“ಲೋಕ ಕಲ್ಯಾಣದ ಆಶಯದಲ್ಲಿ ಕೆಲಸ ಮಾಡುತ್ತಿರುವ ನಾಡಿನ ಕ್ರಿಯಾಶೀಲ ಸಚಿವ ಶಿವರಾಮ ಹೆಬ್ಬಾರ ಅವರ ಜನಪರ ತುಡಿತ ಅನುಪಮವಾದದ್ದು. ಜಿಲ್ಲೆಯ, ಕ್ಷೇತ್ರದ ಅಭಿವೃದ್ಧಿಗೆ ಅವರು ಕೊಟ್ಟ ಕೊಡುಗೆ, ಸರಕಾರ ವಹಿಸಿದ ಜವಾಬ್ದಾರಿಯ ಕಾರ್ಮಿಕ ಇಲಾಖೆಯ ಸಾಧನೆ ಎರಡೂ ಅಚ್ಚರಿ, ಅದ್ಭುತ. ಇಡೀ ರಾಜ್ಯದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರವನ್ನೂ ಮಾದರಿಯಾಗಿಸಿದ್ದಾರೆ’.
ಪ್ರಜೆಗಳ ಇಷ್ಟದ ದೊರೆಯೇ ರಾಜ. ಇಲ್ಲಿ ರಾಜಾರಾಮನಾಗಿದ್ದಾರೆ ಶಿವರಾಮ. ಹೌದು. ಕಾರ್ಮಿಕ ಸಚಿವ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಕ್ಷರಶಃ ರಾಜ್ಯದ ಮಾದರಿ ಸಚಿವ. ಯಾರಿಗೂ ಬೇಡವಾದ ಇಲಾಖೆಯಿಂದ ರಾಜ್ಯದಲ್ಲಿ ಎಲ್ಲರಿಗೂ ಬೇಕಾದ ಸಚಿವರಾದವರು. ಕ್ಷೇತ್ರದ ಮಾದರಿ ಶಾಸಕರಾದವರು.
ದೂರದೃಷ್ಟಿಯ ಸಚಿವರಾಗಿ ನುಡಿದಂತೆ ನಡೆಯುವವರು. ಇಂಥ ಶಿವರಾಮ ಹೆಬ್ಬಾರ ತುಳಿದ ಸಾಧನೆ ಸಣ್ಣದಲ್ಲ.
ಲಾರಿ ಡ್ರೈವರ್ ಆಗಿ ಕಷ್ಟದಿಂದಲೇ ಬಡವರ ಬದುಕನ್ನೂ ಅನುಭವಿಸಿ ಬಂದ ಶಿವರಾಮ ಹೆಬ್ಬಾರ ಅವರು, ಸಹಕಾರಿ ಕ್ಷೇತ್ರದ ಮೂಲಕ ರಾಜಕೀಯ ಪ್ರವೇಶಿಸಿದವರು. ಉನ್ನತ ಸ್ಥಾನಕ್ಕೆ ಏರಿದ್ದರೂ ನಂಬಿದ ಸಹಕಾರಿ ಕ್ಷೇತ್ರ ಬಿಡದವರು. ಕಷ್ಟ ಎಂದು ಬಂದವರಿಗೆ ಕೈಲಾದ ನೆರವಾಗುವ ಹೃದಯವಂತರು.
ಕೋವಿಡ್ ಮೊದಲನೇ ಅಲೆ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಕ್ಷೇತ್ರದ 75000 ಬಡ ಕುಟುಂಬಗಳಿಗೆ ಹೆಬ್ಟಾರ ರೇಷನ್ ಕಿಟ್ ವಿತರಿಸಿ ಆಪದ್ಭಾಂಧವ ಎನಿಸಿಕೊಂಡವರು. ಕೋವಿಡ್ ಶಂಕಿತರಿಗೆ ತಜ್ಞ ವೈಜ್ಞರ ಸಲಹೆ ಮೇರೆಗೆ 35000 ಕ್ಕೂ ಅಧಿಕ ಕೋವಿಡ್ ಕೇರ್ ಕಿಟ್ ವಿತರಿಸಿದವರು. ಹೆಬ್ಬಾರ ಕೋವಿಡ್ ಕೇರ್ ಹೆಲ್ಪ್ ಲೈನ್ ಹೆಸರಿನಡಿಯಲ್ಲಿ ಆಂಬ್ಯುಲೆನ್ಸ್ ಕೊಡುಗೆ ಕೊಟ್ಟವರು. ಕೂಲಿಕಾರ್ಮಿಕರಿಗೆ ಹಾಗೂ ಆಟೋ ಚಾಲಕರಿಗೆ ವೈಯಕ್ತಿಕ ಧನಸಹಾಯ ಮಾಡುತ್ತಿದ್ದವರು. ಜಿಲ್ಲೆಯ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಗೆ ತಲಾ 2 ಸೀರೆ, ಪೌರ ಕಾರ್ಮಿಕರಿಗೆ ರೇಷನ್ ಕಿಟ್ ವಿತರಣೆ, ಬಡ ಕುಟುಂಬಗಳಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ವೈಯಕ್ತಿಕವಾಗಿ ಆರ್ಥಿಕ ಸಹಾಯಧನ ಮಾಡಿ ಮಾದರಿಯಾದವರು.
25ಲಕ್ಷ ರೂ.ವೆಚ್ಚದಲ್ಲಿ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಡಯಾಲಿಸಿಸ್ ವಾರ್ಡ್ ನಿರ್ಮಾಣ, 20 ಲಕ್ಷ ರೂ. ವೆಚ್ಚದಲ್ಲಿ ಸೆಲ್ಕೋ ಸಂಸ್ಥೆಯ ಸಹಭಾಗಿತ್ವದಲ್ಲಿ ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ಸೌರಶಕ್ತಿ ಆಧಾರಿತ ಪ್ರಸೂತಿ ಗೃಹ ನಿರ್ಮಾಣ, ಯಲ್ಲಾಪುರ, ಮುಂಡಗೋಡ ತಾಲೂಕಿನ ಸರ್ಕಾರಿ ವಿದ್ಯಾಸಂಸ್ಥೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕದ ಕೊಡುಗೆ, ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಹಾಯಧನ, ಕ್ಷೇತ್ರದ ಪ್ರೌಢಶಾಲೆ ಪದವಿ ಪೂರ್ವ ಹಾಗೂ ಪದವಿ ವಿಧ್ಯಾರ್ಥಿಗಳಿಗೆ ಒಟ್ಟು 2ಲಕ್ಷ ನೋಟ್ ಬುಕ್ ವಿತರಣೆ, ಕೋವಿಡ್ ಸಂದರ್ಭದಲ್ಲಿ ಬನವಾಸಿ ವ್ಯಾಪ್ತಿಯ ರೈತರು ಬೆಳೆದ 600 ಟನ್‌ಗೂ ಅ ಧಿಕ ಅನಾನಸು ಹಣ್ಣುಗಳನ್ನು ನೇರವಾಗಿ ರೈತರಿಂದ ಖರೀದಿ ಮಾಡಿ ನೆರವಿನ ಹಸ್ತ ಚಾಚಿದವರು.
7 ಕೋಟಿ ರೂ. ವೆಚ್ಚದಲ್ಲಿ ಯಲ್ಲಾಪುರದಲ್ಲಿ ಹೈಟೆಕ್ ಬಸ್ ನಿಲ್ದಾಣ ಮಾಡಿಸಿದವರು. 4 ಕೋಟಿ ರೂ. ವೆಚ್ಚದಲ್ಲಿ ಮುಂಡಗೋಡ ಹೈಟೆಕ್ ಬಸ್ ನಿಲ್ದಾಣ ಕಟ್ಟಿಸಿದವರು. 4 ಕೋಟಿ ರೂ.ವೆಚ್ಚದಲ್ಲಿ ಮುಂಡಗೋಡ ನೂತನ ಬಸ್ ಡಿಪೋ ನಿರ್ಮಾಣ ಕಾಮಗಾರಿ ಆರಂಭಿರುವುದು, 24 ಕೋಟಿ ರೂ. ವೆಚ್ಚದಲ್ಲಿ ಬೇಡ್ತಿ ಸೇತುವೆ ನಿರ್ಮಿಸಿರುವುದು ಒಂದೆರಡೇ ಅಲ್ಲ. ಹೆಬ್ಬಾರ ಅವರ ಅಭಿವೃದ್ಧಿ ದಾರಿ ಬಹು ಮಗ್ಗುಲಿನದ್ದು. ಕ್ಷೇತ್ರದ ಪ್ರಮುಖ ಜಿಲ್ಲಾ ರಸ್ತೆಗಳಾದ ಶಿರಸಿ-ಬನವಾಸಿ ರಸ್ತೆ, ಮಳಗಿ-ಬನವಾಸಿ ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಉನ್ನತೀಕರಣ, ಯಲ್ಲಾಪುರದ ಕಿರವತ್ತಿ, ಬನವಾಸಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಿದ್ದು, ಕಾರ್ಮಿಕ ಇಲಾಖೆ ಸಾಮರ್ಥ್ಯ ಪರಿಚಯಿಸಿದ ಸಚಿವರೂ ಆಗಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಸಚಿವರಾಗಿದ್ದಾಗ ಈಗ ಹಾವೇರಿ ಉಸ್ತುವಾರಿ ಸಚಿವರಾದರು. ಹೆಬ್ಬಾರ ಹೆಬ್ಬಾರರೇ ಆಗಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಕಂಕಣ ತೊಟ್ಟಿಕೊಂಡಿದ್ದಾರೆ.
ಬೇಡ್ತಿ ಏತ-ನೀರಾವರಿ ಯೋಜನೆ ಹಂತ-2ರಲ್ಲಿ ಕವಲಗಿ ಹಳ್ಳದಿಂದ ಕಿರು ಆಣೆಕಟ್ಟು ನಿರ್ಮಿಸಿ ಏತ ನೀರಾವರಿ ಮೂಲಕ ಮುಂಡಗೋಡ ತಾಲೂಕಿನ 84 ಕೆರೆಗಳಿಗೆ ನೀರು ತುಂಬಿಸುವ 201 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ.
ಬೇಡ್ತಿ ಏತ-ನೀರಾವರಿ ಯೋಜನೆ ಹಂತ-3ರಲ್ಲಿ ಯಲ್ಲಾಪುರ ತಾಲೂಕಿನ ಕಿರವತ್ತಿ, ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 64 ಕೆರೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆಗೆ ಈಗಾಗಲೇ ಸರ್ವೇ ಹಾಗೂ ತಾಂತ್ರಿಕ ಕಾರ್ಯಗಳು ಮುಗಿದಿದ್ದು, ಶೀಘ್ರದಲ್ಲೇ ಮಂಜೂರಾತಿ ಸಿಗಲಿದೆ.
ಶಿರಸಿ ತಾಲೂಕಿನ ಬನವಾಸಿ ಹೋಬಳಿ ವ್ಯಾಪ್ತಿಯ ವರದಾ ಏತ-ನೀರಾವರಿ ಯೋಜನೆ ಹಂತ-1ರಲ್ಲಿ ಬನವಾಸಿ ಹೋಬಳಿಯ 32 ಕೆರೆಗಳಿಗೆ 63 ಕೋಟಿ ರೂ. ವೆಚ್ಚದ ಈ ಯೋಜನೆ ಪೂರ್ಣಗೊಂಡಿದೆ. ಶಿರಸಿ ತಾಲೂಕಿನ ಬನವಾಸಿ ಹೋಬಳಿ ವ್ಯಾಪ್ತಿಯ ವರದಾ ಏತ-ನೀರಾವರಿ ಯೋಜನೆ ಹಂತ-2ರಲ್ಲಿ ಬನವಾಸಿ ಹೋಬಳಿಯ 45 ಕೆರೆಗಳಿಗೆ 125 ಕೋಟಿ ರೂ.ವೆಚ್ಚದ ಈ ಯೋಜನೆಗೆ ಟೆಂಡರ್ ಆಗಿದೆ. ಕ್ಷೇತ್ರದಲ್ಲಿ ಕೃಷಿ, ತೋಟಗಾರಿಕೆಗೆ ನೀರಾವರಿ ಕಲ್ಪಿಸಲು 100ಕ್ಕೂ ಅಧಿಕ ಚೆಕ್‌ಡ್ಯಾಂ ನಿರ್ಮಿಸಲಾಗುತ್ತಿದೆ.
ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಿದ್ದು, ಬಲ ಕೊಡಲು ಶ್ರಮಿಸುತ್ತಿದ್ದಾರೆ. 25 ಕೋಟಿ ರೂ. ವೆಚ್ಚದಲ್ಲಿ ಗುಳ್ಳಾಪುರ-ಹಳವಳ್ಳಿ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದ್ದಾರೆ. ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 9.50 ಕೋಟಿ ರೂ. ವೆಚ್ಚದಲ್ಲಿ ಗಣೇಶಪಾಲ ಹಳ್ಳಕ್ಕೆ ಸರ್ವಋತು ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರು ಆಗಿದೆ.
ಯಲ್ಲಾಪುರ ತಾಲೂಕು ಹಿತ್ಲಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕಾಗಿ 5 ಕೋಟಿ ರೂ.ಗಳ ವಿಶೇಷ ಅನುದಾನ, ಸಚಿವ ಹೆಬ್ಟಾರ ಪ್ರಯತ್ನದ ಫಲವಾಗಿ ಜಿಲ್ಲೆಯ 28 ಗ್ರಾಮ ಪಂಚಾಯಿತಿಗಳು ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ ಆಯ್ಕೆ ಆಗಿದ್ದೂ ವಿಶೇಷವೇ ಆಗಿದೆ.
ಯಲ್ಲಾಪುರ, ಶಿರಸಿ, ಮುಂಡಗೋಡ ತಾಲೂಕಿನಲ್ಲಿ ಕಾರ್ಮಿಕ ಭವನ, ಯಲ್ಲಾಪುರ ಪಟ್ಟಣದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ಪರಿವೀಕ್ಷಣಾ ಮಂದಿರ ನಿರ್ಮಾಣ ಕಾಮಗಾರಿಗೆ ಚಾಲನೆ, ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಲೋಕೋಪಯೋಗಿ ಇಲಾಖೆ ಮೂಲಕವಾಗಿ 45 ಕೋಟಿ ರೂ. ಮತ್ತು ಪಂಚಾಯತ ರಾಜ್ ಇಲಾಖೆ ಅಡಿಯಲ್ಲಿ 45 ಕೋಟಿ ರೂ.ಅನುದಾನ ಮಂಜೂರಾಗಿ ಕಾಮಗಾರಿಗೆ ಚಾಲನೆ ಆಗಿದೆ. ಕ್ಷೇತ್ರದ ಗ್ರಾಮೀಣ ಭಾಗಗಳ ಪಶು ಆಸ್ಪತ್ರೆ ಕಟ್ಟಡಗಳು ಮೇಲ್ದರ್ಜೆಗೇರಿಕೆ, ಮುಂಡಗೋಡ ತಾಲೂಕಿನ ಪಾಳಾ ಇಂದಿರಾಗಾಂಧಿ ವಸತಿ ನಿಲಯಕ್ಕೆ 10 ಕೋಟಿ ರೂ. ಮಂಜೂರು, ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮ
ಪಂಚಾಯಿತಿ ಕಿರವತ್ತಿ ಪಬ್ಲಿಕ್ ಸ್ಕೂಲ್‌ನ ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರೂ. ವಿಶೇಷ ಅನುದಾನ ಮಂಜೂರಾಗಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ 92 ಫುಟ್‌ಬ್ರಿಜ್ ನಿರ್ಮಾಣಕ್ಕೆ ಬಿಡುಗಡೆ ಆಗಿದೆ. ಯಲ್ಲಾಪುರ-ಮುಂಡಗೋಡ ತಾಲೂಕನ್ನು ಸಂಪರ್ಕಿಸುವ ಬಿಳಕಿ-ಶಿಡ್ಲಗುಂಡಿ ಸೇತುವೆ ನಿರ್ಮಾಣ, ಯಲ್ಲಾಪುರ, ಮುಂಡಗೋಡ, ಬನವಾಸಿಯ ಬಹುತೇಕ ಗ್ರಾಮ ಪಂಚಾಯಿತಿಗಳಿಗೆ ಡಿಜಿಟಲ್ ಲೈಬ್ರರಿ ಸ್ಥಾಪನೆ ಕೂಡ ಮಹತ್ವದ್ದಾಗಿದೆ. ಶಿರಸಿ ತಾಲೂಕಿನ ಅಂಡಗಿ ಪಂಚಾಯಿತಿ ವ್ಯಾಪ್ತಿಯಲ್ಲಿ 9 ಕೋಟಿ ರೂ.ವೆಚ್ಚದ ಕೋಲ್ಡ್ ಸ್ಟೋರೇಜ್, ಬನವಾಸಿ ಗ್ರಿಡ್ ಮಂಜೂರು ಮಾಡಿಸಿ ರೈತರಿಗೆ ಅಭಯದಾತರೂ ಆಗಿದ್ದಾರೆ.
ಮಾದರಿ ಇಲಾಖೆಯಾಯಿತು ಕಾರ್ಮಿಕ ಇಲಾಖೆ
ವಿವಿಧ ಕಾರ್ಮಿಕ ವರ್ಗಗಳಿಗೆ ಕನಿಷ್ಟ ವೇತನ ನಿಗದಿಪಡಿಸಿ ಪ್ರತಿ 5 ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಲಾಗುತ್ತಿದೆ. ಈಗಾಗಲೇ 83 ಅನುಸೂಚಿತ ಉದ್ದಮೆಗಳಿಗೆ ವೇತನ ನಿಗದಿಪಡಿಸಿ ಕಾಲಕಾಲಕ್ಕೆ ನಿಯಮಾನುಸಾರ ಪರಿಷ್ಕರಿಸಲಾಗುತ್ತಿದೆ.ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದ ಅರ್ಜಿಗಳು ಸೇರಿದಂತೆ ಹೊಸ ಅಹವಾಲುಗಳ ಸ್ವೀಕಾರಕ್ಕೆ ಅವಕಾಶ ಕಲ್ಪಿಸಿ, ಒಂದು ಬಾರಿ ಇತ್ಯರ್ಥ ಮಾಡಲು ರಾಜ್ಯಾದ್ಯಂತ ಕಾರ್ಮಿಕ ಅದಾಲತ್ ನಡೆಸಲಾಗಿದೆ.ಇದರಲ್ಲಿ ಒಟ್ಟು 302213 ಅರ್ಜಿಗಳು ಸ್ವೀಕೃತವಾಗಿವೆ. 283294 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಒಟ್ಟು 89.04 ಕೋಟಿ ರೂ. ಪರಿಹಾರ ದೊರಕಿಸಿಕೊಡಲಾಗಿದೆ. ಅಲ್ಲದೆ ಪ್ರತಿ ಮಾಹೆ ಒಂದು ದಿನ ಗ್ರಾಮ, ತಾಲೂಕು, ಜಿಲ್ಲಾಮಟ್ಟದಲ್ಲಿ ಕಾರ್ಮಿಕ ಅದಾಲತ್ ನಡೆಸಲು ಸೂಚಿಸಲಾಗಿದೆ.ಕೇಂದ್ರ ಸರ್ಕಾರವು 29 ಕಾರ್ಮಿಕ ಕಾಯ್ದೆಗಳನ್ನು ಒಟ್ಟುಗೂಡಿಸಿ 4 ಕಾರ್ಮಿಕ ಸಂಹಿತೆಗಳಾಗಿ ರೂಪಿಸಿದ್ದು, ಇವುಗಳಿಗೆ ರಾಜ್ಯ ಸರ್ಕಾರಗಳು ನಿಯಮಾವಳಿಗಳನ್ನು ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ. ವೇತನ ಸಂಹಿತೆಗೆ ಸಂಬಂಧಿಸಿದಂತೆ, ಕರಡು ನಿಯಮಾವಳಿಯನ್ನು ರೂಪಿಸಿದ್ದು, ಅಂತಿಮ ಅ ಧಿಸೂಚನೆ ಹೊರಡಿಸ ಬೇಕಾಗಿದೆ. ಕೈಗಾರಿಕಾ ಬಾಂಧವ್ಯ ಸಂಹಿತೆಗೆ ಸಂಬಂಧಿಸಿದಂತೆ ಕರಡು ನಿಯಮಾವಳಿಯನ್ನು ಪ್ರಕಟಿಸಲಾಗಿದ್ದು, ಅಂತಿಮ ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರಡಿಸಲಾಗುತ್ತಿದೆ.
ಸಾಮಾಜಿಕ ಭದ್ರತಾ ಸಂಹಿತೆ ಕುರಿತು ಕರಡು ನಿಯಮಾವಳಿ ಸಿದ್ಧªವಿದ್ದು, ಶೀಘ್ರದಲ್ಲೇ ಕರಡು ಅಧಿ ಸೂಚನೆ ಹೊರಡಿಸುವ ಪ್ರಕ್ರಿಯೆ ಆರಂಭಿಸಲಾಗುತ್ತಿದೆ. ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಸೇವಾ ಷರತ್ತುಗಳ ಸಂಹಿತೆ: ಈ ಸಂಹಿತೆಯ ಕರಡು ನಿಯಮಾವಳಿ ಸಿದ್ಧವಿದ್ದು, ಅಧಿ ಸೂಚನೆ ಹೊರಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜಿಲ್ಲಾಮಟ್ಟದಲ್ಲಿ ಕಾರ್ಮಿಕ ಭವನಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ಹುಬ್ಬಳ್ಳಿಯಲ್ಲಿ ಕಾರ್ಮಿಕ ಭವನ ಉದ್ಘಾಟಿಸಲಾಗಿದೆ. ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ತಾಲೂಕಿನಲ್ಲಿ ಕಾರ್ಮಿಕ ಇಲಾಖೆಯ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ಹೊಸ ತಾಲೂಕುಗಳು ಸೇರಿದಂತೆ ಕಾರ್ಮಿಕ ಕಚೇರಿಗಳು ಇಲ್ಲದ 50 ತಾಲೂಕುಗಳಲ್ಲಿ ಹೊಸದಾಗಿ ಕಚೇರಿಗಳನ್ನು ಆರಂಭಿಸಲಾಗುತ್ತಿದೆ. ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ಅಧ್ಯಯನ ಸಂಸ್ಥೆ ಸ್ಥಾಪಿಸಲಾಗಿದೆ. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಆರಂಭಿಸಲಾಗಿದೆ.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಸದಸ್ಯರಿಗೆ ತರಬೇತಿ ನೀಡಿ 1.00 ಲಕ್ಷಕ್ಕೂ ಹೆಚ್ಚು ವೃತ್ತಿ ಸಂಬಂಧಿ ತ ಸಾಮಗ್ರಿ ವಿತರಿಸಲಾಗಿದೆ. ಹೊಸದಾಗಿ ಸುಮಾರು 6.00 ಲಕ್ಷಕ್ಕೂ ಹೆಚ್ಚು ವೃತ್ತಿ ಸಂಬಂಧಿ ತ ಸಾಮಗ್ರಿ ವಿತರಿಸಲು ಯೋಜನೆ ರೂಪಿಸಿದ್ದು, ಕೆಟಿಪಿಪಿ ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈವರೆಗೆ ರಾಜ್ಯಾದ್ಯಂತ 100 ಕಿತ್ತೂರು ರಾಣಿ ಚೆನ್ನಮ್ಮ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗಿದೆ. ಇನ್ನೂ 100 ಶಿಶು ಪಾಲನಾ ಕೇಂದ್ರಗಳನ್ನು ಆರಂಭಿಸಲು ಯೋಜಿಸಲಾಗಿದೆ. ಕಾರ್ಮಿಕರ ಆರೋಗ್ಯ ತಪಾಸಣೆ ನಡೆಯುತ್ತಿದೆ. ಕಟ್ಟಡ ಕಾರ್ಮಿಕರ ಮಕ್ಕಳ ಭವ್ಯ ಭವಿಷ್ಯದ ದೃಷ್ಟಿಯಿಂದ ಪದವೀಧರ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀûಾ ಪ್ರಾಧಿ ಕಾರ ಮೂಲಕ ಪರೀಕ್ಷೆ ನಡೆಸಿ ಅರ್ಹ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪ್ರಪ್ರಥಮ ಬಾರಿಗೆ ಆರಂಭಿಸಲಾಗಿದೆ. ಮಂಡಳಿಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರೂಪಿಸಿ, ಸುಮಾರು 180ಕ್ಕೂ ಹೆಚ್ಚು ಸಿಬ್ಬಂದಿಗಳ ಕಾಯಂ ನೇಮಕಾತಿಗೆ ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದು, ನೇಮಕಾತಿ ಪ್ರಕ್ರಿಯೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.ಅಸಂಘಟಿತ ಕಾರ್ಮಿಕರ ಸಮಾಜಿಕ ಭದ್ರತಾ ಮಂಡಳಿ ಮೂಲಕ ಅನೇಕ ಯೋಜನೆ ರೂಪಿಸಲಾಗುತ್ತಿದೆ.
ಕಾರ್ಮಿಕರನ್ನು ಆನ್‌ಲೈನ್ ಮೂಲಕ ನೋಂದಾಯಿಸಿ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ಸರ್ಕಾರವು ಇ-ಶ್ರಮ ಮೋರ್ಟಲ್ ಜಾರಿಗೆ ತಂದಿದೆ. ನೋಂದಾಯಿತ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಸುರûಾ ಭಿಮಾ ಯೋಜನೆ ಅನ್ವಯವಾಗಲಿದೆ. ರಾಜ್ಯದಲ್ಲಿ ಕರ್ನಾಟಕ ರಾಜ್ಯ ವಿಮಾ ಯೋಜನೆ ಮತ್ತು ವೈದ್ಯಕೀಯ ಸೇವೆಗಳ ನಿರ್ವಹಣೆ ಮಾಡಲಾಗುತ್ತಿದೆ. ರಾಜ್ಯದ ಇಎಸ್‌ಐ ಚಿಕಿತ್ಸಾಲಯ ಮತ್ತು ಆಸ್ಪತ್ರೆಗಳಲ್ಲಿ ಪ್ರಾಥಮಿಕ ಹಾಗೂ ಸೆಕೆಂಡರಿ ಹಂತದ ಚಿಕಿತ್ಸೆ ನೀಡಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಅಗತ್ಯವಿರುವಲ್ಲಿ ಸದರಿ ಸೇವೆ ನೀಡಲಾಗುತ್ತದೆ. ಇನ್ನೂ ಏನೆಲ್ಲ ಸೇರಿದೆ.
– ಜಿ.ಎಲ್.ಭಟ್.