Advertisement
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಸರಕಾರದ ಅನುಮತಿ ಲಭಿಸಿದ ಅನಂತರ ವಾರ್ಷಿಕ 2 ಮೆ. ಟನ್ ಮೇಲ್ದರ್ಜೆಗೇರಿಸುವ ಕಚ್ಚಾ ಅದಿರು ಮತ್ತು ವಾರ್ಷಿಕ 2 ಮೆ.ಟನ್ ಅದಿರು ಉಂಡೆ ಕಟ್ಟುವ ಸ್ಥಾವರಕ್ಕೆ ಒದಗಿಸುವ ಗುರಿ ಇದೆ. ಈ ಬಗ್ಗೆ ಪರಿಸರ ಸಂರಕ್ಷಣೆ ಮತ್ತು ಅರಣ್ಯ ಇಲಾಖೆಗಳಿಗೆ ವರದಿ ಕಳುಹಿಸಲಾಗಿದೆ ಎಂದರು.
ಕೆಐಒಸಿಎಲ್‌ಗೆ ಕಚ್ಚಾವಸ್ತು ಪೂರೈಕೆ ಮತ್ತು ಮಾರುಕಟ್ಟೆ ವ್ಯವಹಾರಗಳಲ್ಲಿ ಕೈಜೋಡಿಸಿರುವ ರಾಷ್ಟ್ರೀಯ ಇಸ್ವಾತ್ ನಿಗಮದೊಂದಿಗೆ ವಾರ್ಷಿಕ 2 ಮೆ. ಟನ್ ಸಾಮರ್ಥ್ಯದ ಕಬ್ಬಿಣದ ಉಂಡೆಗಳ ಸ್ಥಾವರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಜಂಟಿ ಉದ್ದಿಮೆಯ ಕರಾರುಪತ್ರಕ್ಕೆ ಶೀಘ್ರದಲ್ಲೇ ಒಪ್ಪಂದ ಮಾಡಲಾಗುವುದು ಎಂದವರು ತಿಳಿಸಿದರು. 184.12 ಕೋ.ರೂ. ಲಾಭ
22.4 ಲಕ್ಷ ಟನ್ ಉಂಡೆ ಕಬ್ಬಿಣದ ಉತ್ಪಾದನೆ ಮಾಡಿ 22.1 ಲಕ್ಷ ಟನ್‌ಗಳನ್ನು ಮಾರುಕಟ್ಟೆಗೆ ರವಾನಿಸಿದೆ. ಆ ಮೂಲಕ ನಿರೀಕ್ಷಿತ ಗುರಿಯಲ್ಲಿ ಮೇಲುಗೈ ಸಾಧಿಸಲಾಗಿದೆ. ವಿತ್ತೀಯ ವರ್ಷದಲ್ಲಿ 184.12 ಕೋಟಿ ರೂ.ಗಳಷ್ಟು ಲಾಭ ಗಳಿಸಿದ್ದು, ಶೇ. 114ರಷ್ಟು ಹೆಚ್ಚಿನ ಗುರಿ ಸಾಧಿಸಲಾಗಿದೆ ಎಂದವರು
ವಿವರಿಸಿದರು.
Related Articles
ಕಿರಂದೂಲ್- ಬಚೇಲಿಯಿಂದ ಕಚ್ಚಾ ಕಬ್ಬಿಣದ ಅದಿರು ಸಾಗಾಟ ವೆಚ್ಚ ಹೆಚ್ಚಾದರೂ ಕಂಪೆನಿ ಉತ್ತಮ ಲಾಭಾಂಶ ಪಡೆದಿದೆ. ಜಾಗತಿಕವಾಗಿ ಜಪಾನ್, ಕೊರಿಯಾ, ಮಲೇಷ್ಯಾ, ಚೀನಗಳಲ್ಲಿ ಸ್ಥಿರ ಮಾರುಕಟ್ಟೆಗಳನ್ನು ವಿಸ್ತರಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರ ಆಶಯದಂತೆ ಪ್ರಸ್ತುತ ಕೆಐಒಸಿಎಲ್ ಬ್ರಿಟಿಶ್ ಮಾರುಕಟ್ಟೆಯನ್ನೂ ಪ್ರವೇಶಿಸಿದೆ ಎಂದು ಸುಬ್ಬರಾವ್ ತಿಳಿಸಿದರು. ಮುಂದಿನ 3 ವರ್ಷಗಳಲ್ಲಿ ಸುಮಾರು 3,500 ಕೋಟಿ ರೂ. ಬಂಡವಾಳದೊಂದಿಗೆ ಹೊಸ ವ್ಯಾಪಾರ ವಲಯ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದರು.
Advertisement
ಜಿಎಂ (ಪ್ರಭಾರ) ರಾಕ್ ಡಿ’ಸೋಜಾ, ಕೆಐಒಸಿಎಲ್ ಮ್ಯಾನೇಜರ್ (ಎಚ್‌ಆರ್ ಮತ್ತು ಆಡಳಿತ) ಮುರುಗೇಶ್ ಉಪಸ್ಥಿತರಿದ್ದರು.
ಸುಮಾರು 2 ಲಕ್ಷ ಟನ್ ಸಾಮರ್ಥ್ಯದ ಡಕ್ಟೆ„ಲ್ ಐಯರ್ನ್ ಸ್ಪನ್ ಪೈಪ್ (ಡಿಐಎಸ್‌ಪಿ) ಸ್ಥಾವರ ಮತ್ತು 1.8 ಲಕ್ಷ ಟನ್ ಉತ್ಪಾದನ ಸಾಮರ್ಥ್ಯದ ಕೋಕ್ ಓವನ್ ಸ್ಥಾವರ ಸ್ಥಾಪನೆಗೆ ಸಂಬಂಧಿಸಿದ ಕೆಲಸಗಳನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಲಾಗುವುದು. ಅಲ್ಲದೆ, 10 ಮೆ.ವ್ಯಾ. ಸಾಮರ್ಥ್ಯದ ವಿದ್ಯುತ್ಛಕ್ತಿ ಉತ್ಪಾದನ ಘಟಕವನ್ನೂ ಸ್ಥಾಪಿಸುವ ಉದ್ದೇಶವಿದೆ. ಇವೆಲ್ಲವೂ ಆರಂಭವಾದರೆ 500ರಷ್ಟು ಉದ್ಯೋಗಗಳು ಸೃಷ್ಟಿಯಾಗಲಿವೆ. ಪರಿಸರ ಸಂರಕ್ಷಣ ಇಲಾಖೆಯವರು ಈ ಎಲ್ಲ ಉದ್ದೇಶಿತ ಸ್ಥಾವರಗಳ ಅಧ್ಯಯನ ವರದಿಯನ್ನು ಕೆಎಸ್‌ಪಿಸಿಬಿಗೆ ಸಲ್ಲಿಸಿದ್ದು, ಅಕ್ಟೋಬರ್ 2ನೇ ವಾರದಲ್ಲಿ ಸಾರ್ವಜನಿಕ ವಿಚಾರಣೆ ನಡೆಯಲಿದೆ.– ಎಂ.ವಿ. ಸುಬ್ಬರಾವ್ ಸಿಎಂಡಿ, ಕೆಐಒಸಿಎಲ್