ಬೆಂಗಳೂರು: ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನೆರೆ ಬಗ್ಗೆ ತಮ್ಮಿಂದ ಮಾಹಿತಿ ಪಡೆದಿದ್ದಾರೆ. ಅವರು ಕೋವಿಡ್ ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಾಗಿ ನಾನು ಕೂಡ ರಾತ್ರಿ ಜಿಲ್ಲಾಧಿಕಾರಿಗಳ ಜೊತೆ ಮಾತಾಡಿದ್ದೇನೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ನೆರೆ ವಿಚಾರವಾಗಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, ಕೊಡಗು ಉಸ್ತುವಾರಿ ಸಚಿವ ಸೋಮಣ್ಣ ಅವರಿಗೆ ಕೊಡಗಿಗೆ ಹೋಗುವಂತೆ ಹೇಳಿದ್ದೇವೆ. ಚಿಕ್ಕಮಗಳೂರಿಗೆ ಸಚಿವ ಸಿ ಟಿ ರವಿ ನಾಳೆ ಹೋಗಲಿದ್ದಾರೆ ಎಂದರು.
ಮಲೆನಾಡಿನಲ್ಲಿ 107 ಮಳೆಯಾಗುವ ನಿರೀಕ್ಷೆಯಿತ್ತು. ಆದರೆ 277 ಮಿಮಿ ಮಳೆಯಾಗಿದೆ. ಕರಾವಳಿ ಭಾಗದಲ್ಲಿ 200 ಮಿಮಿ ಆಗಬೇಕಿತ್ತು ಆದರೆ 342 ಮಿಮಿ ಮಳೆ ಆಗಿದೆ. ಬೆಳಗಾವಿ, ಚಿಕ್ಕಮಗಳೂರು, ಮೈಸೂರು, ಉತ್ತರ ಕನ್ನಡ, ಕೊಡಗು, ದ.ಕನ್ನಡ, ಧಾರವಾಡ, ಹಾಸನ, ಶಿವಮೊಗ್ಗ ಈ 9 ಜಿಲ್ಲೆಗಳಲ್ಲಿ ಜಾಸ್ತಿ ಮಳೆ ಆಗಿದೆ ಎಂದರು.
ಮಳೆಯಿಂದಾಗಿ ನಾಲ್ವರು ನಾಪತ್ತೆಯಾಗಿದ್ದಾರೆ. ಐದು ಜಾನುವಾರುಗಳು ಸಾಪನ್ನಪ್ಪಿದೆ. 12 ಸಂತ್ರಸ್ತರ ಕೇಂದ್ರದಲ್ಲಿ 262 ಜನವಿದ್ದಾರೆ. 375 ಮನೆಗಳು ಹಾಳಾಗಿವೆ. 12 ಮನೆಗಳು ಸಂಪೂರ್ಣ ನಾಶವಾಗಿದೆ.
ನೆರೆ ನಿರ್ವಹಣೆಗೆ ಈ ಬಾರಿ ಉತ್ತಮ ಯೋಜನೆಗಳನ್ನು ಹಾಕಿ ಕೆಲಸ ಮಾಡಿದ್ದೇವೆ. ಹಾಗೆಯೇ ಕೆಲಸ ಮಾಡುತ್ತಿದ್ದೇವೆ. ಜವಾಬ್ದಾರಿ ಹೆಚ್ಚಿದ್ದು, ಯಾವ ಅಧಿಕಾರಿಯೂ ರಜೆಗೆ ತೆರಳುವಂತಿಲ್ಲ. ನಾಳೆ ಎಲ್ಲಾ ಅಧಿಕಾರಿಗಳಿಗೆ ಪತ್ರ ಬರೆಯುತ್ತೇನೆ. ಹಣದ ಕೊರತೆಯಾಗಬಾರದು ಎಂದು ಸಿಎಂ ಹೇಳಿದ್ದಾರೆ. ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಮೃತ, ಗಾಯಗೊಂಡವರಿಗೆ ಕೂಡ
1268.36 ಕೋಟಿ ಹಣ ಇದೆ. 90.30 ಕೋಟಿ ಕೋವಿಡ್ ಸಂಬಂಧಿಸಿದ ಹಣ ಇದೆ. ಹಾಗಾಗಿ ಹಣದ ಸಮಸ್ಯೆ ಇಲ್ಲ. ಸರ್ಚ್ ಲೈಟ್, ಟೆಂಟ್, ಕ್ಯಾಮರಾ, ಬೋಟ್ ಸೇರಿ ಅಗತ್ಯ ವಸ್ತುಗಳು ಇರಬೇಕು ಎಂದು ಹೇಳಿದ್ದೇವೆ
ಡ್ಯಾಂಗಳಲ್ಲಿ ನೀರು ಹೆಚ್ಚಾಗಿ ನೆರೆ ಬಂದರೂ ಸಮಸ್ಯೆ ಆಗದಂತೆ ಸೂಚನೆ ನೀಡದ್ದೇವೆ. ನಿತ್ಯವೂ ಡ್ಯಾಂ ನೀರನ್ನ ಮಾನಿಟರ್ ಮಾಡಲು ಹೇಳಿದ್ದೇವೆ. ಕೋಯ್ನಾ 60 % ತುಂಬಿದೆ. ಇನ್ನೂ ನೀರು ಬಿಡುಗಡೆ ಮಾಡಿಲ್ಲ. ಆದರೂ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ವ್ಯಾಟ್ಸಾಪ್ ಮೂಲಕ ಟಚ್ ನಲ್ಲಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ನೆರೆ ಮತ್ತು ತುರ್ತು ಸಂದರ್ಭ ಎದುರುಸಲು ನಮ್ಮಇಲಾಖೆ ಸರ್ವಸನ್ನದ್ಧವಾಗಿದೆ ಎಂದು ಅಶೋಕ್ ಹೇಳಿದ್ದಾರೆ.