಕೆ ಸಿಲುಕಿದ್ದರು. ಕೊನೆಗೆ, ಕೇಂದ್ರ ಸರಕಾರದ ಆಪರೇಷನ್ ಗಂಗಾ ಕಾರ್ಯಾಚರಣೆಯ ಮೂಲಕ ಇವರನ್ನೆಲ್ಲ ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ.

ಬೆಂಗಳೂರನ್ನು ತಲುಪಿದ ಈ ನಾಲ್ವರು ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರನ್ನು ಭೇಟಿಯಾದ ಸಚಿವರು, ಇವರ ವಿದ್ಯಾಭ್ಯಾಸದ ಮುಂದುವರಿಕೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವುದಾಗಿ ಹೇಳಿದರು. ಜತೆಗೆ, ಉಕ್ರೇನಿನ ಪರಿಸ್ಥಿತಿಯ ಬಗ್ಗೆ ಕೇಳಿ, ತಿಳಿದುಕೊಂಡರು.

ಇದನ್ನೂ ಓದಿ:‘ರಷ್ಯಾ ಜೊತೆಗಿನ ಹೋರಾಟಕ್ಕೆ ನ್ಯಾಟೋ ಹೆದರುತ್ತಿದೆ’: ತಿರುಗಿಬಿದ್ದ ಅಧ್ಯಕ್ಷ ಝೆಲೆನ್ಸ್ಕಿ

ಈ ಸಂದರ್ಭದಲ್ಲಿ ಮಲ್ಲೇಶ್ವರ ಮಂಡಲದ ಬಿಜೆಪಿ ಅಧ್ಯಕ್ಷೆ ಕಾವೇರಿ ಕೇದಾರನಾಥ್ ಮುಂತಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next