Advertisement

ಅಕ್ರಮ ಸಕ್ರಮ ಕಾಲಾವಧಿ ವಿಸ್ತರಣೆಗೆ ಸಚಿವರಿಗೆ ಮನವಿ

11:19 PM Jun 18, 2019 | Team Udayavani |

ಕುಂದಾಪುರ: ಸರಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗು ವಳಿಯನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಕೆಗೆ ಇದ್ದ ಕಾಲಾವಧಿಯನ್ನು ಹೆಚ್ಚಿಸಬೇಕು ಎಂದು ಉಡುಪಿ ಜಿಲ್ಲಾ ರೈತರ ಸಂಘ ಮಂಗಳವಾರ ಕಂದಾಯ ಸಚಿವ ಆರ್‌. ವಿ. ದೇಶಪಾಂಡೆ ಅವರಿಗೆ ಮನವಿ ಮಾಡಿದೆ.

Advertisement

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94ಎ (4)ಗೆ 2018ನೇ ಮಾ.17ರಂದು ತಿದ್ದುಪಡಿ ತರಲಾಗಿದ್ದು ಅನಧಿಕೃತ ಅಧಿಭೋಗವನ್ನು ಸಕ್ರಮಗೊಳಿಸುವುದಕ್ಕಾಗಿ ಇದ್ದಂತಹ ಅಂತಿಮ ದಿನಾಂಕವನ್ನು ಮರು ನಿಗದಿಪಡಿಸಲಾಗಿದೆ. ಅದರಂತೆ 1-1-2005ಕ್ಕಿಂತ ಮೊದಲು ಅನಧಿಕೃತ ಅಧಿಭೋಗವನ್ನು ಹೊಂದಿದವರಿಗೆ ಅಂತಹ ಜಮೀನುಗಳನ್ನು ಸಕ್ರಮಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು 2019ರ ಮಾ.15ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಲೋಕಸಭಾ ಚುನಾವಣೆಯ ನೀತಿಸಂಹಿತೆಯ ಕಾರಣದಿಂದ ಅರ್ಜಿದಾರರಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಮೊಟಕುಗೊಳಿಸಲಾಯಿತು. ಇದರಿಂದ ಹಲವಾರು ಅರ್ಜಿದಾರರು ಅರ್ಜಿ ಸಲ್ಲಿಸಲು ಅವಕಾಶ ವಂಚಿತರಾಗಿದ್ದಾರೆ.

ಚುನಾವಣೆಯ ನೀತಿಸಂಹಿತೆಯ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದಾದ ಈ ಪ್ರಮಾದವನ್ನು ಸರಿಪಡಿಸಿ ಮತ್ತೂಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಅರ್ಜಿಯನ್ನು ಅಟಲ್ ಜೀ/ಜನಸ್ನೇಹಿ ಕೇಂದ್ರಗಳಲ್ಲಿ ಆನ್‌ಲೈನ್‌ ಮುಖಾಂತರ ಸಲ್ಲಿಸುವಂತೆ ನಿರ್ದೇಶನ ನೀಡಲಾದ್ದರಿಂದ ಗ್ರಾಮೀಣ ಪ್ರದೇಶದ ಮುಗ್ಧ ಜನರಿಗೆ ಅನಾವಶ್ಯಕ ತೊಂದರೆ ಉಂಟಾಗಿರುತ್ತದೆ. ಆನ್‌ಲೈನ್‌ ಅರ್ಜಿಯನ್ನು ತಂತ್ರಾಂಶವು ದೋಷದಿಂದ ಪಡೆಯದ ಕಾರಣ ಜನರಲ್ಲಿ ಗೊಂದಲ ಉಂಟಾಗಿರುವುದು ಮತ್ತು ದಿನ ಪೂರ್ತಿ ನಿಲ್ಲಬೇಕಾಗಿರುತ್ತದೆ. ಆದುದರಿಂದ ಈ ಹಿಂದೆ ಇದ್ದಂತೆ ಕೈ ಬರಹದ ಮೂಲಕ ಅರ್ಜಿ ಸ್ವೀಕರಿಸಿ ಬಳಿಕ ಸಂಬಂಧಪಟ್ಟ ಇಲಾಖೆಯ ಮುಖಾಂತರ ಆನ್‌ಲೈನ್‌ಗೆ ಸೇರ್ಪಡೆಗೊಳಿಸಿದರೆ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುತ್ತದೆ.

ಕಾಯ್ದೆಯಲ್ಲಿ ಅವಕಾಶ ಕಲ್ಪಿಸಿ

ಈ ಕಾರಣದಿಂದ ಅರ್ಹ ರೈತರು ಈ ಕಾಯ್ದೆಯಡಿ ಅನಧಿಕೃತ ಸಾಗುವಳಿ ಸಕ್ರಮಗೊಳಿಸುವ ಅವಕಾಶದಿಂದ ವಂಚಿತರಾಗಿದ್ದು, ಈ ರೈತರಿಗೆ ಹೆಚ್ಚುವರಿ ಕಾಲಾವಕಾಶ ನೀಡುವುದು ಅನಿವಾರ್ಯವಾಗಿರುತ್ತದೆ. ಸರಕಾರಿ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಹಾಗೂ ವಿವಿಧ ಸಂಹಿತೆಗಳ ಕಾರಣಕ್ಕಾಗಿ ರೈತರ ಅರ್ಜಿ ಸ್ವೀಕಾರವಾಗದೆ ತಡೆಯಾಗಿರುವುದನ್ನು ಸರಕಾರವು ಸೂಕ್ತವಾಗಿ ಪರಿಗಣಿಸಿ ಈ ಮೇಲೆ ಪ್ರಸ್ತಾಪಿಸಿದ ವಿಷಯಗಳನ್ನು ಪರಿಗಣಿಸಿ ಅರ್ಜಿ ಸ್ವೀಕಾರ ಅವಧಿಯನ್ನು ವಿಸ್ತರಿಸುವ ಬಗ್ಗೆ ಕಾಯ್ದೆಯಲ್ಲಿ ಸೂಕ್ತ ಅವಕಾಶ ಕಲ್ಪಿಸಿಕೊಡಬೇಕಾಗಿ ಉಡುಪಿ ಜಿಲ್ಲಾ ರೈತರ ಸಂಘದ ವತಿಯಿಂದ ಪ್ರಧಾನ ಕಾರ್ಯದರ್ಶಿ ಸತೀಶ್‌ ಕಿಣಿ, ವಿಕಾಸ್‌ ಹೆಗ್ಡೆ, ಉದಯ್‌ ಪೂಜಾರಿ, ಸದಾಶಿವ ಶೆಟ್ಟಿ, ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next