Advertisement

ಭಾರತ ಜೋಡೋ ಅಲ್ಲ ಕಾಂಗ್ರೆಸ್‌ ಜೋಡೋ ಯಾತ್ರೆ: ಸಚಿವ ಆನಂದ ಸಿಂಗ್‌

09:11 PM Sep 17, 2022 | Team Udayavani |

ಕೊಪ್ಪಳ: ರಾಹುಲ್‌ ಗಾಂಧಿ ಆರಂಭಿಸಿರುವ ಭಾರತ ಜೋಡೋ ಯಾತ್ರೆಯು ಅದು ಭಾರತ ಜೋಡೋ ಯಾತ್ರೆಯಲ್ಲ, ಕಾಂಗ್ರೆಸ್‌ ಜೋಡೋ ಯಾತ್ರೆಯಾಗಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಗುಲಾಂ ನಬಿ ಆಜಾದ್‌ ಕಾಂಗ್ರೆಸ್‌ ಆರಂಭದಿಂದ ಇದ್ದವರು. ಈಗ ಪಕ್ಷ ತೊರೆದಿದ್ದಾರೆ. ಇದನ್ನು ನೋಡಿದರೆ ಎಲ್ಲರಿಗೂ ಅರ್ಥವಾಗುತ್ತದೆ. ಇಡೀ ದೇಶ ಮೆಚ್ಚುವಂತಹ ನಾಯಕತ್ವ ರಾಹುಲ್‌ ಗಾಂಧಿ ಅವರಲ್ಲಿಲ್ಲ. ಸಿದ್ದು-ಡಿಕೆಶಿ ನಡುವಿನ ಬಣಗಳ ವಿಚಾರ ನನಗೆ ಗೊತ್ತಿಲ್ಲ. ಅವರ ಪಕ್ಷದ ವಿಚಾರ ನನಗೆ ಗೊತ್ತಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಮತ್ತೆ ನಮ್ಮದೆ ಸರ್ಕಾರ ಅಧಿ ಕಾರಕ್ಕೆ ಬರಲಿದೆ. ಬಳ್ಳಾರಿ ವಿಮ್ಸ್‌ನಲ್ಲಿ ಲೋಪದೋಷವಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ವಿದ್ಯುತ್‌ ಸಂಪರ್ಕ ಕಡಿತದಿಂದ ಸಾವಾಗಿದೆ ಎಂದು ವಿಪಕ್ಷ ನಾಯಕರು ಹೇಳುತ್ತಿದ್ದಾರೆ. ಆದರೆ ಉಸ್ತುವಾರಿ ಸಚಿವ ರಾಮುಲು ಉತ್ತರ ನೀಡಿದ್ದಾರೆ. ಬೇರೆ ಕಾರಣಗಳಿಂದ ಮೃತಪಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ ಎಂದರು.

ಅಂಜನಾದ್ರಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಆರ್ಕಿಟೆಕ್‌ಗಳೊಂದಿಗೆ ಚರ್ಚೆ ಮಾಡುತ್ತಿದ್ದೇವೆ. ವಿಜಯನಗರ ಕಾಲದ, ಪ್ರಾಚೀನ ಕಾಲದಲ್ಲಿ ಕಲ್ಲುಗಳಿಂದ ನಿರ್ಮಾಣ ಮಾಡಿದ ಮಾದರಿಯಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕೆನ್ನುವ ಉದ್ದೇಶವಿದೆ. ಸಿಮೆಂಟ್‌ ರಸ್ತೆ ನಿರ್ಮಾಣ ಮಾಡುವ ಬದಲಿಗೆ ಸುದೀರ್ಘ‌ ಬಾಳಕೆ ಬರುವ ಕೆಲಸ ಕೈಗೊಳ್ಳುವ ಯೋಜನೆಯಿದೆ. ಅಂಜನಾದ್ರಿ ಅಭಿವೃದ್ಧಿಗಾಗಿ ರೈತರು ಜಮೀನು ವಶಪಡಿಸಿಕೊಳ್ಳುವ ವಿಚಾರ, ರೈತರ ಮನವೊಲಿಸಿ ಅವರ ಒಪ್ಪಿಗೆ ಪಡೆದು ಜಮೀನು ಸ್ವಾಧೀನ ಪಡೆಯುತ್ತೇವೆ. ಅಲ್ಲಿ ಜಮೀನು ನೀಡಲು ರೈತರಿಗೆ ವಿರೋಧವಿಲ್ಲ. ಆದರೆ ಕೆಲವೊಂದು ಬೇಡಿಕೆಗಳು ಅವರಿಂದ ಬಂದಿವೆ. ಹೆಚ್ಚಿನ ಪರಿಹಾರ ಹಾಗೂ ಅವರನ್ನೂ ಪಾಲುದಾರರನ್ನಾಗಿ ಮಾಡಿಕೊಳ್ಳುವ ಮಾತುಗಳು ಕೇಳಿ ಬಂದಿವೆ. ವಾರದಲ್ಲಿ ಈ ಕುರಿತು ಚರ್ಚಿಸುವೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ನಡೆದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next