Advertisement

ಸಚಿವರಾಗಿ ಅಂಗಾರ ಇದು ಮೊದಲ ಬಾರಿ ಜಿಲ್ಲೆಗೆ

02:12 AM Jan 15, 2021 | Team Udayavani |

ಮಂಗಳೂರು: 27 ವರ್ಷಗಳಿಂದ ಶಾಸಕರಾಗಿ ಸುದೀರ್ಘ‌ ರಾಜಕೀಯ ಅನುಭವ ಪಡೆದಿರುವ ಸುಳ್ಳಿ ಅಂಗಾರ ಅವರು ಸಚಿವರಾಗುವದರೊಂದಿಗೆ ದ.ಕ. ಜಿಲ್ಲೆ ಹಾಗೂ ಸುಳ್ಯ ಕ್ಷೇತ್ರದಲ್ಲಿ ಎರಡು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಜಿಲ್ಲೆಯಲ್ಲೇ ಇದೇ ಮೊದಲ ಬಾರಿಗೆ ದಲಿತ ಸಮುದಾಯಕ್ಕೆ ಸಚಿವ ಸ್ಥಾನ ದೊರಕಿರುವುದು ಒಂದೆಡೆಯಾದರೆ, ಇನ್ನೊಂದಡೆ  ಸುಳ್ಯ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಸಚಿವ ಸ್ಥಾನ ಲಭ್ಯವಾಗಿದೆ.

Advertisement

1952ರಿಂದ 2018ರ ವರೆಗಿನ ವಿಧಾನಸಭೆ ಚುನಾವಣೆಗಳ ಇತಿಹಾಸವನ್ನು ಅವಲೋಕಿಸಿದರೆ ಜಿಲ್ಲೆಯಲ್ಲಿ ಈವರೆಗೆ ದಲಿತ ಸಮುದಾಯಕ್ಕೆ ಸಚಿವ ಸ್ಥಾನದ ಅವಕಾಶ ಲಭಿಸಿರಲಿಲ್ಲ. ಇದೀಗ ಅಂಗಾರ ಅವರು ಸಚಿವರಾಗುವುದರೊಂದಿಗೆ ಜಿಲ್ಲೆಯಲ್ಲಿ ದಲಿತ ಸಮುದಾಯಕ್ಕೂ ಪ್ರಥಮ ಬಾರಿಗೆ ಸಚಿವ ಸ್ಥಾನದ ಪ್ರಾತಿನಿಧ್ಯ ಲಭಿಸಿದೆ.ಮೂಲತಃ ಸುಳ್ಯದ ರಾಜಕಾರಣಿಗಳು ಇತರ ಕ್ಷೇತ್ರಗಳಿಂದ ಸ್ಪರ್ಧಿಸಿ ಮುಖ್ಯಮಂತ್ರಿ, ಸಚಿವರು, ಸಂಸದರು ಆಗಿದ್ದಾರೆ. ಸದಾನಂದ ಗೌಡ, ಶೋಭಾ ಕರಂದ್ಲಾಜೆ, ಅದೇ ರೀತಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕೂಡ ಸುಳ್ಯದವರು. ಆದರೆ, ವಿಧಾನಸಭೆ ಚುನಾವಣೆಯಲ್ಲಿ 1962ರಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ರಚನೆಯಾದಂದಿನಿಂದ ಈವರೆಗೆ ಆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಇದೀಗ, ಅಂಗಾರ ಸಚಿವ ಸ್ಥಾನ ಪಡೆದ ದಾಖಲೆಯನ್ನು ಬರೆದಿದ್ದಾರೆ.

ಕಡೆಗೂ ಜಿಲ್ಲೆಗೆ ದೊರತ ಸಚಿವ ಸ್ಥಾನ :

ಬಿಜೆಪಿ ಮಾತ್ರವಲ್ಲದೆ ದ.ಕ. ಜಿಲ್ಲೆಯ ಪ್ರಸ್ತುತ ಶಾಸಕ ರನ್ನು ಪರಿಗಣಿಸಿದರೆ ಅತ್ಯಂತ ಹಿರಿಯ ಶಾಸಕರಾಗಿ ರುವ ಎಸ್‌.ಅಂಗಾರ  ಅವರು ವಿವಾದಾತೀತ ರಾಜಕಾರಣಿ

ಯಾಗಿ ಗುರುತಿಸಿಕೊಂಡವರು. 2013ರ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ 8 ಶಾಸಕ ಸ್ಥಾನಗಳ ಪೈಕಿ  7 ಸ್ಥಾನಗಳು  ಕಾಂಗ್ರೆಸ್‌ ಪಾಲಾಗಿದ್ದ ಸಂದರ್ಭದಲ್ಲಿ ಬಿಜೆಪಿಗೆ  ದೊರತ ಏಕೈಕ ಸಾœನ ಸುಳ್ಯ ಕ್ಷೇತ್ರವಾಗಿತ್ತು.

Advertisement

ಉಸ್ತುವಾರಿ ಸಚಿವ ಸ್ಥಾನದ ಲೆಕ್ಕಾಚಾರ :

ಸಚಿವ ಅಂಗಾರ ಅವರಿಗೆ ದ.ಕ. ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನೀಡುವ ಬಗ್ಗೆಯೂ ರಾಜಕೀಯ ಲೆಕ್ಕಚಾರ ನಡೆಯುತ್ತಿದೆ. ಶ್ರೀನಿವಾಸ ಪೂಜಾರಿಯವರಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಹೊಣೆಗಾರಿಕೆಯನ್ನು ನೀಡಿ, ದ.ಕ. ಜಿಲ್ಲೆಯ ಹೊಣೆಗಾರಿಕೆಯನ್ನು ಅಂಗಾರ ಅವರಿಗೆ ವಹಿಸಿ ಕೊಡುವ ಸಾಧ್ಯತೆಗಳಿವೆ.

 

ಸಚಿವ ಅಂಗಾರ ಕಾರ್ಯಕ್ರಮ ಪಟ್ಟಿ  :

ಜ. 15ರಂದು

ಬೆ. 11.30: ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ

12.00 : ಕದ್ರಿ  ದೇವರ ದರ್ಶನ

12.15 : ಸಂಘನಿಕೇತನಕ್ಕೆ ಭೇಟಿ

12.30 : ದ.ಕ. ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ

2.30 : ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ

3.00 : ಪುತ್ತೂರು ಮಹಾಲಿಂಗೇಶ್ವರ ದೇವರ ದರ್ಶನ

4.00 : ಜಾಲೂÕರಿನಲ್ಲಿ ಸ್ವಾಗತ ವಾಹನ ಜಾಥಾ

4.30 : ಸುಳ್ಯ ಶ್ರೀ ಚೆನ್ನಕೇಶವ

ದೇವರ ದರ್ಶನ

5.00 : ಸುಳ್ಯ ಬಿಜೆಪಿ ಕಚೇರಿಗೆ ಭೇಟಿ

ಜ. 16 ರಂದು

ಬೆ. 7: ಕುಕ್ಕೆ ಸುಬ್ರಹ್ಮಣ್ಯ ದರ್ಶನ

9.15: ಧರ್ಮಸ್ಥಳ  ಕ್ಷೇತ್ರ

11.15: ಮಂಗಳೂರಿಗೆ ಆಗಮನ

1.15 : ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮನ

Advertisement

Udayavani is now on Telegram. Click here to join our channel and stay updated with the latest news.

Next