Advertisement

ಕೇಂದ್ರ ಏನೇ ಹೇಳಿದರೂ ಬಿಎಸ್ ವೈ ಹಾಗೂ ನಾವು ತಲೆಬಾಗುತ್ತೇವೆ: ಆರ್ ಅಶೋಕ್

02:38 PM Jul 22, 2021 | keerthan |

ಬೆಂಗಳೂರು: ಮುಖ್ಯಮಂತ್ರಿಗಳು ಇಂದು ಏನು ಹೇಳಿದ್ದಾರೆಯೋ ಅದಕ್ಕೆ ನಮ್ಮ ಸಹಮತವಿದೆ. ಕೇಂದ್ರ ಏನೇ ಹೇಳಿದರೂ ಬಿಎಸ್.ಯಡಿಯೂರಪ್ಪ ಹಾಗೂ ನಾವು ತಲೆಬಾಗುತ್ತೇವೆ ಎಂದು ಸಚಿವ ಆರ್.ಅಶೋಕ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ಹೈಕಮಾಂಡ್ ಸೂಚನೆಯಂತೆ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ. ಈವರೆಗೂ ಹೈಕಮಾಂಡ್ ನಿಂದ ಯಾವುದೇ ಸಂದೇಶ ಬಂದಿಲ್ಲ. ಜು.26ರಂದು ಯಡಿಯೂರಪ್ಪನವರು ಹೇಳಿದ ಹಾಗೆ ಕೇಂದ್ರದ ನಾಯಕರ ಜೊತೆ ಚರ್ಚಿಸುತ್ತಾರೆ ಎಂದರು.

ಇದನ್ನೂ ಓದಿ:ನನಗಿನ್ನೂ 15 ವರ್ಷ ಅವಕಾಶವಿದೆ, ರಾಜ್ಯವಾಳುವ ಆಸೆಯಿದೆ: ಉಮೇಶ್ ಕತ್ತಿ

ಈ ಬೆಳವಣಿಗೆಗಳ ನಿಮಗೆ ಬೇಸರ ಆಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಅಶೋಕ್, ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂಭ್ರಮದಲ್ಲಿದ್ದೇನೆ ಎಂದರು.

ಪಾರ್ಟಿ ತೀರ್ಮಾನಕ್ಕೆ ಬದ್ದ: ಸಚಿವ ಎಸ್.ಅಂಗಾರ ಮಾತನಾಡಿ, ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಅದನ್ನು ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ನಾಯಕತ್ವ ಬದಲಾವಣೆ ಅಭ್ಯಂತರದ ಪ್ರಶ್ನೆಯೇ ಬರುವುದಿಲ್ಲ. ಇದು ಪಕ್ಷದ ತೀರ್ಮಾನ. ಅದರ ನಾನು ಮಾತಾಡಲು ಬರುವುದಿಲ್ಲ. ಪಕ್ಷದ ತೀರ್ಮಾನಕ್ಕೆ ನಾವು ಬದ್ದ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next